ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರಿದ ಕೋಡಿಂಬಾಡಿಯ ಅನ್ವಿಕಾ ಪ್ರಭು ಸಾಧನೆ

0

ಪುತ್ತೂರು: ಅತಿ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆಗೈಯ್ಯುವ ಮೂಲಕ ಕೋಡಿಂಬಾಡಿಯ ಪುಟಾಣಿ ಪ್ರತಿಭೆಯೊಬ್ಬರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

3 ವರ್ಷ 8 ತಿಂಗಳ ಪುಟಾಣಿ ಅನ್ವಿಕಾ ಪ್ರಭುರವರು 35 ಬಗೆಯ ಹಣ್ಣು ಹಂಪಲು, 16 ಬಣ್ಣಗಳು, ದೇಹದ 20 ಅಂಗಾಂಗಗಳು ಮತ್ತು 8 ರಾಷ್ಟ್ರೀಯ ಲಾಂಛನಗಳನ್ನು ಗುರುತಿಸಿರುವುದು ಮಾತ್ರವಲ್ಲದೆ ಶ್ಲೋಕ, ರೈಮ್ಸ್ ಪಠಣದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಗುರುತಿಸಲ್ಪಟ್ಟಿದ್ದಾರೆ.
ಕೋಡಿಂಬಾಡಿಯ ದಾರಂದಕುಕ್ಕು ನಿವಾಸಿಗಳಾದ ಅಶೋಕ್ ಪ್ರಭು ಮತ್ತು ಶ್ವೇತಾ ಪ್ರಭು ದಂಪತಿಯ ಪುತ್ರಿ ಅನ್ವಿಕಾ ಪ್ರಭು ಪ್ರಸ್ತುತ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಎಲ್.ಕೆ.ಜಿ. ವಿದ್ಯಾರ್ಥಿನಿಯಾಗಿದ್ದಾರೆ.

LEAVE A REPLY

Please enter your comment!
Please enter your name here