ಪುತ್ತೂರು : ತುಕಾರಾಮ ಬಾಯಾರ್ ನಿರ್ಮಾಣದ ವರುಣ್ ಕುಮಾರ್ ಎಚ್. ನಿರ್ದೇಶನದ ವಿಭಿನ್ನ ಕಥಾ ಹಂದರದ ಎಟಿಎಮ್ ಕಿರುಚಿತ್ರ ಡೈಜಿವರ್ಲ್ಡ್ ಚಾನೆಲ್‌ನಲ್ಲಿ ಆ.31ರಂದು ರಾತ್ರಿ 8.30ಕ್ಕೆ ಪ್ರಸಾರಗೊಳ್ಳಲಿದೆ.
ಈ ಚಿತ್ರದ ಕಥೆ, ನಿರ್ಮಾಣ ತುಕಾರಾಮ ಬಾಯಾರ್, ಸಂಭಾಷಣೆ ಗಗನ್ ಎಮ್, ನಿರ್ದೇಶನ ವರುಣ್ ಕುಮಾರ್ ಎಚ್., ಹಾಗೂ ರಾಧಾಕೃಷ್ಣ ಕುಂಬ್ಲೆ, ಮೋಕ್ಷಿತ್ ಶೆಟ್ಟಿ, ವರ್ಷ ಸಿ. ಮನೋಜ್, ಕಿರಣ್ ಆಚಾರ್ಯ, ಜಯರಾಮ್ ಆಚಾರ್ಯ, ಜ್ಯೋತಿ ಪ್ರಕಾಶ್ ಶೆಟ್ಟಿ, ವಿಜೇಶ್ ಬಿಕೆ ರೈ, ದಿವಾಕರ್ ಉಪ್ಪಳ, ಅರುಣ್ ಪ್ರಕಾಶ್ ರಾಜ್, ಸಂದೇಶ್ ಆಚಾರ್ಯ, ರಜನಿ ಚಂದ್ರಹಾಸರವರು ಅಭಿನಯಿಸಿದ್ದಾರೆ. ಈ ಕಿರುಚಿತ್ರ ಬೀಟಾ ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿತ್ತು.