ವಾಹನಗಳಲ್ಲಿ ಹೈ ಬೀಮ್ ಲೈಟ್ ಅಳವಡಿಕೆ ವಿರುದ್ಧ ಪುತ್ತೂರು ಸಂಚಾರ ಪೊಲೀಸರಿಂದ ಕಾರ್ಯಾಚರಣೆ

0

ಪುತ್ತೂರು:ವಾಹನಗಳಿಗೆ ಬೇಕಾಬಿಟ್ಟಿ ಎಕ್ಸ್‌ಟ್ರಾ ಲೈಟ್ ಅಳವಡಿಸಿಕೊಂಡು ಚಲಾಯಿಸುವ ಚಾಲಕರು ಇನ್ನು ಮುಂದೆ ಎಚ್ಚರ ವಹಿಸಬೇಕಿದೆ.ಹೈ ಬೀಮ್ ಲೈಟ್ ಉಪಯೋಗಿಸುತ್ತಿರುವ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.ಪುತ್ತೂರು ಸಂಚಾರ ಪೊಲೀಸರು ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದಾರೆ.


ರಾತ್ರಿ ವೇಳೆ ಹೈ ಬೀಮ್ ಲೈಟ್ ಉಪಯೋಗದಿಂದ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನಿಯಮ ಬಾಹಿರವಾಗಿ ವಾಹನಗಳಿಗೆ ಎಲ್‌ಇಡಿ ದೀಪಗಳನ್ನು ಅಳವಡಿಸಿರುವವರ ವಿರುದ್ಧ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ.ಎಲ್‌ಇಡಿ ಲೈಟ್‌ಗಳು ವಿಪರೀತ ಪ್ರಕಾಶಮಾನವಾಗಿರುವುದರಿಂದ, ಎದುರಿನಿಂದ ಬರುವ ವಾಹನ ಸವಾರರಿಗೆ ಸಮಸ್ಯೆಯಾಗಿ ರಸ್ತೆ ಅಪಘಾತಕ್ಕೆ ಕಾರಣವಾಗುತ್ತಿದೆ.ಈ ರೀತಿ ಎಲ್‌ಇಡಿ ಲೈಟ್‌ಗಳನ್ನು ಹಾಕಿಸಿಕೊಂಡಿರುವ ವಾಹನ ಸವಾರರನ್ನು ಗುರುತಿಸಿ, ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.ಅಕ್ರಮ ಎಲ್‌ಇಡಿ ದೀಪಗಳನ್ನು ಹೊಂದಿದ ವಾಹನಗಳ ಮಾಲೀಕರನ್ನು ಗುರುತಿಸಲು ಮತ್ತು ದಂಡ ವಿಧಿಸಲು ಟ್ರಾಫಿಕ್ ಪೊಲೀಸರು ಜುಲೈನಿಂದ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದ್ದು, ಭಾರತೀಯ ಮೋಟಾರು ವಾಹನಗಳ ಕಾಯಿದೆಯಡಿ ಪ್ರಕರಣ ದಾಖಲಿಸುತ್ತಿದ್ದಾರೆ. ಪುತ್ತೂರಿನಲ್ಲಿ ಈ ರೀತಿ ಅಕ್ರಮ ಎಲ್‌ಇಡಿ ದೀಪಗಳನ್ನು ಅಳವಡಿಸಿಕೊಂಡಿರುವ ಅನೇಕ ವಾಹನಗಳನ್ನು ಪತ್ತೆ ಮಾಡಿ ಮಾಲಕರಿಗೆ ತಿಳುವಳಿಕೆ ನೀಡಿ, ಅಕ್ರಮ ಎಲ್‌ಇಡಿ ಬಲ್ಬ್‌ಗಳ ತೆರವಿಗೆ ಸೂಚನೆ ನೀಡಲಾಗಿದೆ. ಮುಂದೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪುತ್ತೂರು ಸಂಚಾರ ಪೊಲೀಸ್ ಠಾಣೆ ಎಸ್.ಐ ಉದಯರವಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here