ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಅಮಿಟೆಡ್ ನ ವಾರ್ಷಿಕ ಮಹಾಸಭೆ

0

  • 140 ಕೋಟಿ ರೂಪಾಯಿ ವ್ಯವಹಾರ – 2.21 ಕೋಟಿ ನಿವ್ವಳ ಲಾಭ – 16 % ಡಿವಿಡೆಂಡ್

ಪುತ್ತೂರು: ನಮ್ಮ ಸಹಕಾರಿಯು ಆರು ವರುಷಗಳನ್ನು ಬಹಳ ಯಶಸ್ವಿಯಾಗಿ ಪೂರೈಸಿದೆ. ಈ ವೇಳೆಯಲ್ಲಿ ವ್ಯವಹಾರದಲ್ಲಿ ಬಂದಂತಹ ಲಾಭಾಂಶದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ತನ್ಮದೇ ಆದ ಕೊಡುಗೆಗಳನ್ನು ನೀಡಿದೆ. 2021-22ನೇ ಸಾಲಿನಲ್ಲಿ ಸಹಕಾರಿಯು 140 ಕೋಟಿ ರೂಪಾಯಿಗಳಷ್ಟು ವ್ಯವಹಾರವನ್ನು ನಡೆಸಿ 2.21 ಕೋಟಿಗಳಷ್ಟು ನಿವ್ವಳ ಲಾಭವನ್ನು ಗಳಿಸಿ ಸದಸ್ಯರಿಗೆ ಶೇಕಡಾ 16 ಡಿವಿಡೆಂಡ್ ವಿತರಣೆ ಮಾಡಲಾಗುವುದು ಎಂದು ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ- ಆಪರೇಟಿವ್ ಲಿಮಿಟೆಡ್ ನ ಅಧ್ಯಕ್ಷರಾದ ಪಿ. ಮಂಜಪ್ಪ ರವರು ಹೇಳಿದರು.

 

ಅವರು ಬೆಂಗಳೂರಿನ ನಾಗಸಂದ್ರದ ಹಾವನೂರು ಬಡಾವಣೆಯಲ್ಲಿರುವ ಸೌಂದರ್ಯ ಶಾಲೆಯ ಅವರಣದಲ್ಲಿ ಆ.೨೧ರಂದು ನಡೆದ ಪುತ್ತೂರಿನ ಎಸ್.ಬಿ.ಬಿ. ಸೆಂಟರ್ ನಲ್ಲಿ ಶಾಖೆಯನ್ನು ಹೊಂದಿರುವ ಬೆಂಗಳೂರಿನ ನಾಗಸಂದ್ರ ಹಾವನೂರು ಬಡಾವಣೆಯ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಸೌಂದರ್ಯ ಆರ್ಕೆಡ್ ನಲ್ಲಿ ಕೇಂದ್ರ ಕಚೇರಿ ಯನ್ನು ಹೊಂದಿರುವ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಅಮಿಟೆಡ್ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು‌ ವಹಿಸಿ ಮಾತನಾಡಿದರು.

ಸಹಕಾರಿಯು ಮುಂದಿನ ವರ್ಷದಲ್ಲಿ 175 ಕೋಟಿಗಳಷ್ಟು ವ್ಯವಹಾರ ನಡೆಸಿ 2.75 ಕೋಟಿಗಳಷ್ಟು ಲಾಭವನ್ನು ಗಳಿಸುವ ಉದ್ದೇಶವನ್ನು ಹೊಂದಿದೆ. ಸಹಕಾರಿಯೂ ಹಲವಾರು ಯೋಜನೆ – ಯೋಚನೆಗಳನ್ನು ಹಾಕಿಕೊಂಡಿದ್ದು, ಮುಂದಿನ ದಿನಗಳಲ್ಲಿ‌ ಅವೆಲ್ಲವನ್ನು ಕಾರ್ಯ ರೂಪಕ್ಕೆ ತರುವಲ್ಲಿ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೇಮಂತ ಬಿ.ವಿರವರು ಮಾತನಾಡಿ ವರ್ಷಾಂತ್ಯಕ್ಕೆ ಸಂಘದಲ್ಲಿ 4145 ಸದಸ್ಯರಿಂದ 91,98,500 ರೂಪಾಯಿ ಪಾಲು ಬಂಡವಾಳ, 75,22,75,425.56ರೂಪಾಯಿ ಠೇವಣಿ ಇದೆ. ಸಂಘದಲ್ಲಿ 64,70,85,588.74 ರೂಪಾಯಿಗಳಷ್ಟು ವಿವಿಧ ರೀತಿಯ ಸಾಲಗಳನ್ನು ವಿತರಿಸಲಾಗಿದೆ. ಸಂಘವು 2,20,67,692.05ರೂಪಾಯಿಗಳಷ್ಟು ನಿವ್ವಳ ಲಾಭವನ್ನು ಗಳಿಸಿದೆ ಎಂದರು.

ಸಭೆಯಲ್ಲಿ ಎಸ್‌ ಎಸ್‌ ಎಲ್‌ ಸಿ  ಯಲ್ಲಿ ಸಾಧನೆಗೈದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.

ಸಹಕಾರಿಯ ಉಪಾಧ್ಯಕ್ಷರಾದ ಸುನಿತಾ ಎಂ., ನಿರ್ದೇಶಕರಾದ ಗೋಪಿನಾಥ್ ಎಂ., ಕೀರ್ತನ್ ಕುಮಾರ್ ಎಂ., ಕೃಷ್ಣ ಶೆಟ್ಟಿ ಕೆ., ಸುರೇಶ್ ಸಿ. ಹೆಗಡಿ, ಚಿನ್ನಮ್ಮ ಪಿ.ಪಿ., ಪ್ರತೀಕ್ಷ ಎಸ್. ಮೂಲ್ಯ, ಕೇಶವ ಎಸ್., ರಾಜಶೇಖರ ಮೂರ್ತಿ ಹೆಚ್.ಎಂ., ರಜನಿ ಪಿ. ಸೂರಿ, ಮಂಜುನಾಥ ಭಟ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭಾಗ್ಯ ಶ್ರೀನಿವಾಸ್ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾದಿಕಾರಿ ಹೇಮಂತ ಬಿ. ವಿ. ಸ್ವಾಗತಿಸಿದರು. ರಾಜಶೇಖರಮೂರ್ತಿ ಎಚ್. ಎಮ್‌.ರವರು ಕಾರ್ಯಕ್ರಮ ನಿರೂಪಿಸಿದರು. ಭರತ್ ಆರ್. ರವರು ವಂದಿಸಿದರು.

ಪುತ್ತೂರು ಶಾಖೆಯಲ್ಲಿ ರೂ.30.89 ಲಕ್ಷ ಲಾಭ

ಪುತ್ತೂರು ಶಾಖೆಯಲ್ಲಿ ಒಟ್ಟು 849ಸದಸ್ಯರಿದ್ದು, 10,05,84,928 ರೂಪಾಯಿ ಠೇವಣಿ, 7,98,07,668 ರೂಪಾಯಿ ಸಾಲವಿತರಿಸಲಾಗಿದೆ. ಒಟ್ಟು 67,04,86,175ರೂಪಾಯಿಯ ವ್ಯವಹಾರ ನಡೆಸಿ 30,89,748 ರೂಪಾಯಿ ಲಾಭಗಳಿಸಿದೆ. ಎಸ್.ಎಸ್.ಎಲ್.ಸಿ.ಯಲ್ಲಿ ೯೮.೪% ಅಂಕಗಳಿಸಿದ ಪುತ್ತೂರು ಶಾಖಾ ಸದಸ್ಯರಾದ ದೇರಣ್ಣ ರೈ ರವರ ಪುತ್ರ ರಾಕೇಶ್ ರೈ ಎಂ.ರವರಿಗೆ ಪ್ರತಿಭಾ ಪುರಸ್ಕಾರ ಲಭಿಸಿದೆ. ಶಾಖಾ ವ್ಯವಸ್ಥಾಪಕರಾಗಿ ಮನೋಹರ ಕೆ., ಸಹಾಯಕ ಶಾಖಾ ವ್ಯವಸ್ಥಾಪಕರಾಗಿ ಶ್ಯಾಮಲ ಕೆ., ಸಿಬ್ಬಂದಿಗಳಾಗಿ ಸುಧೀರ್ ಬಿ. ಹಾಗೂ ಪ್ರಿಯದರ್ಶಿನಿ ನಿಶಾಕಿರಣ್ ರವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

  • ಸಹಕಾರಿಯ ವಿಶೇಷತೆಗಳು..
  • ರಾಜ್ಯ ಮಟ್ಟದ ಕಾರ್ಯವ್ಯಾಪ್ತಿ ಹೊಂದಿದ ಸಂಸ್ಥೆ
  • ದುಡಿಯುವ ಬಂಡವಾಳದಲ್ಲಿ ನಿರಂತರ ಪ್ರಗತಿ
  • ಆರಂಭದಿಂದಲೂ ಪ್ರಗತಿಯ ಪಥದಲ್ಲಿ ಸಾಗುತ್ತಿರುವ ಸಂಸ್ಥೆ
  • ಸಂಪೂರ್ಣ ಗಣಕೀಕೃತ ಸಹಕಾರಿ
  • ಕೋರ್ ಬ್ಯಾಂಕಿಂಗ್ ಸೌಲಭ್ಯ
  • ಕ್ರೀಯಾಶೀಲ ಹಾಗೂ ಯುವ ನಿರ್ದೇಶಕರು
  • ಸದಸ್ಯರ ಆರೋಗ್ಯ ತಪಾಸಣೆಗಾಗಿ ರೀಯಾಯಿತಿ ದರದಲ್ಲಿ ಸೌಂದರ್ಯ ಡಯಗ್ನೋಸ್ಟಿಕ್ ಸೆಂಟರ್

LEAVE A REPLY

Please enter your comment!
Please enter your name here