ಕರ್ನಾಟಕ ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಕುಂಟಿಕಾನ ಲಕ್ಷ್ಮಣ ಗೌಡರ 75 ನೇ ಜನ್ಮದಿನೋತ್ಸವ ಆಚರಣೆ

0

  • ಹಿರಿಯರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ; ಕಾವು ಹೇಮನಾಥ ಶೆಟ್ಟಿ

ಪುತ್ತೂರು: ಕರ್ನಾಟಕ ಗೇರುನಿಗಮದ ಮಾಜಿ ಅಧ್ಯಕ್ಷರೂ ಜಿಲ್ಲಾ ಸ್ಕಾಡ್ಸ್ ಮಾಜಿ ಅಧ್ಯಕ್ಷರೂ ಆಗಿರುವ ಹಿರಿಯ ಸಹಕಾರಿಗಳಾದ ಕುಂಟಿಕಾನ ಲಕ್ಷ್ಮಣ ಗೌಡರ ೭೫ ನೇ ಜನ್ಮ ದಿನಾಚರಣೆ ಕಾರ್ಯಕ್ರಮವು ಅವರ ನಿವಾಸದಲ್ಲಿ ನಡೆಯಿತು. ಪುತ್ತೂರು-ಕಾವು ಲಯನ್ಸ್ ಕ್ಲಬ್ ಮತ್ತು ಅಮ್ಚಿನಡ್ಕ ನಾಗರಿಕ ಸಮಿತಿ ವತಿಯಿಂದ ಈ ಕಾರ್ಯಕ್ರಮ ನಡೆಯಿತು.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಲಕ್ಷ್ಮಣಗೌಡರನ್ನು ಪುತ್ತೂರು -ಕಾವು ಲಯನ್ಸ್ ಮತ್ತು ಅಮ್ಚಿನಡ್ಕ ನಾಗರಿಕ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಪೇಟ ತೊಡಿಸಿ ಫಲಪುಷ್ಪಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಕಾವು ಹೇಮನಾಥ ಶೆಟ್ಟಿಯವರು ಸಹಕಾರಿ ಕ್ಷೇತ್ರದಲ್ಲಿ ಅಮೋಘ ಸಾಧನೆಯನ್ನು ಮಾಡಿರುವ ಲಕ್ಷ್ಮಣ ಗೌಡರು ತನ್ನ ಹುಟ್ಟೂರಿನ ಅಭಿವೃದ್ದಿಗೆ ಶ್ರಮಿಸಿದವರು. ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ, ಸಹಕಾರಿ ಸಂಘಗಳ ಅಧ್ಯಕ್ಷರಾಗಿ ಸಂಘಗಳ ಅಭಿವೃದ್ದಿ ಮಾಡಿರುವ ಖ್ಯಾತಿ ಇವರಿಗೆ ಸಲ್ಲಬೇಕು. ಸಮಾಜಕ್ಕೆ ಮಾದರಿ ಎಂಬಂತಿರುವ ದಂಪತಿಗಳು ಎಲ್ಲರನ್ನೂ ಒಂದೇ ರೀತಿಯಾಗಿ ಕಾಣುವ ಉತ್ತಮ ಸ್ವಭಾವದ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನೂ ಸಮಾಜ ಸೇವೆ ಮಾಡುವ ಅವಕಾಶ ಇವರಿಗೆ ಕೂಡಿಬರಲಿ ಎಂದು ಹಾರೈಸಿದರು. ಬೆಂಗಳೂರಿನ ಉದ್ಯಮಿ ಚಂದ್ರಶೇಖರ ಗೌಡರವರು ದಂಪತಿಗಳ ಬಗ್ಗೆ ಗೌರವದ ಮಾತುಗಳನ್ನಾಡಿ ಶುಭ ಹಾರೈಸಿದರು.

ಪುತ್ತೂರು-ಕಾವು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪಾವನರಾಮ , ಜಿಪಂ ಮಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕೊಳ್ತಿಗೆ ಗ್ರಾಪಂ ಸದಸ್ಯೆ ಯಶೋಧ ರವರು ದಂಪತಿಗಳಿಗೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಲಕ್ಷ್ಮಣ ಗೌಡರ ಹಿರಿಯ ಸಹೋದರರಾದ ಪಾಂಡುರಂಗ ಗೌಡ ದಂಪತಿಗಳಿಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಂಟಿಕಾನ ಲಕ್ಷ್ಮಣ ಗೌಡರು ನನ್ನ ೭೫ ನೇ ಹುಟ್ಟುಹಬ್ಬದಂದು ನನಗೆ ಕಾವು ಲಯನ್ಸ್ ಮತ್ತು ಅಮ್ಚಿನಡ್ಕ ನಾಗರಿಕ ಸಮಿತಿ ವತಿಯಿಂದ ಸನ್ಮಾನ ಮಾಡಿ ಗೌರವಿಸಿದ್ದಾರೆ. ನಾನು ನನ್ನ ಅಧಿಕಾರದ ಅವಧಿಯಲ್ಲಿ ಮಾಡಿರುವ ಸಮಾಜ ಸೇವೆಯನ್ನು ಗುರುತಿಸಿ ಗೌರವ ನೀಡಿರುವುದು ಅತ್ಯಂತ ಸಂತೋಷವನ್ನು ತಂದಿದೆ. ಹಿರಿಯರನ್ನು ಗೌರವಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ ಕಾವು ಹೇಮನಾಥ ಶೆಟ್ಟಿ ಬಳಗಕ್ಕೆ ನಾನು ಅಭಿನಂದನೆಯನ್ನು ಸಲ್ಲಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಪುತ್ತೂರು ಕಾವು ಲಯನ್ಸ್ ಕ್ಲಬ್ ಕಾರ್ಯದರ್ಶಿ ಜಗನ್ನಾಥ ರೈ ಗುತ್ತು, ಕ್ಲಬ್‌ನ ಸದಸ್ಯರಾದ ಕುಶಾಲಪ್ಪ ಗೌಡ ಅಮ್ಚಿನಡ್ಕ, ಸೇಸಪ್ಪ ಗೌಡ ಅಮ್ಚಿನಡ್ಕ, ಸೌಮ್ಯಾ, ಸುರೇಖಾ ಶೆಟ್ಟಿ ಕಾವು, ಬಾಬು, ರಾಜೇಂದ್ರ ಪೆರ್ಲಂಪಾಡಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here