- ಗ್ರಾಮದ ಅಭಿವೃದ್ಧಿ ಹಂತಹಂತವಾಗಿ ಮಾಡಲಾಗುವುದು: ರಾಜೇಶ್ ನಾಯ್ಕ್
ವಿಟ್ಲ: ಬಂಟ್ವಾಳ ಕ್ಷೇತ್ರದಲ್ಲಿ 1400ಕ್ಕೂ ಅಧಿಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇನ್ನಷ್ಟು ರಸ್ತೆಗಳ ಅಭಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮದಲ್ಲಿನ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳನ್ನು ಹಂತಹಂತವಾಗಿ ಮಾಡಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರವರು ಹೇಳಿದರು. ಅವರು 1.50 ಕೋಟಿ ವೆಚ್ಚದಲ್ಲಿ ಕೋಡಪದವು ಮಂಗಳಪದವು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಗ್ರಾಮದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಿಗೆ ಚ್ಯುತಿ ಬಾರದಂತೆ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಡೆಸಲು ಸಹಕಾರ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನ ಜಿ.ಕೆ.ಭಟ್, ಮಾದವ ಮಾವೆ, ದೇವದಾಸ್ ಶೆಟ್ಟಿ , ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಸುದರ್ಶನ ಬಜ, , ವಿಟ್ಲಪಡ್ನೂರು ಗ್ರಾ.ಪಂ.ಅಧ್ಯಕ್ಷೆ ರೇಶ್ಮಾಶಂಕರಿ ಬಳಿಪಗುಳಿ, ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ವೀರಕಂಭ ಗ್ರಾ.ಪಂ.ಅಧ್ಯಕ್ಷ ದಿನೇಶ್ ಪೂಜಾರಿ, ಸದಸ್ಯ ರಾದ ಜಯಪ್ರಸಾದ್, ಸಂದೀಪ್, ಪ್ರಮುಖರಾದ ಕಮಲಾಕ್ಷಿ ಪೂಜಾರಿ, ಸತೀಶ್ ಭಟ್ ಪಂಜಿಗದ್ದೆ, ಸತೀಶ್ ಭಟ್, ರಾಜಾರಾಂ, ದಿನೇಶ್ ಅಮ್ಟೂರು, ದೇವಿಪ್ರಸಾದ್ ಶೆಟ್ಟಿ, ಪುಷ್ಪರಾಜ ಚೌಟ, ಪುರುಷೋತ್ತಮ ಸಾಲಿಯಾನ್, ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ, ಆನಂದ ಎ.ಶಂಭೂರು, ವಿಷ್ಟುಭಟ್ ಸಾಂದೀಪನಿ,ಅಭಿಷೇಕ್ ರೈ, ಅರವಿಂದ ರೈ, ಉಮೇಶ್ ಶೆಟ್ಟಿ ತಾರಿಯಡ್ಕ, ತನಿಯಪ್ಪ ಗೌಡ ನೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.