








ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಆ.27ರಂದು ಮುಂಜಾನೆ ಗಂಗಾಪೂಜೆಯ ಬಳಿಕ ತೀರ್ಥ ಸ್ನಾನ ಆರಂಭಗೊಂಡಿತು. ಕ್ಷೇತ್ರದ ಪ್ರಧಾನ ಅರ್ಚಕರಾದ ಕೃಷ್ಣ ಬಡಿಕಿಲ್ಲಾಯರವರು ವಿಧಿವಿಧಾನ ನೆರವೇರಿಸಿದರು. ತೀರ್ಥ ಸ್ನಾನದ ಬಳಿಕ ಶ್ರೀ ದೇವರ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಬೆಳಗ್ಗಿನಿಂದ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಆರಂಭಗೊಂಡಿತು. ಊರಪರವೂರ ಸಾವಿರಾರು ಮಂದಿ ಭಕ್ತಾಧಿಗಳು ಆಗಮಿಸಿ ತೀರ್ಥಸ್ನಾನ ಮಾಡಿದರು.















