ಲಂಚ ರಹಿತ ಉತ್ತಮ ಸೇವೆ ನೀಡುವ ಅಧಿಕಾರಿಗಳ ಬ್ಯಾನರ್‌ಗಳನ್ನು ಅಲ್ಲಲ್ಲಿ ಅಳವಡಿಸಿರಿ

0

ಧ್ವಜಗಳನ್ನು ಲಂಚಕೋರ ಇ ಲಾಖೆಗಳ ಮುಂದೆ ಸ್ಥಾಪಿಸಿ, ಲಂಚ, ಭ್ರಷ್ಟಾಚಾರಕ್ಕೆ ಮುಕ್ತಿ ನೀಡಿರಿ

ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರೇ ಮತ್ತು ಜನ ಸಾಮಾನ್ಯರೇ… ಸಾವರ್ಕರ್, ಟಿಪ್ಪು, ಮೊಟ್ಟೆ ಎಸೆತ ವಿವಾದದ ವಿಷಯಗಳನ್ನು ಬದಿಗಿಡಿ. ಮುನ್ನುಗ್ಗುವ, ತಡೆಯುವ ಸಾಧನೆಯನ್ನು, ಧ್ವಜಗಳಿಗೆ ಬೆಂಕಿ ಹಾಕುವ ಶಕ್ತಿಯನ್ನು ಲಂಚಕೋರರ, ಭ್ರಷ್ಟಾಚಾರಿಗಳ ಎದುರು ಪ್ರದರ್ಶಿಸಿರಿ. ಲಂಚ, ಭ್ರಷ್ಟಾಚಾರಕ್ಕೆ ಬೆಂಕಿ ಹಾಕಲು ಉಪಯೋಗಿಸಿರಿ. ಧ್ವಜಗಳ ಹಾಕುವಿಕೆಯನ್ನು ಲಂಚಕೋರ ಇಲಾಖೆಗಳ ಮುಂದೆ ಸ್ಥಾಪಿಸಿ, ಲಂಚಕೋರರಿಗೆ ನಡುಕ ಹುಟ್ಟಿಸಿ, ಜನರಿಗೆ ಲಂಚ, ಭ್ರಷ್ಟಾಚಾರ ಮುಕ್ತ ಸೇವೆ ಸಿಗುವಂತೆ ಮಾಡಿರಿ. ಲಂಚ ರಹಿತ ಉತ್ತಮ ಸೇವೆ ನೀಡುವ ಅಧಿಕಾರಿಗಳ ಬ್ಯಾನರ್‌ಗಳನ್ನು ಅಲ್ಲಲ್ಲಿ ಅಳವಡಿಸಿರಿ. ಆ ಮೂಲಕ ಅವರಿಗೆ ಪ್ರೋತ್ಸಾಹ ನೀಡಿ ಊರಿನ ಅಭಿವೃದ್ಧಿಗೆ ಕಾರಣರಾಗಿರಿ. ಓಟಿನ ರಾಜಕೀಯಕ್ಕೆ ಬಲಿಯಾಗಿ ಪರಸ್ಪರ ಹೊಡೆದಾಡಿಕೊಂಡು, ದ್ವೇಷ ಸಾಧಿಸಿಕೊಂಡು ಜೀವ, ಜೀವನ ಕಳೆದುಕೊಳ್ಳಬೇಡಿ. ನೀವು ರಾಜರುಗಳಾಗಿರಿ, ಗುಲಾಮರಾಗಬೇಡಿ. ನಿಮ್ಮ ನಾಯಕರು, ಜನಪ್ರತಿನಿಽಗಳು ರಾಜರುಗಳಾಗದೆ ಊರಿನ ಅಭಿವೃದ್ಧಿಗೆ ಜನರ ಕೆಲಸ ಮಾಡುವ ಜನಪ್ರತಿನಿಽಗಳಾಗುವಂತೆ ನೋಡಿಕೊಳ್ಳಿ. ಅದನ್ನೇ ದೇಶ ಸೇವೆ ಮತ್ತು ಜನಸೇವೆ ಎಂದು ಪರಿಗಣಿಸಿ ಜನರ ನೈಜ ಸ್ವಾತಂತ್ರ್ಯಕ್ಕೆ ಕಾರಣರಾಗಿರಿ ಎಂಬ ಕರೆಯನ್ನು ಅತ್ಯಂತ ಕಳಕಳಿಯಿಂದ ನೀಡುತ್ತಿದ್ದೇನೆ.

-ಸಂ. ಡಾ. ಯು.ಪಿ ಶಿವಾನಂದ

 

LEAVE A REPLY

Please enter your comment!
Please enter your name here