- ರೂ.2.73ಕೋಟಿ ವ್ಯವಹಾರ, ರೂ.1.09ಲಕ್ಷ ಲಾಭ
ಪುತ್ತೂರು:ಬಿ.ಎಂ.ಎಸ್ ಆಟೋರಿಕ್ಷಾ ಚಾಲಕ ಮಾಲಕರ ಸೌಹಾರ್ದ ಸಹಕಾರಿಯು 2021-22ನೇ ಸಾಲಿನಲ್ಲಿ ರೂ.2,73,68,143 ವ್ಯವಹಾರ ನಡೆಸಿ ರೂ.1,09,491 ಲಾಭಗಳಿಸಿರುತ್ತದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಸುಧಾಕರ ನಾಯಕ್ ವಾರ್ಷಿಕ ಮಹಾಸಭೆಯಲ್ಲಿ ಹೇಳಿದರು.
ಸಂಘದ ಸಭೆಯು ಆ.30ರಂದು ಬಿಎಂಎಸ್ ಸಂಘದ ಕಚೇರಿ ವಠಾರದಲ್ಲಿ ನಡೆಯಿತು. ವರ್ಷಾಂತ್ಯಕ್ಕೆ ಸಂಘದಲ್ಲಿ 395 ಮಂದಿ ಸದಸ್ಯರಿದ್ದು ರೂ.6,95,100 ಪಾಲು ಬಂಡವಾಳ ಹೊಂದಿರುತ್ತದೆ. ರೂ.1,35,15,473 ವಿವಿಧ ರೀತಿಯ ಠೇವಣಿಗಳನ್ನು ಹೊಂದಿದೆ. ರೂ.57,50,400ನ್ನು ಸದಸ್ಯರಿಗೆ ವಿವಿಧ ರೀತಿಯ ಸಾಲಗಳಲ್ಲಿ ವಿತರಿಸಲಾಗಿದೆ. ಲಾಭಾಂಶವನ್ನು ನಿಯಮಾವಳಿಯಂತೆ ವಿಂಗಡನೆ ಮಾಡಲಾಗಿದೆ. ಸಂಘವು ಪಾರದರ್ಶಕವಾಗಿ ಆಡಳಿತ ನಡೆಸುತ್ತಿದೆ. ಆಟೋ ಚಾಲಕರಿಗೆ ಸಂಘವು ಬಹಳಷ್ಟು ಪ್ರಯೋಜನಕಾರಿಯಾಗಿದ್ದು ಸಂಘ ಸ್ಥಾಪಿಸಿರುವ ನಮ್ಮ ಉದ್ಧೇಶ ಈಡೇರಿದೆ.
ಉಪಾಧ್ಯಕ್ಷ ಬಿ.ಮೋಹನ ಹೆಗ್ಡೆ, ನಿರ್ದೇಶಕರಾದ ಬಿ.ಕೆ ದೇವಪ್ಪ ಗೌಡ, ರಾಘವೇಂದ್ರ ರೈ, ರಾಜೇಶ್ ಕೆ., ಜನಾರ್ದನ, ಬಿ.ಕೆ ಸುಂದರ ನಾಯ್ಕ, ಭಾಸ್ಕರ ನಾಯ್ಕ, ಹುಸೈನ್, ನಾರಾಯಣ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಬಂದಿ ಧನ್ಯಶ್ರೀ ಪ್ರಾರ್ಥಿಸಿದರು. ಪಿಗ್ಮಿ ಸಂಗ್ರಾಹಕ ರವಿಚಂದ್ರ ಸ್ವಾಗತಿಸಿದರು. ಮಹೇಶ್ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಬಾಲಕೃಷ್ಣ ಗೌಡ ವಂದಿಸಿದರು. ಸದಸ್ಯರಾದ ಉದಯ ಮರೀಲ್, ದಾಮೋದರ ಪುರುಷರಕಟ್ಟೆ, ಸೇಸಪ್ಪ, ಗೋಪಾಲ, ಸುರೇಶ್ ಗೌಡ, ರಮೇಶ್ ಗೌಡ, ನಝೀರ್, ಜಿನ್ನಪ್ಪ ನಾಯ್ಕ, ಪುರಂದರ ಪೂಜಾರಿ ಹೂ ನೀಡಿ ಸ್ವಾಗತಿಸಿದರು.