ಪುತ್ತೂರು ಸೌಹಾರ್ದ ಸಹಕಾರಿಯ ಮಹಾಸಭೆ ; ರೂ.14.42 ಲಕ್ಷ ಲಾಭ, ಶೇ.10 ಡಿವಿಡೆಂಡ್

0

ಪುತ್ತೂರು: ಎಂ.ಟಿ ರಸ್ತೆ ಕಟ್ಲೇರಿ ಮಾಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರು ಸೌಹಾರ್ದ ಸಹಕಾರಿಯು 2021-22ನೇ ಸಾಲಿನಲ್ಲಿ ರೂ.14,42,927.01 ಲಾಭಗಳಿಸಿ, ಸದಸ್ಯರಿಗೆ ಶೇ.10 ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಅಕ್ಕರಿ ರೈಯವರು ತಿಳಿಸಿದರು.

ಸಭೆಯು ಆ.27ರಂದು ಸಂಘದ ಆವರಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕ್ಕರಿ ರೈ, ವರ್ಷಾತ್ಯಕ್ಕೆ ಸಂಘದಲ್ಲಿ 1435 ಸದಸ್ಯರಿಂದ 72,66,150, ಬಿ ತರಗತಿ ಸದಸ್ಯರಿಂದ ರೂ.35,250 ಹಾಗೂ ಸಿ ತರಗತಿ ಸದಸ್ಯರಿಂದ ರೂ.8,23,440 ಪಾಲು ಬಂಡವಾಳ ಹಾಗೂ ರೂ.2,41,53,826 ಠೇವಣಿ ಹೊಂದಿದೆ. ರೂ.2,52,71,101 ಸಾಲ ವಿತರಿಸಲಾಗಿದೆ. ಸಂಘವು ಗಳಿಸಿದ ಲಾಭಾಂಶವನ್ನು ಇಲಾಖೆಯ ನಿಯಮಾವಳಿಯಂತೆ ವಿಂಗಡಿಸಲಾಗಿದೆ ಎಂದರು.


ಸಂಘದ ಕಚೇರಿಗೆ ಹೆಚ್ಚುವರಿಯಾಗಿ ಕೊಡಿಯೊಂದನ್ನು ಖರೀದಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನಕೈಗೊಳ್ಳಲಾಗಿದೆ. ಸಂಘದ ಸದಸ್ಯತ್ವ, ಪಾಲು ಬಂಡವಾಳ ಹಾಗೂ ಠೇವಣಿಯನ್ನು ಹೆಚ್ಚಿಸುವುದು, ವ್ಯವಹಾರವನ್ನು ರೂ.25 ಕೋಟಿಗೆ ಏರಿಕೆ ಮಾಡಲು ಕ್ರಮಕೈಗೊಳ್ಳಲಾಗುವುದು. ಸಂಘದ ಬೆಳವಣಿಗೆಯಲ್ಲಿ ಸದಸ್ಯರು ಸಹಕರಿಸುವಂತೆ ಅಧ್ಯಕ್ಷರು ಮನವಿ ಮಾಡಿದರು.

ಉಪಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ನಿರ್ದೇಶಕರಾದ ತ್ರಿವೇಣಿ ಕರುಣಾಕರ ಪೆರ್‍ವೋಡಿ, ಮನಮೋಹನ ರೈ, ರಾಮಯ್ಯ ರೈ, ಭಗವಾನ್‌ದಾಸ್ ರೈ, ಮಹಮ್ಮದ್ ನವಾಝ್, ಆರ್.ಬಿ ಸುವರ್ಣ, ಮೂಕಾಂಬಿಕಾ, ಜಯರಾಮ ರೈ ಎ.ಕೆ., ಜಗನ್ನಾಥ ರೈ, ಸುರೇಂದ್ರ ಕಂಬಳಿ, ನಾರಾಯಣ ರೈ ಸಿ.ಎಚ್., ಗೌರವ ಸಲಹೆಗಾರರಾದ ಶೇಖರ್ ನಾರಾವಿ, ಕೃಷ್ಣ ಭಟ್, ಕಾನೂನು ಸಲಹೆಗಾರ ಪ್ರವೀಣ್‌ಚಂದ್ರ ಶೆಟ್ಟಿ ಹಾಗೂ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸಿದ್ದರು.
ಸುಹಾಸಿನಿ ಪ್ರಾರ್ಥಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ರೈ ಸ್ವಾಗತಿಸಿ, ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ದೇವಪ್ಪ ನಾಯ್ಕ ವಂದಿಸಿದರು. ಸಿಬಂದಿಗಳು ಹಾಗೂ ಪಿಗ್ಮಿ ಸಂಗ್ರಾಹಕರು ಸಹಕರಿಸಿದರು.

LEAVE A REPLY

Please enter your comment!
Please enter your name here