ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಅರಂತಬೈಲು ನಿವಾಸಿ ರಮ್ಲತ್ ಎಂಬವರ ಮನೆಯಿಂದ ಕಳೆದ ರಾತ್ರಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಗೊಂಡಿರುವ ಘಟನೆ ನಡೆದಿದೆ. ರಮ್ಲತ್ ಹಾಗೂ ಅವರ ಪತ್ನಿ ಖತೀಜಮ್ಮ ರವರು ದುಬೈಯಿಂದ ಬರುವ ತಮ್ಮ ಪುತ್ರನನ್ನು ಕರೆದು ತರಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋದವರು ತಡರಾತ್ರಿ ಮನೆಗೆ ಬಂದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಡಾ. ವೀರಯ್ಯ ಹಾಗೂ ಪೊಲೀಸ್ ಅಧಿಕಾರಿಗಳು, ಶ್ವಾನದಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.