ಪೆರ್ಲಂಪಾಡಿಯಲ್ಲಿ ವಿಜೃಂಭಿಸಿದ ಸಾರ್ವಜನಿಕ ಗಣೇಶೋತ್ಸವ – ವೈಭವದ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗಿ

0

ಕೊಳ್ತಿಗೆ: ಶ್ರೀ ಷಣ್ಮುಖದೇವ ಭಜನಾ ಮಂಡಳಿ ಮತ್ತು ಯಕ್ಷಗಾನ ಕಲಾಕೂಟ ಪೆರ್ಲಂಪಾಡಿ ಇದರ ವತಿಯಿಂದ ಆ.31ರಂದು ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂದಿರದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಜರುಗಿತು.

ಬೆಳಿಗ್ಗೆ ಗಂಟೆ 9ಕ್ಕೆ ಮೂರ್ತಿ ಪ್ರತಿಷ್ಠಾಪನೆ, ಬೆಳಗ್ಗೆ ಭಜನೆ ಪ್ರಾರಂಭಗೊಂಡು ಮಧ್ಯಾಹ್ನ ಮಂಗಳಾರತಿ ನಡೆದು  ಅನ್ನಸಂತರ್ಪಣೆ ನಡೆಯಿತು. ಭರತನಾಟ್ಯ ಕಾರ್ಯಕ್ರಮ, ಪೂರ್ಣಿಮಾ ಪೆರ್ಲಂಪಾಡಿ ರಚನೆ ಮಾಡಿರುವ ಬಾಯಂಬಾಡಿ ಷಣ್ಮುಖದೇವರ ಕನ್ನಡ ಭಕ್ತಿ ಗೀತೆ “ಶರಣು ಷಣ್ಮುಖನೇ” ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ಸಾರ್ವಜನಿಕರಿಗಾಗಿ ಭಕ್ತಿ ಗೀತೆ, ಭಾವ ಗೀತೆ, ಜನಪದ ಗೀತೆ, ಇನ್ನಿತರ ಸ್ಪರ್ಧೆ ಹಾಗೂ ಕಬಡ್ಡಿ, ಹಗ್ಗ ಜಗ್ಗಾಟ ಪಂದ್ಯಾಟ ನಡೆಯಿತು.

ಸಂಜೆ ಗಂಟೆ 6 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆದು, ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಷಣ್ಮುಖದೇವ ಭಜನಾ ಮಂಡಳಿ ಮತ್ತು ಯಕ್ಷಗಾನ ಕಲಾಕೂಟ ಪೆರ್ಲಂಪಾಡಿ ಇದರ ಅಧ್ಯಕ್ಷ ಮಂಜುನಾಥ್ ದುಗ್ಗಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ಯಾಮ ಸುಂದರ ರೈ ಕೆರೆಮೂಲೆ, ಷಣ್ಮುಖದೇವ ಪ್ರೌಢಶಾಲೆ ಪೆರ್ಲಂಪಾಡಿ ಇದರ ಮುಖ್ಯೋಪಾಧ್ಯಾಯ ಕೃಷ್ಣವೇಣಿ, ಯುವ ಉದ್ಯಮಿ RAYGLOW Technologies ಮಾಲಕ  ರಾಜನಾರಾಯಣ ಭಟ್ ಹಾಲುಮಜಲು, ಪ್ರಸಾದ್ ಜನರಲ್ ಸ್ಟೋರ್ ಪೆರ್ಲಂಪಾಡಿ ಇದರ ಮಾಲಕ  ಹರಿಪ್ರಸಾದ್ ಕುಂಟಿಕಾನ ಇವರು ವಹಿಸಿದ್ದರು.

ಅತಿಥಿಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಶುಭ ಹಾರೈಸಿದರು. ಶ್ರೀ ಷಣ್ಮುಖದೇವ ಭಜನಾ ಮಂಡಳಿ ಮತ್ತು ಯಕ್ಷಗಾನ ಕಲಾಕೂಟ ಪೆರ್ಲಂಪಾಡಿ ಇದರ ಅಧ್ಯಕ್ಷರಾದ ಮಂಜುನಾಥ್ ದುಗ್ಗಳ ಪ್ರಾಸ್ತಾವಿಕವಾಗಿ ಸ್ವಾಗತಿಸಿ, ಕಾರ್ಯದರ್ಶಿ ಶ್ರೀನಿವಾಸ ಕೊಂರ್ಬಡ್ಕ ದೊಡ್ಡಮನೆ ವಂದಿಸಿದರು.

ಸಂಜೆ ವಿಜೃಂಭಣೆಯಿಂದ ಶೋಭಾಯಾತ್ರೆಯು ಜರುಗಿತು. ಶೋಭಾಯಾತ್ರೆಯಲ್ಲಿ ಪೆರ್ಲಂಪಾಡಿ ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳಿಂದ, ಆದಿಶಕ್ತಿ ಮಹಿಳಾ ಭಜನಾ ಮಂಡಳಿ ಪೆರ್ಲಂಪಾಡಿ, ಶ್ರೀ ಮಹಮ್ಮಾಯಿ ಕುಣಿತ ಭಜನಾ ತಂಡ ಕೊಳ್ತಿಗೆ, ಪೆರ್ಲಂಪಾಡಿ ಇವರಿಂದ ಕುಣಿತ ಭಜನೆ ನಡೆಯಿತು. ವೈಭವದ ಶೋಭಾಯಾತ್ರೆಗೆ ಸಾವಿರಾರು ಮಂದಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here