ಉಪ್ಪಿನಂಗಡಿ: ರಸ್ತೆ ಬದಿಯಲ್ಲಿ ಅನಧಿಕೃತ ವ್ಯಾಪಾರ ಪಂಚಾಯಿತಿ ಕಾರ‍್ಯಾಚರಣೆ, 6 ವಾಹನ ವಶಕ್ಕೆ

0


ಉಪ್ಪಿನಂಗಡಿ: ಇಲ್ಲಿನ ಪೇಟೆಯೊಳಗೆ ಇಕ್ಕಟ್ಟಾದ ರಸ್ತೆ ಬದಿಯಲ್ಲಿ ಸಾರ್ವಜನಿಕರಿಗೆ ಮತ್ತು ಪಾದಾಚಾರಿಗಳಿಗೆ ತೊಂದರೆ ಉಂಟು ಮಾಡುವ ರೀತಿಯಲ್ಲಿ ಟೆಂಪೋ ವಾಹನವನ್ನು ನಿಲ್ಲಿಸಿಕೊಂಡು ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದ ಬಗೆಗಿನ ಸಾರ್ವಜನಿಕ ದೂರಿನ ಮೇರೆಗೆ ಗ್ರಾಮ ಪಂಚಾಯಿತಿ ಕಾರ‍್ಯಾಚರಣೆ ನಡೆಸಿ 6 ವಾಹನವನ್ನು ವಶಕ್ಕೆ ಪಡೆದುಕೊಂಡಿದೆ.

ಇಲ್ಲಿನ ಬ್ಯಾಂಕ್ ರಸ್ತೆ ಹಾಗೂ ಇತರೆಡೆ ರಿಕ್ಷಾ ಟೆಂಪೋಗಳ ಮೂಲಕ ಅನಧಿಕೃತವಾಗಿ ಹಣ್ಣು ಹಂಪಲು ಇತ್ಯಾದಿ ವ್ಯಾಪಾರ ನಡೆಸುತ್ತಿರುವುದರ ವಿರುದ್ಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಹಾಗೂ ಸಿಬ್ಬಂದಿಗಳು ಹಠಾತ್ ಕಾರ‍್ಯಾಚರಣೆ ನಡೆಸಿ ೬ ವಾಹನಗಳನ್ನು ವಶಕ್ಕೆ ಪಡೆದುಕೋಮಡಿದ್ದಾರೆ.

ಪೇಟೆಯೊಳಗೆ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸಿ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವ್ಯಾಪಾರ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದರು. ಅದರಂತೆ ಸಾಮಾನ್ಯ ಸಭೆಯಲ್ಲಿ ಇದರ ತೆರವು ಬಗ್ಗೆ ನಿರ್ಣಯ ಅಂಗೀಕರಿಸಲಾಗಿತ್ತು. ಅದರಂತೆ ಆ. ೨೨ರಂದು ಗ್ರಾಮ ಪಂಚಾಯಿತಿ ಉಪ್ಪಿನಂಗಡಿ ಪೊಲೀಸರ ರಕ್ಷಣೆಯಲ್ಲಿ ಸ್ಥಳಕ್ಕೆ ತೆರಳಿ ಕಾರ‍್ಯಾಚರಣೆ ನಡೆಸಿ ಸ್ವಾಧೀನ ಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here