ಬಂಟರ ಯಾನೆ ನಾಡವರ ಮಾತೃ ಸಂಘ, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಡಾ. ಪಿ.ಬಿ.ರೈ ಪ್ರತಿಷ್ಠಾನದಿಂದ ಬಂಟ ಮದುವೆ ಕೈಪಿಡಿ ಬಿಡುಗಡೆ, ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ, ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ ಸಮಾರಂಭ

0

ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಡಾ.ಪಿ.ಬಿ ರೈ ಪ್ರತಿಷ್ಠಾನ, ನೂಜಿ ತರವಾಡು ಕೆಯ್ಯೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ದಂಬೆಕ್ಕಾನ ಸದಾಶಿವ ರೈಯವರಿಂದ ವಿರಚಿತ `ಬಂಟ ಮದುವೆ’ (ಬಂಟ ಗುರಿಕ್ಕಾರನ ಕೈಪಿಡಿ) ಬಿಡುಗಡೆ ಹಾಗೂ ದಂಬೆಕ್ಕಾನ ಸದಾಶಿವ ರೈಯವರು ಕೊಡುಗೆಯಾಗಿ ನೀಡಿದ ರಾಮಕೃಷ್ಣ ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ, ಡಾ| ಪಿ.ಬಿ.ರೈ ಪ್ರತಿಷ್ಠಾನದಿಂದ ನೀಡುವ `ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ’ ಸಮಾರಂಭವು ಆ.27ರಂದು ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿಯವರು ಅಧ್ಯಕ್ಷತೆ ವಹಿಸಿ, ಲ್ಯಾಬ್ ಉದ್ಘಾಟಿಸಿದರು. ಮಾಜಿ ಶಾಸಕಿ  ಮಲ್ಲಿಕಾ ಪ್ರಸಾದ್ ಮತ್ತು ಹಿರಿಯರಾದ ಚಿಕ್ಕಪ್ಪ ನಾಯ್ಕ್ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು.‌

ಬಂಟ ಗುರಿಕ್ಕಾರನ ಕೈಪಿಡಿ ಬಿಡುಗಡೆ:

ಬಂಟರ ಮದುವೆ ಯಾವ ರೀತಿ ನಡೆಯಬೇಕು ಎನ್ನುವ ಮಾಹಿತಿ ಇರುವ ಬಂಟ ಮದುವೆ ಕೈ‌ಪಿಡಿಯನ್ನು ಬಿಡುಗಡೆಗೊಳಿಸಲಾಯಿತು.

ಪ್ರಶಸ್ತಿ ಪ್ರದಾನ, ಸನ್ಮಾನ:

ಡಾ.ಪಿ.ಬಿ ರೈ ಪ್ರತಿಷ್ಠಾನದ ವತಿಯಿಂದ ನೀಡುವ ಅನಿಲೆ ವೆಂಕಪ್ಪ ರೈ ಪ್ರಶಸ್ತಿಯನ್ನು ಬಂಟರ ಯಾನೆ ನಾಡವರ ಮಾತೃಸಂಘ ಅಧ್ಯಕ್ಷ ಅಜಿತ್ ಕುಮಾರ್ ರೈ ಅವರಿಗೆ ಪ್ರದಾನ ಮಾಡಾಯಿತು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸವಿತಾ ಬಂಡಾರಿ ಸನ್ಮಾನ ಪತ್ರ ವಾಚಿಸಿದರು. ರಾಮಕೃಷ್ಣ ಪ್ರೌಢ ಶಾಲೆಯಲ್ಲಿ ನೂತನ ಸಮಾಜ ವಿಜ್ಞಾನ ಪ್ರಯೋಗಾಲಯ ಮಾದರಿಗೆ ಮಾರ್ಗದರ್ಶನ ನೀಡಿದ ಕೊಡಗು ಜಿಲ್ಲೆಯ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಮೂಲತಃ ಕುಂಬ್ರದವರಾದ ಇಬ್ರಾಹಿಂ ಅವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಹರಿಣಾಕ್ಷಿ ಜೆ ಶೆಟ್ಡಿ ಸನ್ಮಾನ ಪತ್ರ ವಾಚಿಸಿದರು.

ಪುಸ್ತಕ ಮತ್ತು ಪ್ರಯೋಗ ಶಾಲೆಯನ್ನು ಸಮಾಜಕ್ಕೆ ಸಮರ್ಪಣೆ ಮಾಡಿದ ದಂಬೆಕಾನ ಸದಾಶಿವ ರೈ ದಂಪತಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಮದುವೆ ಸಂಪ್ರದಾಯದಂತೆ ದಂಪತಿ ಪರಸ್ಪರ ಮಾಲಾರ್ಪಣೆ ಮಾಡಿದರು. ಗಣ್ಯರು ದಂಪತಿಗೆ ಶಾಲು, ಪೇಟ, ಪುಷ್ಪಗುಚ್ಚ ನೀಡುವ ಮೂಲಕ ಸನ್ಮಾನಿಸಿದರು.

ಪುಸ್ತಕ ಸಮಾಜ ಬಾಂದವರ ಮನೆಗೆ ತಲುಪಲಿ:

ಡಾ.ಪಿ.ಬಿ ರೈ ಪ್ರತಿಷ್ಠಾನದ ಅಧ್ಯಕ್ಷ ದಂಬೆಕ್ಕಾನ ಸದಾಶಿವ ರೈ ಪುಸ್ತಕ ಮತ್ತು ಒಟ್ಟು ಕಾರ್ಯಕ್ರಮದ ಕುರಿತು ಮಾತನಾಡಿ, ಸಮಾಜ ಕಟ್ಟುಪಾಡು ಸಂಪ್ರದಾಯದ ಕುರಿತು ಮದುವೆ ಮತ್ತು ನಿಶ್ಚಿತಾರ್ಥಕ್ಕೆ ಸಂಬಂಧಿಸಿ ಈ ಪುಸ್ತಕ ರಚನೆಯಾಗಿದೆ. ಈ ಪುಸ್ತಕ ಸಮಾಜಬಾಂದವರ ಮನೆಗೆ ತಲುಪಬೇಕು ಎಂದರು.

ಪುತ್ತೂರು ತಾಲೂಕು ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ನಿರ್ದೇಶಕರಾದ ನಿರಂಜನ ರೈ, ಜಯಪ್ರಕಾಶ್ ರೈ ನೂಜಿಬೈಲು, ದುರ್ಗಾಪ್ರಸಾದ್ ರೈ‌‌ ಕುಂಬ್ರ, ರಮೇಶ್ ರೈ ಸಾಂತ್ಯ, ಬಂಟರ ಯಾನೆ ನಾಡವರ ಮಾತೃಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ರೈ, ಡಾ.ಪಿ.ಬಿ.ರೈ ಪ್ರತಿಷ್ಠಾನದ ಕೋಶಾಧಿಕಾರಿ ಪ್ರಭಾ ಎಸ್ ರೈ, ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಮುಖ್ಯಗುರು ಜಯಲಕ್ಷ್ಮೀ ಸೇರಿದಂತೆ‌ ಹಲವಾರು ಮಂದಿ ಗಣ್ಯರು ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಂಟರ ಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಎ.ಪಿ ಜಯರಾಮ ರೈ, ಜಗಜೀವನಗ ದಾಸ್ ರೈ, ಕಡಮಜಲು ಸುಭಾಶ್ ರೈ, ರಾಮಕೃಷ್ಣ ಪ್ತೌಢ ಶಾಲೆಯ ನಿವೃತ ಪ್ರಾಂಶುಪಾಲ ಶ್ರೀಧರ್ ರೈ, ಬಂಟರ ಸಂಘದ ನಿರ್ದೇಶಕ ರವೀಂದ್ರನಾಥ ರೈ ನುಳಿಯಾಲು, ಕೆ ಎಚ್ ದಾಸಪ್ಪ ರೈ, ಮೋನಪ್ಪ ರೈ ನರಿಮೊಗರು, ಅನಿತಾ ಹೇಮನಾಥ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಬನ್ನೂರು,ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ, ಸವಿತಾ ಬಂಡಾರಿ, ಯುವ ಸಂಘದ ನಿಕಟಪೂರ್ವ ಅಧ್ಯಕ್ಷ ಸದಾಶಿವ ರೈ, ಅಶೋಕ್ ಕೆ.ಸಿ, ಪ್ರಜ್ವಲ್ವ ರೈ ಸಣ್ಣತ್ತಡ್ಕ, ಪವನ್ ಶೆಟ್ಟಿ ಕಂಬಳದಡ್ಡ ಅತಿಥಿಗಳನ್ನು ಗೌರವಿಸಿದರು.

ರಾಕೇಶ್ ರೈ‌ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.

ಗಣ್ಯರಿಂದ ಶುಭ ಹಾರೈಕೆ ಸಂದೇಶ;

ಅಬುದಾಬಿಯಿಂದ ಮಿತ್ರಂಪಾಡಿ‌ ಜಯರಾಮ ರೈ ಅವರು ಕಳುಹಿಸಿದ ಸಂದೇಶವನ್ನು ನಿರಂಜನ ರೈ ಮಠಂತಬೆಟ್ಟು ವಾಚಿಸಿದರು. ಉದ್ಯಮಿ ಡಾ.ಬಿ.ಆರ್ ಶೆಟ್ಟಿಯವರ ಶುಭ ಹಾರೈಕೆಯನ್ನು ವಿಡಿಯೋ ಪರದೆಯ ಮೇಲೆ ಬಿತ್ತರಿಸಲಾಯಿತು.

LEAVE A REPLY

Please enter your comment!
Please enter your name here