ದರ್ಬೆ ಸ್ಟೈಲೆಕ್ಸ್ ಟೈಲರ್ ಚಿನ್ನಪ್ಪ ಗೌಡರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ಅಗಲಿದ ಕೆಮ್ಮಿಂಜೆ ನಿವಾಸಿ, ದರ್ಬೆಯಲ್ಲಿ ಸ್ಟೈಲೆಕ್ಸ್ ಟೈಲರ್ ಎಂದೇ ಚಿರಪರಿಚಿತರಾಗಿದ್ದ ಚಿನ್ನಪ್ಪ ಗೌಡರವರ ಆತ್ಮ ಸದ್ಗತಿ ಬಗ್ಗೆ ವೈಕುಂಠ ಸಮಾರಾಧನೆಯು ಆ.27 ರಂದು ಪುತ್ತೂರು-ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಸಭಾಭವನದಲ್ಲಿ ಜರಗಿತು.


ಅಗಲಿದ ಚಿನ್ನಪ್ಪ ಗೌಡರವರ ಸಂಬಂಧಿ, ರೈಲ್ವೇ ನಿವೃತ್ತ ಉದ್ಯೋಗಿ ಸುದರ್ಶನ್‌ ಮಾತನಾಡಿ, ಅಗಲಿದ ಚಿನ್ನಪ್ಪ ಗೌಡರವರು ಓರ್ವ ಕುಟುಂಬ ಪ್ರೇಮಿ, ಸ್ನೇಹಿತರಿಗೆ ಸ್ಪೂರ್ತಿ ಯಾಗಿದ್ದು ಎಲ್ಲರಿಗೂ ಬಹಳ ಆತ್ಮೀಯರಾಗಿದ್ದರು. ಬಹಳ ಬಡತನದಿಂದ ಜೀವನ ಸಾಗಿಸುವ ಮೂಲಕ ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದರು. ಪುಸ್ತಕದಲ್ಲಿನ ಪ್ರಥಮ ಹಾಳೆಯು ನಮ್ಮ ಜನ್ಮದಿನವನ್ನು ಮತ್ತು ಕೊನೆಯ ಪುಟವು ನಮ್ಮ ಸಾವಿನ ದಿನವೆಂಬುದಾಗಿ ಸೂಚಿಸುತ್ತದೆ. ಆದರೆ ಪುಸ್ತಕದಲ್ಲಿನ ಮಧ್ಯದಲ್ಲಿನ ಹಾಳೆಗಳು ನಾವು ಸಮಾಜದಲ್ಲಿ ಹೇಗೆ ಜೀವಿಸುತ್ತೇವೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ಅಗಲಿದ ಚಿನ್ನಪ್ಪ ಗೌಡರು ತಮ್ಮ ಜೀವಿತಾವಧಿಯಲ್ಲಿ ಸರಳ, ಸಜ್ಜನಿಕತೆಯಿಂದ ಜೀವನ ಸಾಗಿಸಿ ನಮಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಹೇಳಿ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಗಲಿದ ಚಿನ್ನಪ್ಪ ಗೌಡರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮೃತರ ಪತ್ನಿ ಜಾನಕಿ, ಪುತ್ರಿಯರಾದ ಅನಿತಾ, ಹೇಮಲತಾ, ಚೈತನ್ಯ, ಲಾವಣ್ಯ, ಶುಭಲಕ್ಷ್ಮೀ, ಅಳಿಯಂದಿರಾದ ಚಂದ್ರಶೇಖರ್, ಭರತ್, ಪ್ರಸನ್ನ ಪ್ರೆಸ್ ಗುರುರಾಜ್, ಉಮೇಶ್, ರಾಧಾಕೃಷ್ಣ, ಸಹೋದರರು, ಸಹೋದರಿಯರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here