ಪುತ್ತೂರು: ಸಣ್ಣ ಗಾಜಿನಲ್ಲಿ ಭಗತ್ ಸಿಂಗ್ ಚಿತ್ರ ಕೆತ್ತಿದ ಹಿರೇಬಂಡಾಡಿಯ ರಕ್ಷಿತ್ ಎಚ್.ಎಸ್. ರವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾರೆ.
ಗ್ಲಾಸ್ ಇಚ್ಚಿಂಗ್ ಆರ್ಟ್ಸ್ ಅಂದರೆ ಗ್ಲಾಸಿನಲ್ಲಿ ಕೆತ್ತನೆಯ ಮೂಲಕ ಚಿತ್ರ ರಚಿಸುವುದು. ಈ ಕಲಾವಿಭಾಗದಲ್ಲಿ 2 ಸೆಂ.ಮೀ. ಅಗಲ ಹಾಗೂ 2 ಸೆಂ.ಮೀ. ಉದ್ದದ ಗಾಜಿನ ತುಂಡಿನಲ್ಲಿ ಭಗತ್ ಸಿಂಗ್ ಅವರ ಚಿತ್ರ ರಚಿಸಿದ್ದರು. ಇವರು ಮಂಗಳೂರು ಮಹಾಲಸಾ ದೃಶ್ಯ ಕಲಾ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಹಿರೇಬಂಡಾಡಿ ನಿವಾಸಿ ಹರೀಶ್ ಪಾಲೆತ್ತಾಡಿ ಹಾಗೂ ಸವಿತಾ ಹರೀಶ್ ದಂಪತಿ ಪುತ್ರ.
Home ಚಿತ್ರ ವರದಿ ತುಂಡು ಗಾಜಿನಲ್ಲಿ ಭಗತ್ ಸಿಂಗ್ ಚಿತ್ರ ಕೆತ್ತನೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಹಿರೇಬಂಡಾಡಿಯ...