ಝೀ ಕನ್ನಡ ಡ್ರಾಮಾ ಜೂನಿಯರ್ಸ್ ಸೀಸನ್-4 ರಿಯಾಲಿಟಿ ಶೋ

0

  • ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಮಾಸ್ಟರ್ ವೇದಿಕ್ ಕೌಶಲ್ ತೃತೀಯ

ಕಡಬ: ಇತ್ತೀಚೆಗೆ ಮುಕ್ತಾಯಗೊಂಡ ಝೀ ಕನ್ನಡ ಡ್ರಾಮಾ ಜೂನಿಯರ್‍ಸ್ ಸೀಸನ್-4ರಿಯಾಲಿಟಿ ಶೋ ಇದರರಲ್ಲಿ ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಮಾಸ್ಟರ್ ವೇದಿಕ್ ಕೌಶಲ್ ರನ್ನರ್‍ಸ್ ಸ್ಥಾನ ಪಡೆದಿದ್ದಾರೆ.

ಕೃಷಿಕ ಮಹದೇವಪ್ಪ ಹೆಚ್.ಎಸ್ ಮತ್ತು ಹೊಸ್ಮಠ ವಾಳ್ಯದ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಮಂಜುಳಾ ಯು ಅವರ ಪುತ್ರರಾಗಿರುವ ವೇದಿಕ್ ಕೌಶಲ್ ಅವರು ನೃತ್ಯ, ಸಂಗೀತ, ಅಭಿನಯ ಹಾಗೂ ಕಲಿಕಾ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದು ಡ್ರಾಮಾ ಜೂನಿಯರ್‍ಸ್ ವೇದಿಕೆಯಲ್ಲಿ ಯಾವುದೇ ಪಾತ್ರ ಕೊಟ್ಟರೂ ಹಿಂಜರಿಯದೆ ಅಭಿನಯಿಸಿ ಅನೇಕ ಬಾರಿ ಬೆಸ್ಟ್ ಆಕ್ಟರ್ ಆಫ್ ದ ಡೇ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದ್ದರು. ಪೌರಾಣಿಕ ಪಾತ್ರಗಳನ್ನು ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ಇವರ ಸಹೋದರ ದೇವ್‌ಸೇನ್ ಮುಡಿಪುನಲ್ಲಿರುವ ನವೋದಯ ಶಾಲೆಯ 10ನೇ ತರಗತಿ ವಿದ್ಯಾರ್ಥಿ.

LEAVE A REPLY

Please enter your comment!
Please enter your name here