ನಾಳೆ ಕೆಮ್ಮಾಯಿಯಲ್ಲಿ 5ನೇ ವರ್ಷದ ಮೊಸರು ಕುಡಿಕೆ- ಶೋಭಾಯಾತ್ರೆ

0

ಪುತ್ತೂರು: ಶ್ರೀ ವಿಷ್ಣು ಯುವಕ ಮಂಡಲ ಕೆಮ್ಮಾಯಿ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಕೆಮ್ಮಾಯಿ ಇದರ ಜಂಟಿ ಸಹಯೋಗದೊಂದಿಗೆ 5ನೇ ವರ್ಷದ ಮೊಸರು ಕುಡಿಕೆ ಉತ್ಸವ ಆ.28ರಂದು ಕೆಮ್ಮಾಯಿ ಓಂ ಅಶ್ವತ್ಥಕಟ್ಟೆ ಬಳಿ ನಡೆಯಲಿದೆ.‌

ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮ ಜರಗಲಿದ್ದು ಬಳಿಕ ಮಹಿಳೆಯರಿಗೆ ಮತ್ತು ಪುರುಷರಿಗೆ ಹಗ್ಗ ಜಗ್ಗಾಟ ಸ್ಪರ್ಧೆ, ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ವಿಭಿನ್ನ ರೀತಿಯ ಆಟೋಟ ಸ್ಪರ್ಧೆ ಹಾಗೂ ಮಕ್ಕಳಿಗೆ ಮುದ್ದು ಶ್ರೀಕೃಷ್ಣ ಸ್ಪರ್ಧೆ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆಯಲಿದ್ದು ಇದರ ಮೊದಲು ವೈಭವದ ಶೋಭಾಯಾತ್ರೆ ಮತ್ತು ಆಕರ್ಷಕ ಅಟ್ಟಿ ಮಡಿಕೆ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here