ಕಾವು: ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅವಳಿ ಪ್ರಶಸ್ತಿ

0

ವರದಿ: ಸುನೀಲ್ ಕಾವು
ಚಿತ್ರ: ಎನ್.ಎಸ್ ಕಾವು

ಸತತ 18ನೇ ಬಾರಿಗೆ ಉತ್ತಮ ಗುಣಮಟ್ಟ ಸಂಘ ಪ್ರಶಸ್ತಿ
ಮೊದಲ ಬಾರಿಗೆ ಉತ್ತಮ ಗುಣಮಟ್ಟ ಸಂಘದ ಕಾರ್ಯದರ್ಶಿ ಪ್ರಶಸ್ತಿ

ಕಾವು: ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಕೊಡಮಾಡುವ 2021-22ನೇ ಸಾಲಿನ ತಾಲೂಕುವಾರು ಅತ್ಯುತ್ತಮ ಗುಣಮಟ್ಟ ಸಂಘ ಪ್ರಶಸ್ತಿಯು ಈ ಬಾರಿಯೂ ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಲಭಿಸಿದೆ. ಆ ಮೂಲಕ ಸತತ 18ನೇ ಬಾರಿಗೆ ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘವು ಅತ್ಯುತ್ತಮ ಗುಣಮಟ್ಟ ಸಂಘ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಜತೆಗೆ 2021-22ನೇ ಸಾಲಿನ ಉತ್ತಮ ಗುಣಮಟ್ಟ ಸಂಘದ ಕಾರ್ಯದರ್ಶಿ ಪ್ರಶಸ್ತಿಯು ಸಂಘದ ಕಾರ್ಯದರ್ಶಿ ಬಾಲಕೃಷ್ಣ ಕೆದಿಲಾಯರವರಿಗೆ ಲಭಿಸಿದೆ.

ಸೆ.3ರಂದು ಮಂಗಳೂರಿನಲ್ಲಿ ನಡೆದ ದ.ಕ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಉಪಾಧ್ಯಕ್ಷ ಎಸ್.ಬಿ ಜಯರಾಮ ರೈ ಬಳಜ್ಜ, ನಿರ್ದೇಶಕರಾದ ನಾರಾಯಣ ಪ್ರಕಾಶ್‌ರವರು ಪ್ರಶಸ್ತಿ ಪ್ರದಾನ ಮಾಡಿದರು. ಸಂಘದ ಸ್ಥಾಪಕಾಧ್ಯಕ್ಷ, ಹಾಲಿ ನಿರ್ದೇಶಕರೂ ಆಗಿರುವ ನನ್ಯ ಅಚ್ಚುತ ಮೂಡೆತ್ತಾಯ, ಅಧ್ಯಕ್ಷ ಕೆ. ಕೃಷ್ಣಪ್ರಸಾದ್ ಮತ್ತು ಕಾರ್ಯದರ್ಶಿ ಬಾಲಕೃಷ್ಣ ಕೆದಿಲಾಯರವರು ಪ್ರಶಸ್ತಿ ಸ್ವೀಕರಿಸಿದರು.

LEAVE A REPLY

Please enter your comment!
Please enter your name here