ಸೆ.2: ಕೋಡಿಂಬಾಡಿ ಗಣೇಶೋತ್ಸವದ ಶೋಭಾಯಾತ್ರೆ ಪ್ರಯುಕ್ತ ಸೇಡಿಯಾಪು ಕ್ರೀಡಾಂಗಣದಲ್ಲಿ ಗಣೇಶ ಸಂಭ್ರಮ, ಡ್ಯಾನ್ಸ್ ಝಲಕ್, ಪ್ರತಿಭಾ ಪುರಸ್ಕಾರ

0

ಪುತ್ತೂರು: ಕೋಡಿಂಬಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಕೋಡಿಂಬಾಡಿ ಅಶ್ವತ್ಥಕಟ್ಟೆ ವಠಾರದಲ್ಲಿ ನಡೆಯುತ್ತಿರುವ 39ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆ ಸೆ.2ರಂದು ಸಂಜೆ ನಡೆಯಲಿದೆ. ಶೋಭಾಯಾತ್ರೆ ಪ್ರಯುಕ್ತ ಸೆ.2ರಂದು ಸಂಜೆ 4 ಗಂಟೆಗೆ ಸೇಡಿಯಾಪು ಫ್ರೆಂಡ್ಸ್ ಕ್ಲಬ್ ವತಿಯಿಂದ ಸೇಡಿಯಾಪು ಕ್ರೀಡಾಂಗಣದಲ್ಲಿ ‘ಗಣೇಶ ಸಂಭ್ರಮ’ ನಡೆಯಲಿದೆ.

ಈ ಸಂದರ್ಭದಲ್ಲಿ ದ.ಕ. ಜಿಲ್ಲೆಯ ಪ್ರಸಿದ್ಧ ತಂಡ ರಾಜ್ ಕ್ರಿಯೇಶನ್ ಅವರಿಂದ ಡ್ಯಾನ್ಸ್ ಝಲಕ್ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕರವರ ಪ್ರಾಯೋಜಕತ್ವದಲ್ಲಿ ಫ್ರೆಂಡ್ಸ್ ಕ್ಲಬ್ ಸೇಡಿಯಾಪು ಇದರ ಆಯೋಜನೆಯಲ್ಲಿ ನಡೆಯಲಿದೆ ಎಂದು‌ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಜಯಪ್ರಕಾಶ್ ಬದಿನಾರು, ಅಧ್ಯಕ್ಷ ಚಂದ್ರಶೇಖರ್ ಕುಲಾಲ್ ಮತ್ತು ಕಾರ್ಯದರ್ಶಿ ಸತೀಶ್ ಮಡಿವಾಳ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here