ಪುತ್ತೂರು: ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಎದುರಿನ ಕೆಫೆಯೊಂದರಲ್ಲಿ ಪ್ರತಿಷ್ಟಿತ ಕಾಲೇಜೊಂದರ ಹಿರಿಯ ವಿದ್ಯಾರ್ಥಿಗಳಾದ ಹಿಂದು ಮತ್ತು ಕ್ರಿಶ್ಚಿಯನ್ ಯುವತಿಯರ ಜೊತೆ ಇಬ್ವರು ಮುಸ್ಲಿಂ ಯುವಕರು ಇರುವುದಾಗಿ ಹಿಂದು ಸಂಘಟನೆ ನೀಡಿದ ಮಾಹಿತಿಯಂತೆ ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಗೊಂದಲಕ್ಕೆ ತೆರೆ ಎಳೆದ ಘಟನೆ ಆ.25ರಂದು ಮಧ್ಯಾಹ್ನ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕರು ಮತ್ತು ಯುವತಿಯರನ್ನು ವಿಚಾರಿಸಿ ಅವರ ಮನೆಯವರಿಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ