ಬಂಟ ಸಮುದಾಯದ ಪ್ರಮುಖ ನಾಯಕರು ಶನಿವಾರ ಪುತ್ತೂರಿಗೆ

0

  • ಬಂಟಮದುವೆ ಕೈಪಿಡಿ ಬಿಡುಗಡೆ, ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

ಪುತ್ತೂರು; ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು , ಡಾ.ಪಿ ಬಿ ರೈ ಪ್ರತಿಷ್ಠಾಮ , ನೂಜಿ ತರವಾಡು ಕೆಯ್ಯೂರು ಇದರ ಆಶ್ರಯದಲ್ಲಿ ಆ. 27ರಂದು ಶನಿವಾರ ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಒಂದೇ ವೇದಿಕೆಯಲ್ಲಿ ನಡೆಯಲಿರುವ ಮೂರು ವಿಭಿನ್ನ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಬಂಟ ಸಮುದಾಯದ ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಡಾ. ಮೋಹನ್‌ಆಳ್ವ        ಐಕಳ ಹರೀಶ್ ಶೆಟ್ಟಿ         ಬಿ ಆರ್ ಶೆಟ್ಟಿ

ದಂಬೆಕ್ಕಾನ ಸದಾಶಿವ ರೈ ಇವರಿಂದ ರಚಿತವಾದ ಬಂಟ ಮದುವೆ (ಬಂಟಗುರಿಕ್ಕಾರ ಕೈಪಿಡಿ) ಬಿಡುಗಡೆ, ದಂಬೆಕ್ಕಾನ ಸದಾಶಿವ ರೈ ಯವರು ಕೊಡುಗೆಯಾಗಿ ನೀಡಿದ ಶ್ರೀ ರಾಮಕೃಷ್ಣ ಪ್ರೌಢ ಶಾಲೆ ವಿಜ್ಞಾನ ಪ್ರಯೋಗಾಲಯ ಮತ್ತು ಪಿಬಿ ರೈ ಪ್ರತಿಷ್ಠಾನದ ವತಿಯಿಂದ ನೀಡಲ್ಪಡುವ ಅಣಿಲೆ ವೆಂಕಪ್ಪ ರಐ ಪ್ರಶಸ್ತಿ ಪ್ರಧಾನ ಸಮಾರಂಭ ಒಂದೇ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮವು ಬಂಟರಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಅಜಿತ್‌ಕುಮಾರ್ ರೈ ಮಾಲಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಲಿದ್ದು, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ್‌ಆಳ್ವ ರವರು ಕೈಪಿಡಿ ಬಿಡುಗಡೆ ಮಾಡಲಿದ್ದಾರೆ. ಉದ್ಯಮಿ ಬಿ ಆರ್ ಶೆಟ್ಟಿಯವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅನೇಕ ಮಂದಿ ಗಣ್ಯರು ಭಾಗವಹಿಸಲಿದ್ದು ಕಾರ್ಯಕ್ರಮವು ಬಹಳ ವಿಜೃಂಬಣೆಯಿಂದ ನಡೆಯಲಿದ್ದು ಯಶಸ್ವಿಗೊಳಿಸುವಂತೆ ಬಂಟರಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿಯವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here