ಉಪ್ಪಿನಂಗಡಿ: ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘವು 2021-22ನೇ ಸಾಲಿನಲ್ಲಿ ಹಾಲು, ಪಶು ಆಹಾರ ಸೇರಿದಂತೆ ಎಲ್ಲಾ ವ್ಯವಹಾರಗಳಿಂದ ಒಟ್ಟು 9,10,037.40 ರೂ. ನಿವ್ವಳ ಲಾಭ ಗಳಿಸಿದ್ದು, ಅಡಿಟ್ ವರ್ಗೀಕರಣದಲ್ಲಿ `ಎ’ ಗ್ರೇಡ್ ಅನ್ನು ಪಡೆದಿದೆ. ಬಂದ ಲಾಭಾಂಶದಲ್ಲಿ ಶೇ.15ನ್ನು ಡಿವಿಡೆಂಟು ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜಗದೀಶ ರಾವ್ ಮಣಿಕ್ಕಳ ತಿಳಿಸಿದರು.
ಸಂಘದ ಸಭಾಭವನದಲ್ಲಿ ನಡೆದ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ವರ್ಷದಲ್ಲಿ 2,06,49,519.59 ರೂಪಾಯಿ ಮೌಲ್ಯದ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದ್ದು, ಸ್ಥಳೀಯವಾಗಿ 4,72,878ರೂ. ಮೌಲ್ಯದ ಹಾಲನ್ನು ಮಾರಾಟ ಮಾಡಲಾಗಿದೆ. ಒಟ್ಟು ಹಾಲಿನ ವ್ಯಾಪಾರದಿಂದ 16,89,630.97 ರೂ. ಲಾಭ ಬಂದಿದೆ. ಪಶು ಆಹಾರ, ಲವಣ ಮಿಶ್ರಣ ಮಾರಾಟ, ಗೋಧಾರ ಶಕ್ತಿ ಪೌಡರ್ ಮಾರಾಟದಿಂದ 24,770 ರೂ. ಲಾಭ ಬಂದಿದೆ. ಇತರೆ ಆದಾಯದಿಂದ 2,85,764,.15 ಲಾಭ ಬಂದಿದ್ದು, ಹೀಗೆ ಎಲ್ಲಾ ಒಟ್ಟು ವ್ಯವಹಾರದಿಂದ 9,10,037.40 ನಿವ್ವಳ ಲಾಭ ಬಂದಿರುತ್ತದೆ. ಬಂದ ಲಾಭಾಂಶದಲ್ಲಿ ಶೇ.15 ಡಿವಿಡೆಂಟು ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ವರ್ಷಾಂತ್ಯಕ್ಕೆ ಒಟ್ಟು 471 ಸದಸ್ಯರಿದ್ದಾರೆ. ವರ್ಷಾಂತ್ಯಕ್ಕೆ ಸಂಘದ ಒಟ್ಟು ಪಾಲು ಬಂಡವಾಳ 88,420 ಆಗಿದೆ. ಸಂಘವು ವರ್ಷಾನುವರ್ಷ ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದು, ಇದಕ್ಕೆ ಉತ್ತಮ ಗುಣಮಟ್ಟದ ಹಾಲು ಪೂರೈಸಿ ಸಂಘವು ಹೆಚ್ಚು ಲಾಭಗಳಿಸಲು ಕಾರಣಕರ್ತರರ್ತರಾದ ಜಾನುವಾರು ಹಾಲು ಉತ್ಪಾದಕ ಸದಸ್ಯರಿಗೆ, ಆಡಳಿತ ಮಂಡಳಿಯ ಸದಸ್ಯರಿಗೆ ಹಾಗೂ ಸೇವಾ ಮನೋಭಾವನೆಯಿಂದ ದುಡಿದ ಸಿಬ್ಬಂದಿಗೆ ಜಗದೀಶ ರಾವ್ ಧನ್ಯವಾದ ತಿಳಿಸಿದರು.
ಕೆಎಂಎಫ್‌ನ ವಿಸ್ತರಣಾಧಿಕಾರಿ ಶ್ರೀಮತಿ ಮಾಲತಿ, ಒಕ್ಕೂಟದಿಂದ ಸಿಗುವ ಸವಲತ್ತುಗಳ ಬಗ್ಗೆ ವಿವರಿಸಿದರು. ವರದಿ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲೂ ಪೂರೈಕೆ ಮಾಡಿದ ಸದಸ್ಯರಾದ ವಾಸಪ್ಪ ಪೂಜಾರಿ ಖಂಡಿಗ (ಪ್ರಥಮ), ವಸಂತ ಕುಂಟಿನಿ (ದ್ವಿತೀಯ), ಸದಾನಂದ ಶೆಟ್ಟಿ ಕಿಂಡೋವು (ತೃತೀಯ) ಅವರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಕಳೆದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ವೋದಯ ಪ್ರೌಢಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಚೇತನಾ ಕೆ. ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಶೀನಪ್ಪ ಗೌಡ, ನಿರ್ದೇಶಕರಾದ ಜಯಂತ ಪೊರೋಳಿ, ಸತೀಶ ರಾವ್, ಪ್ರಶಾಂತ, ಈಶ್ವರ ನಾಯಕ್, ದೇರಣ್ಣ ಗೌಡ, ಸುಮತಿ, ವನಿತಾ, ಬಾಲಚಂದ್ರ ಕೆ., ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಸದಸ್ಯ ಗಂಗಾಧರ ಪ್ರಾರ್ಥಿಸಿದರು. ಕಾರ್ಯದರ್ಶಿ ಶ್ರೀಮತಿ ಮಧುಷಾ ವರದಿ ಮಂಡಿಸಿದರು. ಸಿಬ್ಬಂದಿಗಳಾದ ಗಣೇಶ ಕಿಂಡೋವು ಸ್ವಾಗತಿಸಿ, ವಂದಿಸಿದರು. ಸುರೇಶ್ ಗೌಂಡತ್ತಿಗೆ ಕಾರ್ಯಕ್ರಮ ನಿರೂಪಿಸಿದರು. ಚೆನ್ನಯ ಪಿ. ಸಹಕರಿಸಿದರು.