ಪುಣ್ಚಪ್ಪಾಡಿ  ಶಾಲೆಯ ಕನಸಿನ ಕಲಿಕೆಗೆ ಸಂಭ್ರಮದ ಚಾಲನೆ

0

  • ಸರಕಾರಿ ಶಾಲೆಗಳು ಮಕ್ಕಳ ಕಲಿಕೆಗೆ ವಿಶೇಷವಾದ ಅವಕಾಶ ನೀಡುತ್ತಿದೆ : ಲೋಕೇಶ್ ಸಿ. ಕ್ಷೇತ್ರ ಶಿಕ್ಷಣಾಧಿಕಾರಿ ಪುತ್ತೂರು
ಸವಣೂರು :  ಸರಕಾರಿ ಶಾಲೆಗಳು ಮಕ್ಕಳ ಕಲಿಕೆಗೆ ವಿಶೇಷವಾದ ಅವಕಾಶ ನೀಡುತ್ತಿವೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಹೇಳಿದರು.
 ಅವರು ಕರ್ನಾಟಕ ಸರಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪ್ಪಾಡಿ ಇಲ್ಲಿ ನಡೆಯುತ್ತಿರುವ ಕನಸಿನ ಕಲಿಕೆ ಎಂಬ ವಿಶೇಷ ಮಕ್ಕಳ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಕ್ಕಳಿಗೆಂದು ವಿಶೇಷವಾದ ಕಲಿಕೆಯ ಅವಕಾಶಗಳನ್ನು ನೀಡಬೇಕಾಗಿದೆ ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳು ಬಹಳಷ್ಟು ಕೆಲಸಗಳನ್ನು ಮಾಡುತ್ತಿದೆ ಪುಣ್ಚಪ್ಪಾಡಿ ಶಾಲೆಯ ಈ ಕನಸಿನ ಕಲಿಕೆ ಮಕ್ಕಳ ಶಿಬಿರವು ನಿಜಕ್ಕೂ ಅರ್ಥಪೂರ್ಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೀವಿ ಶೆಟ್ಟಿ ಮಾತನಾಡಿ ಚಂದದ ಕುಟೀರ ನಿರ್ಮಾಣದೊಂದಿಗೆ ಮಕ್ಕಳ ಶಿಬಿರ  ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿಯಾಗಿದ್ದು ಎಸ್.ಡಿ.ಎಂ.ಸಿ., ಪೋಷಕರು, ಶಿಕ್ಷಕರ ಪರಿಶ್ರಮ ಇಲ್ಲಿ ಒಗ್ಗೂಡಿ ಯಶಸ್ವಿ ಶಿಬಿರಕ್ಕೆ ದಾರಿಯಾಗಿದೆ ಎಂದರು.
ಹಿರಿಯರಾದ ಪಿ. ಡಿ ಗಂಗಾಧರ ರೈ ಅವರು ಮಾತನಾಡಿ ಪುಣ್ಚಪ್ಪಾಡಿ ಗ್ರಾಮೀಣ ಪ್ರದೇಶದ ಶಾಲೆಯು ಯಶಸ್ವಿಯಾಗಿ ಕಲಿಕಾ ಪೂರಕವಾದ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.
ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ ಮಾತನಾಡಿ ಸಾಗರದಂತಿರುವ ಶಿಬಿರದಿಂದ ನಾವು ಹಲವು ವಿಚಾರಗಳನ್ನು ಕಲಿತುಕೊಂಡು ಅಳವಡಿಸಿಕೊಳ್ಳಬೇಕು ಎಂದರು.
ಸವಣೂರು ಗ್ರಾ. ಪಂ. ಸದಸ್ಯ ಗಿರಿಶಂಕರ ಸುಲಾಯ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಉತ್ತಮ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿದೆ. ಹಾಗಾಗಿ ಇಂತಹ ಶಿಬಿರಗಳ ಮೂಲಕ ಶೈಕ್ಷಣಿಕ ಜಾಗೃತಿಯನ್ನು ಬೆಳೆಸಬೇಕು ಎಂದರು.
ದಾನಿಗಳಾದ ವಿವೇಕ್ ಆಳ್ವ ನಡುಮನೆ ಮಾತನಾಡಿ ಸರ್ಕಾರಿ ಶಾಲೆಗಳನ್ನು ಊರವರೆಲ್ಲರೂ ಒಗ್ಗೂಡಿ ಇನ್ನಷ್ಟು ಅಭಿವೃದ್ಧಿ ಪಡಿಸಬೇಕು. ಪುಣ್ಚಪ್ಪಾಡಿ ಶಾಲೆಯ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದರು.
ಪಂಚಾಯತ್ ಸದಸ್ಯರಾದ ಜಯಶ್ರೀ ಕುಚ್ಚೆಜಾಲು, ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್ , ಸವಣೂರು ಸಿ.ಆರ್.ಪಿ. ಕುಶಾಲಪ್ಪ ಬಿ., ಸಂಪನ್ಮೂಲ ವ್ಯಕ್ತಿ ಮೌನೇಶ್ ವಿಶ್ವಕರ್ಮ, ಮಾಜಿ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಉಮಾಶಂಕರ ಗೌಡ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಗಾಯತ್ರಿ ಓಂತಿಮನೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ದಾನಿಗಳಾದ ಅಭಿನವ್ ತಂತ್ರಧ್ಯಾನ್ (ಪ್ರೈ)ಲಿ. ಇವರು ಶಾಲೆಗೆ ನೀಡಿದ ಸ್ಮಾರ್ಟ್ ಟಿ.ವಿ.,  ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ದಿ.ಕುಮಾರ್ ಕೆ ಇವರ ಸ್ಮರಣಾರ್ಥ ಇವರ ಮಕ್ಕಳು ನೀಡಿದ ಕವಾಟುಗಳು, ಗ್ರಾಮ ಪಂಚಾಯತ್ ಸವಣೂರು ವತಿಯಿಂದ ನೀಡಲಾದ ವಿಶೇಷ ಶೌಚಾಲಯ, ಸೈಕಲ್ ಸ್ಟ್ಯಾಂಡ್ ಗಳ ಶಾಲಾರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದಾನಿಗಳಾದ ವಿವೇಕ್ ಆಳ್ವ ನಡುಮನೆ ಹಾಗೂ ಪಂಚಾಯತ್ ತಂಡವನ್ನು ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಊರವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪದವೀಧರ ಶಿಕ್ಷಕಿ ಫ್ಲಾವಿಯ ಸ್ವಾಗತಿಸಿ, ಪದವೀಧರ ಶಿಕ್ಷಕಿ ಶೋಭಾ ಕೆ ವಂದಿಸಿದರು. ಮುಖ್ಯಗುರು ರಶ್ಮಿತಾ ನರಿಮೊಗರು ಮತ್ತು ಅತಿಥಿ ಶಿಕ್ಷಕಿ ಚಂದ್ರಿಕಾ ಎಸ್. ನಿರ್ವಹಿಸಿದರು.
ಶಾಲೆಯಂಗಳದಲ್ಲಿ ಮಕ್ಕಳ ಹೆತ್ತವರು, ಹಿರಿಯ ವಿದ್ಯಾರ್ಥಿಗಳು ಸೀರೆಗಳಿಂದ ನಿರ್ಮಿಸಿದ ಕುಟೀರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅತಿಥಿಗಳು ಬಣ್ಣಗಳಿಂದ ‘ಕನಸಿನ ಕಲಿಕೆ 2022’ ಅಕ್ಷರ ಬರೆದು ಕಾರ್ಯಕ್ರಮವನ್ನು ವಿನೂತನವಾಗಿ ಆರಂಭಿಸಿದರು. ಕಾರ್ಯಕ್ರಮದ ನಂತರ ಮೌನೇಶ್ ವಿಶ್ವಕರ್ಮ ಹಾಡು ನಾಟಕದ ಕುರಿತು ತರಬೇತಿ ನಡೆಸಿದರು.

LEAVE A REPLY

Please enter your comment!
Please enter your name here