ಸವಣೂರಿನಲ್ಲಿ 40ನೇ ವರುಷದ ಗಣೇಶೋತ್ಸವ, ಸಹಕಾರ ರತ್ನ ಪುರಸ್ಕೃತ ಸವಣೂರು ಸೀತಾರಾಮ ರೈಯವರಿಗೆ ಸನ್ಮಾನ

0

-ಚಿತ್ರ ಸಿಂಧೂರ್ ಸವಣೂರು

ಪುತ್ತೂರು: ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 40ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ ಜರಗಿತು. ಸೆ. 2ರಂದು ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಶಿವರಾಮ ಗೌಡ ಮೆದು ವಹಿಸಿದ್ದರು. ಉಪನ್ಯಾಸಕ ಡಾ.ರಾಜೇಶ್ ಬೆಜ್ಜಂಗಳರವರು ಮಾತನಾಡಿ ಧಾರ್ಮಿಕ ಆಚರಣೆಗಳು, ಹಬ್ಬಗಳು ಎಲ್ಲರನ್ನು ಒಗ್ಗೂಡಿಸುವ ಕಾರ್‍ಯವನ್ನು ಮಾಡಿದಾಗ ಸಮಾಜದಲ್ಲಿ ಐಕ್ಯತೆ ಮೂಡುತ್ತದೆ ಎಂದರು.

ಸನ್ಮಾನ
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಸವಣೂರು ಸೀತಾರಾಮ ರೈ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸೀತಾರಾಮ ರೈಯವರ ಪತ್ನಿ ಕಸ್ತೂರಿಕಲಾ ಎಸ್. ರೈ ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿದ ಸವಣೂರು ಸೀತಾರಾಮ ರೈರವರು ಮಾತನಾಡಿ ನನ್ನ ಊರಿನ ಸನ್ಮಾನ ನನಗೆ ತುಂಬಾ ಸಂತೋಷ ತಂದಿದೆ, ಗಣೇಶೋತ್ಸವ ಸಮಿತಿಯವರಿಗೆ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿಯಾಗಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಸ್ವಾಮಿರವರು ಸಂದರ್ಭೋಚಿತವಾಗಿ ಮತನಾಡಿದರು.

ವೇದಿಕೆಯಲ್ಲಿ ಸವಣೂರಿನ ಹಿರಿಯ ಉದ್ಯಮಿ ಸವಣೂರು ಎನ್. ಸುಂದರ ರೈ ಉಪಸ್ಥಿತರಿದ್ದರು. ಸಮಿತಿಯ ಕಾರ್‍ಯದರ್ಶಿ ಸುಧಾಕರ್ ರೈ ದೇವಸ್ಯ ವಂದಿಸಿದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಕಾರ್‍ಯಕ್ರಮ ನಿರೂಪಿಸಿದರು. ಸಮಿತಿಯ ಉಪಾಧ್ಯಕ್ಷ ರಾಘವ ಗೌಡ ಸವಣೂರು, ಕೋಶಾಧಿಕಾರಿ ರಾಮಕೃಷ್ಣ ಪ್ರಭು, ಜೊತೆ ಕಾರ್‍ಯದರ್ಶಿ ಪ್ರಭಾಕರ್ ಶೆಟ್ಟಿ ನಡುಬೈಲು, ಗಂಗಾಧರ್ ಸುಣ್ಣಾಜೆ, ಬೆಳಿಯಪ್ಪ ಗೌಡ ಚೌಕಿಮಠ, ಶಾರದಾ ಮಾಲೆತ್ತಾರುರವರುಗಳು ಸಹಕರಿಸಿದರು. ಸಂಜೆ ಸವಣೂರಿನಿಂದ ಸರ್ವೆ ಗೌರಿ ಹೊಳೆಯ ತನಕ ಗಣೇಶೋತ್ಸವದ ಶೋಭಾ ಯಾತ್ರೆ ನಡೆಯಿತು.

LEAVE A REPLY

Please enter your comment!
Please enter your name here