








ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಡಬ ಆರಕ್ಷಕ ಠಾಣೆಯ ಪೋಲೀಸ್ ಉಪನಿರೀಕ್ಷಕ ಆಂಜನೇಯ ರೆಡ್ಡಿಯವರು ವಿದ್ಯಾರ್ಥಿ ಸಂಘದ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಾಲೇಜು ಜೀವನ ಅತ್ಯಂತ ಅಮೂಲ್ಯವಾದ ಅವಧಿ. ಅದನ್ನು ಗೋಲ್ಡನ್ ಲೈಫ್ ಎಂದು ಹೇಳಬಹುದು. ಹಾಗಾಗಿ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಸಮಯವನ್ನು ವ್ಯರ್ಥ ಮಾಡದೇ ತಮ್ಮ ಮುಂದಿನ ಜೀವನ ಕಟ್ಟಿಕೊಳ್ಳಲು ಬೇಕಾದ ಭದ್ರ ಬುನಾದಿಯನ್ನು ಹಾಕಿಕೊಳ್ಳಬೇಕು. ಹಾಗಾಗಿ ಈ ಕಾಲೇಜು ಜೀವನ ಬಹಳ ಪ್ರಮುಖ ಎಂದು ಹೇಳಿದರು. ಕಾನೂನು, ರಸ್ತೆ ಸುರಕ್ಷತೆ, ಮೌಲ್ಯ ಮತ್ತು ಕೌಶಲ ಆಧಾರಿತ ಕಲಿಕೆಯ ಬಗ್ಗೆ ಆಂಜನೇಯ ರೆಡ್ಡಿಯವರು ಮಾಹಿತಿ ನೀಡಿದರು.ಸಂಸ್ಥೆಯ ವತಿಯಿಂದ ಅತಿಥಿಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ.ಯವರು ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ನಾಯಕ ಗಗನ್ದೀಪ್, ಕಾರ್ಯದರ್ಶಿ ಅನನ್ಯ ಕೆ, ಜತೆ ಕಾರ್ಯದರ್ಶಿ ಸಮೀಕ್ಷಾ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ದಕ್ಷಾ ಬಿ.ಕೆ, ಮೋಹನ್ಕುಮಾರ್ ಬಿ, ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ನಾಯಕರಾದ ಶರತ್ಚಂದ, ಮೇಘಾ ಐ, ಕ್ರೀಡಾ ನಾಯಕರಾದ ಸಂಪ್ರೀತಾ ಪಿ ಮತ್ತು ಮನೀಶ್ ವೇದಿಕೆಯಲ್ಲಿದ್ದರು.
ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ಸತೀಶ್ ಜಿ.ಆರ್ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಶಿವಪ್ರಸಾದ್ ವಂದಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಗುಡ್ಡಪ್ಪ ಬಲ್ಯ ಕಾರ್ಯಕ್ರಮ ನಿರೂಪಿಸಿದರು.








 
            