ಶಾಂತಿನಗರ ಅಂಗನವಾಡಿ ಕೇಂದ್ರದ ಸಹಾಯಕಿ ಸರೋಜಿನಿರವರಿಗೆ ಬೀಳ್ಕೊಡುಗೆ

0

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಶಾಂತಿನಗರ ಅಂಗನವಾಡಿ ಕೇಂದ್ರದಲ್ಲಿ ಕಳೆದ 33 ವರ್ಷಗಳಿಂದ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸರೋಜಿನಿ ಸೇಸಪ್ಪ ಪೂಜಾರಿ ಕಾರ್ನೋಜಿರವರನ್ನು ಬೀಳ್ಕೊಡುವ ಸಮಾರಂಭ ಶಾಂತಿನಗರ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಗ್ರಾ.ಪಂ.ಅಧ್ಯಕ್ಷ ಕೆ.ರಾಮಚಂದ್ರ ಪೂಜಾರಿ ಶಾಂತಿನಗರ, ಸದಸ್ಯರಾದ ಮೋಹಿನಿ ಜನಾರ್ದನ ಗೌಡ ಕೋಡಿ, ವಿಶ್ವನಾಥ ಕೃಷ್ಣಗಿರಿ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಪ್ರಿಯಾ ರಮೇಶ್ ಗೌಡ ಶಾಂತಿನಗರ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮೋಹನ್ ಪಕ್ಕಳ ಕುಂಡಾಪು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಲಯ ಮೇಲ್ವಿಚಾರಕಿ ಸುಜಾತಾ, ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲು, ಬಿಜೆಪಿ ಬೂತ್ ಅಧ್ಯಕ್ಷ ಜನಾರ್ದನ ಗೌಡ ಕೋಡಿ, ರಮೇಶ್ ಗೌಡ ಶಾಂತಿನಗರ, ಅಬೂಬಕ್ಕರ್ ಸಿದ್ದೀಕ್, ಸೇಸಪ್ಪ ಪೂಜಾರಿ ಕಾರ್ನೋಜಿ, ಆಶಾ ಕಾರ್ಯಕರ್ತೆಯರಾದ ಮಮತಾ, ಪವಿತ್ರಾ, ಮೋಹಿನಿ, ಸುಪ್ರಿತಾ, ಅಂಗನವಾಡಿ ಕಾರ್ಯಕರ್ತೆಯರಾದ ಸುಮಲತಾ ಕೋಡಿಂಬಾಡಿ, ಮಲ್ಲಿಕಾ ಎಸ್. ಆಳ್ವ ಬೆಳ್ಳಿಪ್ಪಾಡಿ ಮತ್ತಿತರರು ಭಾಗವಹಿಸಿದ್ದರು. ವೇದಾವತಿ, ಸತ್ಯವತಿ ಮತ್ತು ನೀತಾ ಅನಿಸಿಕೆ ವ್ಯಕ್ತಪಡಿಸಿದರು. ಸ್ತ್ರೀಶಕ್ತಿ ಸಂಘ ಮತ್ತು ಪೋಷಕರ ವತಿಯಿಂದ ನಿವೃತ್ತಿ ಹೊಂದಿದ ಸರೋಜಿನಿರವರಿಗೆ ಚಿನ್ನದ ಉಂಗುರ, ಶಾಲು, ಫಲಪುಷ್ಪ ನೀಡಿ ಗೌರವಿಸಲಾಯಿತು. ಲಘು ಉಪಾಹಾರದ ವ್ಯವಸ್ಥೆಯನ್ನು ಸ್ತ್ರೀಶಕ್ತಿ ಸಂಘದಿಂದ ಮಾಡಲಾಗಿತ್ತು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮೀನಾಕ್ಷಿ ರಮೇಶ್ ಗೌಡ ಬೇರಿಕೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here