ಪುತ್ತೂರು: 71ನೇ ಇಂಟರ್ ಸರ್ವೀಸಸ್ ಅಕ್ವಾಟಿಕ್ ಚಾಂಪಿಯನ್ಶಿಪ್ 2022-23ರ 50 ಮೀಟರ್ ಬ್ರೆಸ್ಟ್ಸ್ಟ್ರೋಕ್ನಲ್ಲಿ ಭಾರತೀಯ ನೌಕಾಪಡೆಯ ಪುತ್ತೂರಿನ ವೈಷ್ಣವ್ ಹೆಗ್ಡೆ 29.6 ತಲುಪುವ ಬೆಳ್ಳಿ ಪದಕ ಗೆದ್ದು ಮುಂದಿನ ಸೆಪ್ಟೆಂಬರ್ನಲ್ಲಿ ನಡೆಯಲಿರುವ ಸೀನಿಯರ್ ನ್ಯಾಷನಲ್ಸ್ ಅಕ್ವಾಟಿಕ್ ಚಾಂಪಿಯನ್ಶಿಪ್ ಮತ್ತು ರಾಷ್ಟ್ರೀಯ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.
ಆ.22 ರಿಂದ 26ರವರೆಗೆ ವಿಶಾಖಪಟ್ಟಣಂನ ನೌಕಾ ನೆಲೆಯ INS CIRCARSನಲ್ಲಿ ನಡೆಯಿತು. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಮೂರು ಸೇನಾ ಪಡೆಗಳ ಈಜುಗಾರರು ಈ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು. ಈ ಹಿಂದೆ ಇದೇ ನೌಕಾ ನೆಲೆಯಲ್ಲಿ ಆ.12 ರಂದು ನಡೆದ ನೌಕಾ ಟ್ರಯಲ್ಸ್ನಲ್ಲಿ ವೈಷ್ಣವ್ 50 ಮೀಟರ್ ಬ್ರೆಸ್ಟ್ಸ್ಟ್ರೋಕ್ನಲ್ಲಿ 29.6 ರಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಪುತ್ತೂರು ಅಕ್ವಾಟಿಕ್ ಕ್ಲಬ್ನ ಸದಸ್ಯರಾಗಿರುವ ವೈಷ್ಣವ್ರವರು ಕೋಚ್ ಪಾರ್ಥ ವಾರಾಣಾಶಿ, ನಿರೂಪ್, ರೋಹಿತ್ ಮತ್ತು ದೀಕ್ಷಿತ್ ಅವರಿಂದ ಪುತ್ತೂರಿನ ಬಾಲವನ ಈಜುಕೊಳ ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಈಜುಕೊಳದಲ್ಲಿ ತರಬೇತಿ ಪಡೆದಿದ್ದಾರೆ