ಭ್ರಷ್ಟಾಚಾರಮುಕ್ತ ಭಾರತಕ್ಕಾಗಿ ಬಹುದೊಡ್ಡ ಭರವಸೆ ಮಾನ್ಯ ಮೋದಿಯವರು

0

‘ಪ್ರಧಾನಿ ಮೋದಿಯವರೇ, ನಾ ಕಾವೂಂಗ ನಾ ಕಾನೆದೂಂಗ ಜಾರಿಗೆ ತನ್ನಿ, ಊರನ್ನು ಲಂಚ ಭ್ರಷ್ಟಾಚಾರ ಮುಕ್ತಗೊಳಿಸಿ’ ಆ.29ರ ಸಂಪಾದಕೀಯ ಲೇಖನಕ್ಕೆ ಪ್ರತಿಕ್ರಿಯೆ

ಆಗಸ್ಟ್ 29ರಂದು ’ಸುದ್ದಿ ಬಿಡುಗಡೆ’ ಪತ್ರಿಕೆಯಲ್ಲಿ ಪ್ರಕಟಗೊಂಡ ಭ್ರಷ್ಟಾಚಾರದ ಕುರಿತಾದ ಸಂಪಾದಕೀಯ ಬರಹ ಸಕಾಲಿಕವಾದುದು. ಪ್ರಧಾನಿಗಳಾದ ನರೇಂದ್ರ ಮೋದಿಯವರಿಗೆ ಬರೆದ ಬಹಿರಂಗ ಪತ್ರದ ರೂಪದಲ್ಲಿರುವ ಈ ಬರಹದಲ್ಲಿ ಸಮಕಾಲೀನ ವಿದ್ಯಮಾನಗಳನ್ನು ಉಲ್ಲೇಖಿಸಲಾಗಿದೆ. ಭ್ರಷ್ಟಾಚಾರವನ್ನೇ ಉಸಿರಾಗಿಸಿಕೊಂಡವರಿಗೆ ಮಾತಿನ ಚಾಟಿಯೇಟು ಕೊಡಲಾಗಿದೆ.

ಪ್ರಸ್ತುತ ದಿನಮಾನಸದಲ್ಲಿ ದೇಶದ ಜನತೆ ಕಂಡ ಕೆಲವೇ ಕೆಲವು ಭ್ರಷ್ಟಾಚಾರ ರಹಿತ ನಾಯಕರಲ್ಲಿ ಮೋದಿಯವರು ಪ್ರಮುಖರು ಎನ್ನುವುದರಲ್ಲಿ ಎರಡು ಮಾತಿಲ್ಲ. ಎದುರು ನಿಂತವರ ಕಣ್ಣಲ್ಲಿ ಕಣ್ಣಿಟ್ಟು ’ಲಂಚ ತೆಗೆದುಕೊಳ್ಳಬಾರದು’ ಎನ್ನುವ ನೈತಿಕ ಸ್ಥೈರ್ಯವನ್ನು ಇವತ್ತಿಗೂ ಉಳಿಸಿಕೊಂಡ ವಿರಳಾತಿವಿರಳ ಜನನಾಯಕ ಮೋದಿಯವರು. ಸುದೀರ್ಘ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರದ ಆರೋಪದ ಪಿಸುಮಾತೂ ಕೇಳಿಬರದ ಹಾಗೆ ಆಡಳಿತ ನಡೆಸಿರುವುದು ಅವರ ಅತಿದೊಡ್ಡ ಸಾಧನೆ. ’ಯಥಾ ರಾಜ ತಥಾ ಪ್ರಜಾ’ ಎನ್ನುವ ಮಾತು ನಿಜಕ್ಕೂ ಅನ್ವಯವಾಗಿದ್ದರೆ ನಮ್ಮ ಇಡೀ ದೇಶ ಭ್ರಷ್ಟಾಚಾರಮುಕ್ತವಾಗಿರುತ್ತಿತ್ತು. ಆದರೆ ಕೆಲವು ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ನೌಕರರಿಗೆ ಲಂಚ ತೆಗೆದುಕೊಳ್ಳದಿದ್ದರೆ ನಿದ್ದೆಯೇ ಬರುವುದಿಲ್ಲ. ಅಷ್ಟರಮಟ್ಟಿಗೆ ಭ್ರಷ್ಟಾಚಾರಕ್ಕೆ ಒಗ್ಗಿಕೊಂಡಿದ್ದಾರೆ. ಇದು ದೊಡ್ಡ ದುರಂತ.

ಭ್ರಷ್ಟಾಚಾರಿಗಳಾಗಿ ಗುರುತಿಸಿಕೊಂಡವರಿಗೂ ಮರ್ಯಾದೆ ದೊರಕುವ ವಿಚಿತ್ರ ಕಾಲಘಟ್ಟದಲ್ಲಿ ನಾವಿದ್ದೇವೆ. ಸಮಾಜದ ಜನರು ಭ್ರಷ್ಟಾಚಾರಿಗಳನ್ನು ದೂರವಿಡಬೇಕು. ಭ್ರಷ್ಟಾಚಾರಿಗಳ ಬಗ್ಗೆ ದೂರು ನೀಡಿದವರಿಗೆ ರಕ್ಷಣೆ ದೊರಕುವಂತಾಗಬೇಕು. ಭ್ರಷ್ಟಾಚಾರ ಸಾಬೀತಾದರೆ ಅಂತಹವರ ಆಸ್ತಿಯನ್ನೇ ಮುಟ್ಟುಗೋಲು ಹಾಕಿಕೊಳ್ಳುವ ರೀತಿಯ ಕಠಿಣ ಕಾನೂನು ಸಮರ್ಪಕವಾಗಿ ಜಾರಿಗೆ ಬರಬೇಕು. ಇದೆಲ್ಲವೂ ಸಾಧ್ಯವಾದರೆ ನಮ್ಮ ದೇಶ ಭ್ರಷ್ಟಾಚಾರಮುಕ್ತವಾಗುತ್ತದೆ ಎಂಬ ಭಾವನೆ ದೇಶದ ಜನರಲ್ಲಿ ಮೂಡಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಮುಂದಿರುವ ಅತ್ಯಂತ ದೊಡ್ಡ ಭರವಸೆಯೆಂದರೆ ಮೋದಿಯವರು. ಮಾನ್ಯ ಪ್ರಧಾನಿಗಳು ಭ್ರಷ್ಟಾಚಾರ ನಿರ್ಮೂಲನಾ ಕೈಂಕರ್ಯದಲ್ಲಿ ಯಶಸ್ಸು ಗಳಿಸಲಿ ಎನ್ನುವ ಹಾರೈಕೆ ನನ್ನದು.

ವಿಶ್ವನಾಥ ಎನ್. ನೇರಳಕಟ್ಟೆ
ಸಂಶೋಧನಾ ವಿದ್ಯಾರ್ಥಿ, ಮಂಗಳೂರು, ವಿಶ್ವವಿದ್ಯಾನಿಲಯ

[box type=”info” bg=”#” color=”#” border=”#” radius=”21″]ಊರನ್ನು ಲಂಚ, ಭ್ರಷ್ಟಾಚಾರ ಮುಕ್ತವನ್ನಾಗಿಸುವ ಉದ್ದೇಶದೊಂದಿಗೆ ಪ್ರಧಾನಿ ಮೋದಿಯವರನ್ನುದ್ದೇಶಿಸಿ ಆ.29ರ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಪಾದಕೀಯ ಲೇಖನಕ್ಕೆ ಸಂಬಂಧಿಸಿದ ಅಭಿಪ್ರಾಯಗಳನ್ನು ಪತ್ರಿಕೆ, ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಲಂಚ,ಭ್ರಷ್ಟಾಚಾರ ವಿರುದ್ಧದ ಆಂದೋಲನವನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಓದುಗರು ಸಹಕರಿಸಬೇಕಾಗಿ ಕೋರಲಾಗಿದೆ.[/box]

LEAVE A REPLY

Please enter your comment!
Please enter your name here