ಪುತ್ತೂರು: ಜು.೨೬ರಂದು ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಪ್ರವೀಣ್ ನೆಟ್ಟಾರು ಪ್ರಕರಣದ ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಕೆಲಸ ಮಾಡಿದ ಪೊಲೀಸರಿಗೆ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಅವರು ಪ್ರಶಂಸನಾ ಪತ್ರವನ್ನು ಹಾಗೂ ಡಿಜಿ ನೀಡಿದ ರೂ. ಹತ್ತು ಲಕ್ಷ ಬಹುಮಾನದ ಮೊತ್ತವನ್ನು ಪ್ರಕರಣ ಭೇದಿಸುವಲ್ಲಿ ಕಾರ್ಯಪ್ರವೃತ್ತರಾದ ಒಟ್ಟು ೮೨ಜನರಿಗೆ ಹಂಚಿಕೆ ಮಾಡಿದ್ದರು. ಆ.೨೩ರಂದ ಪುತ್ತೂರು ಪೊಲೀಸರಿಗೆ ಪ್ರಶಂಸನಾ ಪತ್ರ ನೀಡಲಾಯಿತು.
ಆ.೨೨ರಂದು ಪುತ್ತೂರಿನಲ್ಲಿ ಕಾಂಗ್ರೆಸ್ ನಡಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪುತ್ತೂರು ಪೊಲೀಸರು ಬಂದೋಬಸ್ತ್‌ನಲ್ಲಿ ತೊಡಗಿದ್ದರಿಂದ ಪ್ರಶಂಸನಾ ಪತ್ರವನ್ನು ಪಡೆಯಲು ಮಂಗಳೂರಿಗೆ ತೆರಳದ ಕಾರಣ ಆ.೨೩ರಂದು ಎಸ್ ಪಿ ಋಷಿಕೇಶ್ ಸೋನಾವಣೆಯವರಿಂದ ಪ್ರಶಂಸನಾ ಪತ್ರವನ್ನು ಪಡೆದರು. ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್, ಎಸ್.ಐ ಶ್ರೀಕಾಂತ್, ರಾಜೇಶ್ ಕೆ.ವಿ, ಸಂಚಾರ ಪೊಲೀಸ್ ಠಾಣೆಯ ಎಸ್.ಐಗಳಾದ ರಾಮ ನಾಯ್ಕ್, ಕುಟ್ಟಿ ಎಮ್.ಕೆ, ಎ.ಎಸ್.ಐ ಚಂದ್ರ, ಹೆಡ್‌ಕಾನ್‌ಸ್ಟೇಬಲ್‌ಗಳಾದ ಜಗದೀಶ್, ಸ್ಕರೀಯ, ಉದಯ, ವಿನೋದ್, ಶಿವಪ್ರಸಾದ್, ಕಾನ್‌ಸ್ಟೇಬಲ್‌ಗಳಾದ ಕಿರಣ್, ಗವಿಸಿದ್ದಪ್ಪ, ಶ್ರೀಶೈಲ, ಭಿಮ್‌ಸೇನಾ, ಕುಮಾರ್ ಅವರಿಗೆ ಪ್ರಶಂಸನಾ ಪತ್ರ ನೀಡಲಾಯಿತು.