ಸೆ.4: ಕೆಮ್ಮಾಯಿ ಶ್ರೀವಿಷ್ಣುಮಂಟಪದಲ್ಲಿ ಬೃಹತ್ ರಕ್ತದಾನ ಶಿಬಿರ

0

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು, ಕಾಮಧೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್ ಸುಳ್ಯ, ಚಿಕ್ಕಮುಡ್ನೂರು ಮತ್ತು ಬನ್ನೂರು ಒಕ್ಕಲಿಗ ಸ್ವಸಹಾಯ ಗುಂಪುಗಳ ಒಕ್ಕೂಟ ಇವುಗಳ ನೇತೃತ್ವದಲ್ಲಿ ಚಿಕ್ಕಮುಡ್ನೂರು ಮತ್ತು ಬನ್ನೂರು ಗ್ರಾಮದ ಸಾರ್ವಜನಿಕರಿಂದ ಸೆ.4ರಂದು ಬೆಳಿಗ್ಗೆ 9ರಿಂದ ಕೆಮ್ಮಾಯಿ ಶ್ರೀವಿಷ್ಣುಮಂಟಪದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.

ಕೆಮ್ಮಾಯಿ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಬೈಪಡಿತ್ತಾಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಚಿಕ್ಕಮುಡ್ನೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಬಡಾವು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ರಾಮಚಂದ್ರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಕಾಮಧೇನು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಬನ್ನೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ವಿಜಯಾ ಬ್ಯಾಂಕ್ ನಿವೃತ್ತ ಮೆನೇಜರ್ ಸೋಮಪ್ಪ ಗೌಡ ಬಡಾವು, ಕೃಷ್ಣನಗರ ಆಯುರ್ವೇದ ಕ್ಲಿನಿಕ್‌ನ ಡಾ.ಅನುಪಮಾ ಕೆ.ಎಸ್., ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯ ರಮೇಶ್ ಏಕ ಭಾಗವಹಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೇಲ್ವಿಚಾರಕಿ ಸುಮಲತಾ 9900748580, ಪ್ರೇರಕಿ ನಮಿತಾ 9591124434 ಸಂಪರ್ಕಿಸಬಹುದು ಎಂದು ಚಿಕ್ಕಮುಡ್ನೂರು ಒಕ್ಕಲಿಗ ಸ್ವಸಹಾಯ ಒಕ್ಕೂಟದ ಅಧ್ಯಕ್ಷ ತಿಮ್ಮಪ್ಪ ಗೌಡ ಕೆಮ್ಮಾಯಿ ಮತ್ತು ಬನ್ನೂರು ಒಕ್ಕಲಿಗ ಸ್ವಸಹಾಯ ಒಕ್ಕೂಟಗಳ ಅಧ್ಯಕ್ಷ ಸೋಮಪ್ಪ ಗೌಡ ಸಪ್ತಗಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here