ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ನಿಡ್ಪಳ್ಳಿ ಒಕ್ಕೂಟದ ತ್ರೈಮಾಸಿಕ ಸಭೆ ಸೆ.4 ರಂದು ನಿಡ್ಪಳ್ಳಿ ಶಾಲೆಯಲ್ಲಿ ಅಧ್ಯಕ್ಷ ರಾಧಾಕೃಷ್ಣ ಪಾಟಾಳಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಲಯ ಮೆಲ್ವೀಚಾರಕ ಶಿವಪ್ಪ. ಎನ್ ಮಾತನಾಡಿ ಯೋಜನೆಯ ಪ್ರತಿಯೊಂದು ಕಾರ್ಯಕ್ರಮದಲ್ಲಿ ಸದಸ್ಯರು ಹೆಚ್ಚು ಭಾಗವಹಿಸಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠವಾಗಿ ಮಾಡುವ ಅವಶ್ಯಕತೆ ಇದೆ. ಸಂಘದ ಸಭೆಯನ್ನು ಎಲ್ಲ ಸದಸ್ಯರು ಸೇರಿ ಮಾಡಿದರೆ ಮಾತ್ರ ಆ ಸಂಘ ಉತ್ತಮ ಸಂಘವಾಗುತ್ತದೆ. ಅಲ್ಲದೆ ಪ್ರತಿ ಒಕ್ಕೂಟ ಸಭೆಗೆ ಹಾಜರಾದರೆ ಮಾತ್ರ ಯೋಜನೆಯ ನಿಯಮ ಮತ್ತು ಹೊಸ ಕಾರ್ಯಕ್ರಮಗಳ ಬಗ್ಗೆ ನಮಗೆ ಮಾಹಿತಿ ಸಿಗುತ್ತದೆ.ಸ್ವ ಉದ್ಯೋಗ ಮಾಡಲು ಕಡಿಮೆ ಬಡ್ಡಿಯ ಸಾಲ ಪಡೆದು ಅದರ ಸದುಪಯೋಗ ಪಡಿಸಿ ಕೊಳ್ಳಬಹುದು ಎಂದು ಹೇಳಿ ಸಾಲಕ್ಕೆ ಜೀವ ಭದ್ರತೆ ನೀಡುವ ಬಗ್ಗೆ ಮತ್ತು ಸಂಘ ನಷ್ಟ ಹೊಂದಲು ಇರುವ ಕಾರಣ ಮತ್ತೀತರ ಬಗ್ಗೆ ಮಾಹಿತಿ ನೀಡಿದರು.
ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಜ್ಞಾನ ಜ್ಯೋತಿ ತಂಡದ ಸದಸ್ಯೆ ಲಲಿತ ಸ್ವಾಗತಿಸಿ ತಂಡದ ವರದಿ ವಾಚಿಸಿದರು. ಜವಾಬ್ದಾರಿ ತಂಡ ಮಾತೋಶ್ರೀ ತಂಡದ ಸದಸ್ಯ ವಿಶ್ವನಾಥ, ಧರ್ಮಶ್ರೀ ತಂಡದ ನವೀನ್ ಕುಮಾರ್ ಎಂ ತಂಡದ ವರದಿ ವಾಚಿಸಿ ವಂದಿಸಿದರು.ಒಕ್ಕೂಟದ ಕಾರ್ಯದರ್ಶಿ ಹೇಮಾ ಸಿ.ಎಚ್ ಒಕ್ಕೂಟದ ವರದಿ ವಾಚಿಸಿದರು. ಒಕ್ಕೂಟದ ಕೋಶಾಧಿಕಾರಿ ಸತೀಶ್. ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಳೆದ 20 ವರ್ಷಗಳಿಂದ ಒಕ್ಕೂಟದ ಸಭೆ ನಡೆಸಲು ಅವಕಾಶ ನೀಡಿರುವ ಈ ಶಾಲೆಯಲ್ಲಿ ಮಕ್ಕಳಿಗೆ ಬೆಂಚಿನ ಕೊರತೆ ಇದೆ.ಸಾಕಷ್ಟು ಬೆಂಚು ಇದ್ದರೆ ನಮ್ಮ ಸಭೆಗೂ ಕುಳಿತುಕೊಳ್ಳಲು ಅನುಕೂಲವಾಗತ್ತದೆ. ಆದುದರಿಂದ ಬೆಂಚು ಕೊಡುಗೆಯಾಗಿ ನೀಡಲು ಮನಸ್ಸಿದ್ದ ಸಂಘದವರು ಒಂದೊಂದು ಬೆಂಚು ನೀಡುವ ಬಗ್ಗೆ ಚರ್ಚಿಸಿ ಕೆಲವು ಸಂಘದವರು ವಾಗ್ದಾನ ಮಾಡಿದರು. ಅಲ್ಲದೆ ಶಾಲೆಗೆ ಒಂದು ರಂಗಮಂದಿರದ ಅವಶ್ಯಕತೆ ಇದ್ದು ಅದನ್ನು ಒದಗಿಸುವಂತೆ ಯೋಜನೆಗೆ ಮನವಿ ನೀಡುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.