ರಾಜರುಗಳಾಗಿದ್ದ ಬ್ರಿಟೀಷರ ವಿರುದ್ಧ ಹೋರಾಡಿ ಸತ್ತರೂ ರಾಮಯ್ಯ ಗೌಡ ಹೀರೋ ಆಗುತ್ತಾರೆ ಭಗತ್ ಸಿಂಗ್ ಮಡಿದರೂ ಅಮರರಾಗುತ್ತಾರೆ, ಜೈಲಿಗೆ ಹೋದ ನೆಹರೂ, ಸಾವರ್ಕರ್ ಫೋಟೋ ಹಿಡಿದು ಮೆರವಣಿಗೆ ಮಾಡುತ್ತೇವೆ

0

ಸ್ವಾತಂತ್ರ್ಯದ ನಂತರ ನಾವೇ ರಾಜರುಗಳಾಗಿದ್ದರೂ ನಮ್ಮ ಸೇವಕರಾದ ಜನಪ್ರತಿನಿಧಿಗಳಿಗೆ ಮತ್ತು ಅಧೀಕಾರಿಗಳಿಗೆ ಹೆದರಿ ಅವರ ಸೇವಕರಂತೆ ಬದುಕುತ್ತೇವೆ. ನಮ್ಮ ಫೋಟೋ ಎಲ್ಲಿ ಹಾಕಬೇಕು?

ಸ್ವಾತಂತ್ರ್ಯದ ನಂತರ ನಾವೇ ರಾಜರುಗಳಾಗಿದ್ದರೂ ನಮ್ಮ ಸೇವಕರಾದ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಹೆದರಿ ಅವರ ಸೇವಕರಂತೆ ಬದುಕುತ್ತೇವೆ. ನಮ್ಮ ಫೋಟೋ ಎಲ್ಲಿ ಹಾಕಬೇಕು?

1837ರಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಮಂಗಳೂರನ್ನು ವಶಪಡಿಸಿಕೊಂಡು ಭಾವುಟ ಹಾರಿಸಿ 13 ದಿನ ಆಡಳಿತ ನಡೆಸಿ ಸೋತು ಗಲ್ಲುಶಿಕ್ಷೆಗೆ ಒಳಗಾದ ಸುಳ್ಯದ ಕೆದಂಬಾಡಿ ರಾಮಯ್ಯ ಗೌಡರಂತವರ ಬಗ್ಗೆ ಹಮ್ಮೆ ಪಡುತ್ತೇವೆ. ಪುಸ್ತಕಗಳು ಬಂದಿವೆ. ನಾಟಕಗಳು ಆಗುತ್ತಿವೆ. ಪ್ರತಿಮೆ, ಮೆರವಣಿಗೆಯಲ್ಲಿ ಸಾಗಿವೆ. ಮಂಗಳೂರಿನ ಬಾವುಟಗುಡ್ಡೆಯಲ್ಲಿ ಅನಾವರಣಗೊಳ್ಳಲಿದೆ. ಭಗತ್‌ಸಿಂಗ್, ಸುಭಾಶ್ಚಂದ್ರ ಭೋಸ್ ಮೊದಲಾದವರು ಬ್ರಿಟೀಷರನ್ನು ಗೆಲ್ಲಲು ಸಾಧ್ಯವಾಗದೆ ಮಡಿದವರು ತಮ್ಮ ತ್ಯಾಗಕ್ಕಾಗಿ ಅಮರರಾಗಿದ್ದಾರೆ. ಬ್ರಿಟೀಷರ ವಿರುದ್ಧ ಹೋರಾಡಿದ ಎಲ್ಲಾ ರಾಜರುಗಳು ಚರಿತ್ರೆಯಲ್ಲಿ ದಾಖಲಾಗಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಾ ಗಾಂಧಿ ರಾಷ್ಟ್ರಪಿತರಾಗಿದ್ದಾರೆ. ಜವಾಹರ್‌ಲಾಲ್ ನೆಹರೂ, ಸಾವರ್ಕರ್ ಹಲವರುಗಳಿಗೆ ಹೀರೋಗಳಾಗಿ ಅವರ ಫೋಟೋಗಳನ್ನು ಹಿಡಿದು ಮೆರವಣಿಗೆ ಮಾಡುತ್ತೇವೆ. ಜೈಕಾರ ಕೂಗುತ್ತೇವೆ.

ಅವರೆಲ್ಲರ ತ್ಯಾಗ ಮತ್ತು ಹೋರಾಟದ ನಂತರ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ನಾವು ರಾಜರುಗಳಾಗಿದ್ದೇವೆ. ನಮಗೆ ಬೇಕಾದ ಆಡಳಿತಕ್ಕಾಗಿ ಜನಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ. ಅವರು ನಮ್ಮ ಉತ್ತಮ ಸೇವೆಗಾಗಿ ಕಾನೂನುಗಳನ್ನು ರೂಪಿಸಿದ್ದಾರೆ. ಅಧಿಕಾರಿಗಳನ್ನು ನೇಮಿಸಿದ್ದಾರೆ. ನಾವು ನಿಶ್ಚಿಂತೆಯಿಂದ ಯಾವುದೇ ತೊಂದರೆಗಳಿಲ್ಲದೆ ನಮಗೆ ಬೇಕಾದ ಕೆಲಸದ ಜವಾಬ್ದಾರಿಗಳನ್ನು ಅವರಿಗೆ ಬಿಟ್ಟು ಬದುಕಲು ಪ್ರಜಾಪ್ರಭುತ್ವದಲ್ಲಿ ಈ ವ್ಯವಸ್ಥೆ ಇದೆ. ನಮಗೆ ಹಿತ ಆಗದಿದ್ದರೆ ಜನಪ್ರತಿನಿಧಿಗಳನ್ನು ಬದಲಿಸಬಹುದು, ಅಧಿಕಾರಿಗಳನ್ನು ಕೆಲಸದಿಂದ ತೆಗೆಯಬಹುದು. ನಮ್ಮನ್ನು ಬೆಂಬಲಿಸಲು ನಮಗೆ ಅನ್ಯಾಯವಾದರೆ ಅದನ್ನು ಬೆಳಕಿಗೆ ತರಲು ಮಾಧ್ಯಮ ರಂಗವಿದೆ. ಇಷ್ಟೆಲ್ಲಾ ಇದ್ದರೂ ನಾವು ನಮ್ಮ ಸೇವಕರಾದ ಜನಪ್ರತಿನಿಧಿಗಳಿಗೆ, ಅಽಕಾರಿಗಳಿಗೆ ಹೆದರಿ ಅವರನ್ನು ರಾಜರುಗಳಂತೆ ನೋಡಿಕೊಂಡು ಅವರಿಗೆ ಲಂಚ ಕೊಟ್ಟು, ಅವರ ಗುಲಾಮರಂತೆ, ಹೇಡಿಗಳಂತೆ ಬದುಕುತ್ತಿದ್ದೇವಲ್ಲ ಯಾಕೆ? ನಮಗಾಗಿ ಜೀವ ತೆತ್ತ ಸ್ವಾತಂತ್ರ್ಯ ಹೋರಾಟಗಾರರು ಇಂದು ಬದುಕಿದ್ದರೆ ನಮ್ಮನ್ನು ನೋಡಿ ಸಂತೋಷ ಪಡುತ್ತಿದ್ದರೇ? ಅಥವಾ ಛೀಮಾರಿ ಹಾಕುತ್ತಿದ್ದರೇ? ನಾವೇ ಯೋಚಿಸಬೇಕು. ಅವರ ಆತ್ಮಕ್ಕೆ ಶಾಂತಿ ಇರಬಹುದೇ? ಉತ್ತಮ ಸೇವೆಗೆ ಪುರಸ್ಕಾರ ಮಾಡಿ, ಲಂಚ, ಭ್ರಷ್ಠಾಚಾರವನ್ನು ಬಹಿಷ್ಕರಿಸಿ, ನಿರ್ಮೂಲನೆ ಮಾಡಿ ಸ್ವತಂತ್ರರಾಗಿ ಬದುಕುವ ಬಗ್ಗೆ ಸಂವಾದ ಏರ್ಪಡಿಸೋಣ, ಪ್ರಯತ್ನಿಸೋಣ ಆಗದೇ?

LEAVE A REPLY

Please enter your comment!
Please enter your name here