ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ವಿನಿಯೋಗ – ಸಾವಿರಾರು ಮಂದಿ ಭಕ್ತರಿಗೆ ಹೊಸತೆನೆ ವಿತರಣೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಾದ್ರಪದ ಶುಕ್ಲ ಹಸ್ತಾ ನಕ್ಷತ್ರದ ಶುಭದಿನವಾದ ಸೆ. 9 ರಂದು ಸಂಪ್ರದಾಯದಂತೆ ಕದಿರು ವಿನಿಯೋಗ ಉತ್ಸವ ನಡೆಯಿತು.

ಸಾಂಪ್ರದಾಯಿಕ ಪದ್ಧತಿಯಂತೆ ಬೆಳಗ್ಗೆ ದೇವಳದ ಒಳಾಂಗಣದಲ್ಲಿ ನಿತ್ಯ ಬಲಿ ಉತ್ಸವದೊಂದಿಗೆ ಸರ್ವ ವಾದ್ಯದೊಂದಿಗೆ ಕೆರೆಯ ಬಳಿಯ ಅಶ್ವತ್ಥಕಟ್ಟೆಯ ಬಳಿಗೆ ಆಗಮಿಸಿ ಕಟ್ಟೆಯಲ್ಲಿ ತೆನೆ ಪೂಜೆ ನಡೆಯಿತು. ಬಳಿಕ ತೆನೆ ಕಟ್ಟುಗಳೊಂದಿಗೆ ದೇವಳದ ಒಳಾಂಗಣ ಪ್ರವೇಶಿಸಿ ಪೂಜೆ ನಡೆಯಿತು. ಹೊಸ ತೆನೆಯನ್ನು ಗರ್ಭಗುಡಿಗೆ, ಪರಿವಾರ ದೇವತೆಗಳ ಗುಡಿಗಳಿಗೆ, ಉಗ್ರಾಣ, ತೀರ್ಥಬಾವಿ, ತುಳಸೀಕಟ್ಟೆಗೆ ತೆನೆ ಕಟ್ಟಿದ ಬಳಿಕ ದೇವಳದ ಸಮಿತಿಯವರಿಗೆ ನೀಡಲಾಯಿತು.

ಬಳಿಕ ಹೊರಾಂಗಣದಲ್ಲಿ ಭಕ್ತಾದಿಗಳಿಗೆ ಕದಿರು ವಿನಿಯೋಗ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ರಾಮ್‌ದಾಸ್ ಗೌಡ, ಐತ್ತಪ್ಪ ನಾಯ್ಕ್ ಪಿ, ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ವೀಣಾ ಬಿ.ಕೆ, ಡಾ. ಸುಧಾ ಎಸ್.ರಾವ್, ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು. ದೇವಳದ ಪ್ರಧಾನ ಅರ್ಚಕರೂ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ವೇ ಮೂ ವಿ.ಎಸ್ ಭಟ್ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇನ್ನೋರ್ವ ಪ್ರಧಾನ ಅರ್ಚಕ ವಸಂತ ಕೆದಿಲಾಯ ವೈದಿಕ ವಿಧಾನ ನೆರವೇರಿಸಿದರು. ವೇ ಮೂ ಜಯರಾಮ ಭಟ್ ಬ್ರಹ್ಮವಾಹಕರಾಗಿದ್ದರು.

 

LEAVE A REPLY

Please enter your comment!
Please enter your name here