ಪತ್ರಕರ್ತರ ಸಂಘದಲ್ಲಿ ಭಾರೀ ಅವ್ಯವಹಾರ ಲಕ್ಷಾಂತರ ರೂ ಗುಳುಂ!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪತ್ರಿಕಾಗೋಷ್ಠಿಯ ಹಣದಲ್ಲಿಯೂ ವಂಚನೆ; ಸಂಘದ ಅಕೌಂಟ್ ಪುಸ್ತಕವೇ ನಾಪತ್ತೆ

  •  ಲೆಕ್ಕ ಪತ್ರ ಸಂಪೂರ್ಣ ದೋಷಪೂರಿತವಾಗಿದೆ. ಪರಿಶೀಲನೆಗೆ ಚೆಕ್ ಪುಸ್ತಕವನ್ನೇ ನೀಡಿಲ್ಲ
  •  ಪ್ರಾಮಾಣಿಕತೆ, ದಕ್ಷತೆ ಇರುವುದಿಲ್ಲ. ಸದಸ್ಯರ ನಂಬಿಕೆಯನ್ನು ದುರುಪಯೋಗಪಡಿಸಲಾಗಿದೆ.
  • 25 ಸಾವಿರ ರೂ ಠೇವಣಿಯನ್ನೂ ಮರೆ ಮಾಚಲಾಗಿದೆ
  •  ಪತ್ರಿಕಾಗೋಷ್ಠಿ 180 ಎಂದು ಲೆಕ್ಕ ಸಿಕ್ಕಿದೆ. ದಾಖಲಾಗಿರುವುದು 148
  •  ಒಟ್ಟು 5,62407 ರೂಗಳನ್ನು ಬ್ಯಾಂಕಿನಲ್ಲಿ ಇರಿಸಬೇಕಾಗಿದೆ.
  •  ಸಹಕಾರಿ ಸಂಘದ ಅಧಿಕಾರಿಗಳಿಂದ ತನಿಖೆ ಸೂಕ್ತ

ಪುತ್ತೂರು: ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಬಳಿ ಸರಕಾರಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪುತ್ತೂರು ಪತ್ರಿಕಾ ಭವನದಲ್ಲಿ ನಡೆಯುತ್ತಿರುವ ಹೈಡ್ರಾಮ ಮತ್ತಷ್ಟು ರಂಗೇರಿದೆ. ಪ್ರತಿಷ್ಠಿತ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯ ವಿಚಾರಕ್ಕೆ ಸಂಬಂಧಿಸಿ ಬಹಳಷ್ಟು ಹೈಡ್ರಾಮ ಕಂಡಿದ್ದ ಪತ್ರಿಕಾ ಭವನವು ಇದೀಗ ಪತ್ರಕರ್ತರ ಸಂಘದಲ್ಲಿನ ಅವ್ಯವಹಾರದ ಮೂಲಕ ಮತ್ತೊಮ್ಮೆ ಸುದ್ದಿಯಾಗಿದೆ. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಆರ್ಥಿಕ ವ್ಯವಹಾರದಲ್ಲಿ ಭಾರೀ ಗೋಲ್‌ಮಾಲ್ ನಡೆದಿರುವುದು ಬಹಿರಂಗವಾಗಿದ್ದು ಲಕ್ಷಾಂತರ ರೂಪಾಯಿ ಗೋಲ್‌ಮಾಲ್ ಆಗಿರುವುದು ಬೆಳಕಿಗೆ ಬಂದಿದೆ. ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯ ಹಣವನ್ನೂ ಪತ್ರಕರ್ತರ ಸಂಘಕ್ಕೆ ಪಾವತಿಸದೆ ಗುಳುಂ ಮಾಡಿ ವಂಚಿಸಲಾಗಿದೆ. ಮಾತ್ರವಲ್ಲದೆ ಪತ್ರಕರ್ತರ ಸಂಘದ ಅಕೌಂಟ್ ಪುಸ್ತಕವೇ ನಾಪತ್ತೆಯಾಗಿದೆ. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂದೀಪ್ ಕುಮಾರ್ ಐ.ಬಿ. ಮತ್ತು ಕೋಶಾಽಕಾರಿ ಪ್ರಸಾದ್ ಬಲ್ನಾಡುರವರು ಪತ್ರಕರ್ತರ ಸಂಘದಲ್ಲಿ ಆರ್ಥಿಕ ಅವ್ಯವಹಾರ ನಡೆಸಿರುವುದು ಲೆಕ್ಕಪತ್ರ ಪರಿಶೀಲನೆಯ ವೇಳೆ ಕಂಡು ಬಂದಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಎಲ್ಲಾ ಬೆಳವಣಿಗೆಗಳು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕೆಲವರು ಪತ್ರಿಕಾ ಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

ಲೆಕ್ಕ ಪರಿಶೀಲನೆಯ ವೇಳೆ ಕಂಡು ಬಂದ ಲೋಪದೋಷಗಳು: ಪತ್ರಕರ್ತರ ಸಂಘದ ಲೆಕ್ಕಪತ್ರಗಳ ಪರಿಶೀಲನೆಯ ವೇಳೆ ಕಂಡು ಬಂದಿರುವ ಲೋಪದೋಷಗಳನ್ನು ಪಟ್ಟಿ ಮಾಡಿರುವ ಉದಯ ಕುಮಾರ್‌ರವರು ಅದನ್ನು ಪತ್ರಕರ್ತರ ಸಂಘದ ಅಽಕೃತ ವಾಟ್ಸಾಪ್ ಗ್ರೂಪ್‌ಗೆ ರವಾನೆ ಮಾಡಿದ್ದಾರೆ.

1.) ‘2022ರ ಜುಲಾಯಿ 9ರಂದು ನಡೆದ ಸಂಘದ ಮಹಾಸಭೆಯಲ್ಲಿ ಮಂಡಿಸಲಾದ ಲೆಕ್ಕಪತ್ರ ಸಂಪೂರ್ಣ ದೋಷಪೂರಿತವಾಗಿದ್ದು, ಯಾವುದೇ ನಿಖರ ಲೆಕ್ಕಾಚಾರಗಳನ್ನು ಹೊಂದಿರುವುದಿಲ್ಲ.

2.) ಆದಾಯದ ಸಾಲಿನಲ್ಲಿ ಪುತ್ತೂರಿನಲ್ಲಿ ನಡೆದ ಒಟ್ಟು ಪತ್ರಿಕಾಗೋಷ್ಠಿ 148 ಎಂದು ದಾಖಲಿಸಲಾಗಿದ್ದು, ಲೆಕ್ಕ ಪರಿಶೀಲನೆಯ ವೇಳೆ ಒಟ್ಟು ಪತ್ರಿಕಾಗೋಷ್ಠಿ 180 ಆಗಿರುವುದು ಕಂಡು ಬಂದಿದೆ. ಸದಸ್ಯತನದ ಶುಲ್ಕವಾಗಿ ರೂ 2600 ಎಂದು

3.) ಅಂದು ಮಂಡಿಸಲಾದ ಲೆಕ್ಕಪತ್ರದಲ್ಲಿ ದಾಖಲಾಗಿದ್ದು ಲೆಕ್ಕಪತ್ರ ಪರಿಶೀಲನೆಯ ವೇಳೆ 20 ಮಂದಿ ಸದಸ್ಯರಿಂದ ತಲಾ 200ರಂತೆ 4000 ರೂ ಸಂಗ್ರಹ ಆಗಿರುವುದು ಪತ್ತೆಯಾಗಿರುತ್ತದೆ.

4.) 2022ರ ಜುಲಾಯಿ 9ರಂದು ನಡೆದ ಸಂಘದ ಮಹಾಸಭೆಯಲ್ಲಿ ಮಂಡಿಸಲಾದ ಲೆಕ್ಕಪತ್ರದಲ್ಲಿ ಆದಾಯದ ವಿಭಾಗದ ಕ್ರಮ ಸಂಖ್ಯೆ 7 ಮತ್ತು 8ರಲ್ಲಿ ಪಾವತಿಸಲು ಬಾಕಿ ಎಂದು ಉಲ್ಲೇಖಿಸಲಾದ ರೂ 2,29,665 ಹಾಗೂ 44700 ರೂಪಾಯಿ ಹಣ ನಿಜವಾಗಿಯೂ ಬಾಕಿ ಇರುವುದು ಕಂಡು ಬಂದಿರುವುದಿಲ್ಲ. ಮಾತ್ರವಲ್ಲದೆ ಉಳಿಕೆ ದಾಖಲಿಸಲ್ಪಟ್ಟಿದೆ.

5.) 2022ರ ಜುಲಾಯಿ ೯ರಂದು ನಡೆದ ಸಂಘದ ಮಹಾಸಭೆಯಲ್ಲಿ ಮಂಡಿಸಲಾದ ಲೆಕಪತ್ರದಲ್ಲಿ ದಾಖಲಿಸಿದ ಖರ್ಚಿಗಿಂತಲೂ ಹೆಚ್ಚಿನ ಖರ್ಚನ್ನು ಲೆಕ್ಕ ಪರಿಶೀಲನೆಯ ವೇಳೆ ಕಾಣಿಸಲಾಗಿದ್ದು ಅಂತಹ ಖರ್ಚುಗಳಿಗೆ ಯಾವುದೇ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿರುವುದಿಲ್ಲ.

6.) 2022ರ ಜುಲಾಯಿ ೯ರಂದು ನಡೆದ ಸಂಘದ ಮಹಾಸಭೆಯಲ್ಲಿ ಮಂಡಿಸಲಾದ ಲೆಕ್ಕಪತ್ರದಲ್ಲಿ ದಾಖಲಿಸಿದ ಖರ್ಚುಗಳಿಗೆ ಸಂಬಂಧಿಸಿ ಕ್ರಮ ಸಂಖ್ಯೆ 8,9,13,14,20,21,23,24,25,26,27ಹಾಗೂ ಕ್ರಮ ಸಂಖ್ಯೆ 17ರಲ್ಲಿನ ಉಪಸಂಖ್ಯೆ: 11,17,18,21,22ರ ಖರ್ಚುಗಳಿಗೆ ಸಂಬಂಧಿಸಿದ ಬಿಲ್ಲುಗಳಾಗಲಿ ಪಾವತಿಸಿದ್ದ ರಶೀದಿಗಳಾಗಲಿ ಇರುವುದಿಲ್ಲ. ಆದ್ದರಿಂದ ಅಂತಹ ಖರ್ಚುಗಳು ಸಂಶಯಾಸ್ಪದವಾಗಿದೆ ಮತ್ತು ಮಾನ್ಯ ಮಾಡಲು ಅಸಾಧ್ಯವಾಗಿರುತ್ತದೆ.

7.) 2022ರ ಜುಲಾಯಿ ೯ರಂದು ನಡೆದ ಸಂಘದ ಮಹಾಸಭೆಯಲ್ಲಿ ಮಂಡಿಸಲಾದ ಲೆಕಪತ್ರದಲ್ಲಿ ದಾಖಲಿಸಿದ ಲೆಕ್ಕಪತ್ರಗಳನ್ನು ಗಮನಿಸಿದಾಗ ಮತ್ತು ಈ ಹಿಂದಿನ ಲೆಕ್ಕಪತ್ರಗಳನ್ನು ತುಲನೆ ಮಾಡಿದಾಗ ಲೆಕ್ಕಪತ್ರ ಸಲ್ಲಿಕೆಯಲ್ಲಿ ಪ್ರಾಮಾಣಿಕತೆಯಾಗಲಿ, ದಕ್ಷತೆಯಾಗಲಿ ಕಂಡು ಬಂದಿರುವುದಿಲ್ಲ. ಬದಲಾಗಿ ಮಹಾಸಭೆಯ ಸದಸ್ಯರ ನಂಬಿಕೆಯನ್ನು ದುರುಪಯೋಗಪಡಿಸಿದ ನಡೆ ಗೋಚರಿಸುತ್ತಿದೆ.

8.) ಸಂಘದ ಠೇವಣಿ ವಿಚಾರವಾಗಿ ಗತ ಸಾಲಿನಲ್ಲಿ ಉಲ್ಲೇಖಿಸಲಾದ ಮಾಹಿತಿಗಳು ಗಣನೀಯ ವ್ಯತ್ಯಾಸಕ್ಕೆ ಒಳಗಾಗುತ್ತಿದ್ದು, ಹಿಂದಿನ ಸಭೆಯಲ್ಲಿ ಮಂಡಿಸಿದ ಲೆಕ್ಕಪತ್ರದ ತುಲನೆಯನ್ನು ಮಾಡುವುದಿಲ್ಲ ಎಂಬ ಭಾವನೆಯಿಂದ ಮನಸೋ ಇಚ್ಚೆ ಠೇವಣಿಯ ಲೆಕ್ಕಾಚಾರವನ್ನು ಸಭೆಯ ಮುಂದಿರಿಸುವುದು ಕಂಡು ಬಂದಿದೆ. 2017-18ರ ಸಾಲಿನ ಖರ್ಚಿನಲ್ಲಿ ಕಾಣಿಸಲಾದ ೨೫ ಸಾವಿರ ರೂ ಠೇವಣಿಯನ್ನು ಬಳಿಕ ಮರೆ ಮಾಚಿರುವುದು ಅವ್ಯವಹಾರದ ಶಂಕೆಯನ್ನು ಮೂಡಿಸಿದೆ. ಮಾತ್ರವಲ್ಲದೆ 2017-18ರ ಸಾಲಿನಲ್ಲಿ ಠೇವಣಿಗಳಿಗೆ ದೊರೆತ ಬಡ್ಡಿ ಹಣ 1,08,739 ಎಂದು ದಾಖಲಿಸಿದ್ದು, ಆ ಹಣ ಬಳಿಕದ ವರ್ಷದಲ್ಲಿ ಮರೆಯಾಗಿರುವುದು ಕಂಡು ಬಂದಿದೆ.

9.) ಸಂಘದ ಮೇನೇಜರ್‌ಗೆ ನೀಡುವ ಮಾಸಿಕ ಗೌರವ ಧನದ ಪಾವತಿಯ ಬಗ್ಗೆ ಹಾಗೂ ಸ್ವೀಕೃತಿಯ ಬಗ್ಗೆ ಯಾವುದೇ ದಾಖಲೆಗಳು ಪರಿಶೀಲನೆಯ ವೇಳೆ ಕಂಡು ಬಂದಿರುವುದಿಲ್ಲ.

10.) ಸಂಘವು ನೋಂದಾಯಿತ ಸಂಸ್ಥೆಯಾಗಿದ್ದರೂ ಲೆಕ್ಕಪತ್ರಗಳ ನಿರ್ವಹಣೆ ತೀರಾ ಕಳವಳಕಾರಿಯಾಗಿದೆ. ಸಂಘ ಖರ್ಚು ವೆಚ್ಚಗಳ ಬಗ್ಗೆ ಕಾಲ ಕಾಲಕ್ಕೆ ದಾಖಲಿಸುವಂತಹ ಲೆಕ್ಕಪತ್ರದ (ಅಕೌಂಟ್ ಬುಕ್) ಪುಸ್ತಕವೇ ಇಲ್ಲದಿರುವುದು ವಿಸ್ಮಯ ಮೂಡಿಸಿದೆ.

11.) ಖರ್ಚುಗಳಿಗೆ ಸಂಬಂಧಿಸಿ ಸಲ್ಲಿಸಲಾದ ಹಲವು ಬಿಲ್ಲುಗಳು ಸರಕಾರ ಮಾನ್ಯ ಮಾಡದ ತೆರಿಗೆ ರಹಿತ ಬಿಲ್ಲುಗಳಾಗಿದ್ದು ಬಿಲ್ಲುಗಳ ಮಹತ್ವವನ್ನು ತಿಳಿಯದೇ ಬಿಲ್ಲುಗಳನ್ನು ಪಡೆದುಕೊಂಡಿರುವುದು ಕಂಡು ಬಂದಿದೆ.

12.) ಸಂಘದ ಸದಸ್ಯರ ಸಂಕಷ್ಟಕ್ಕೆ ಸ್ಪಂದಿಸುವ ಕ್ಷೇಮನಿಽ ಹಣವನ್ನು ಪಾವತಿಸುವುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬಾರದೆಂಬ ನಿರ್ಣಯವನ್ನು ಕೈಗೊಳ್ಳಲಾಗಿದೆಯೇ ವಿನಃ ಈ ಸಂಬಂಧ ದಾಖಲೆಯನ್ನು ಹೊಂದಿರಬೇಕಾಗಿರುವುದು ಕಡ್ಡಾಯವಾಗಿದೆ. ಪ್ರಸಕ್ತ ಪರಿಶೀಲನೆಯ ವೇಳೆ ಕ್ಷೇಮನಿಧಿ ಪಾವತಿಗೆ ಸಂಬಂಧಿಸಿ ಹಾಗೂ ಸ್ವೀಕೃತಿಗೆ ಸಂಬಂಽಸಿ ಯಾವುದೇ ದಾಖಲೆಗಳು ಕಂಡು ಬಂದಿರುವುದಿಲ್ಲ.

13.) ಲೆಕ್ಕಪತ್ರದ ಮಂಡನೆಯ ವೇಳೆ ಒಟ್ಟು ಪತ್ರಿಕಾಗೋಷ್ಠಿ ಎಂದು ಉಲ್ಲೇಖಿಸುವ ಬದಲು ಸಂಬಂಧಪಟ್ಟ ರಶೀದಿ ಪುಸ್ತಕದಲ್ಲಿನ ರಶೀದಿ ಸಂಖ್ಯೆಯ ನೆಲೆಯಲ್ಲಿ ಲೆಕ್ಕಪತ್ರ ಮಂಡಿಸಬೇಕಾಗಿದ್ದು, ಪತ್ರಿಕಾಗೋಷ್ಠಿಯ ರಶೀದಿ ನಿಡಿದ ಬಳಿಕ ರಶೀದಿಯನ್ನು ಕ್ಯಾನ್ಸಲ್ ಎಂದು ದಾಖಲಿಸುವುದನ್ನು ಮಾನ್ಯ ಮಾಡಲಾಗುವುದಿಲ್ಲ.

14.) ಲೆಕ್ಕಾಚಾರದಲ್ಲಿ ಗಣನೀಯ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಹಣ ಪಾವತಿಯ ಬಗ್ಗೆ ನಿಖರ ಮಾಹಿತಿ ಪಡೆಯುವ ಸಲುವಾಗಿ ಚೆಕ್ ನೀಡಿಕೆಯ ಕುರಿತಾದ ವಿವರವನ್ನು ಹೊಂದಿರುವ ಚೆಕ್ ಪುಸ್ತಕವನ್ನು ಪರಿಶೀಲನೆಗೆ ಸತತ ವಿನಂತಿಯ ಹೊರತಾಗಿಯೂ ಒದಗಿಸದ ಕಾರಣ ಯಾರೆಲ್ಲಾ ಹಣವನ್ನು ಯಾಕಾಗಿ ಸ್ವೀಕರಿಸಿದ್ದಾರೆಂಬ ಮಾಹಿತಿಯನ್ನು ಪಡೆಯಲು ಅಸಾಧ್ಯವಾಗಿರುತ್ತದೆ.

15.) ಲೆಕ್ಕಪತ್ರ ಪರಿಶೀಲನೆಯ ವೇಳೆ ಸಂಶಯಾಸ್ಪದ ಖರ್ಚುಗಳನ್ನು ಕಡೆಗಣಿಸಿ ಉಳಿಕೆಯಾದ ಮೊತ್ತ ರೂ 3,26,220 ಹಾಗೂ ಠೇವಣಿ ಮೊತ್ತಕ್ಕೆ ಕನಿಷ್ಠ 10 ಶೇ ಬಡ್ಡಿಯಂತೆ ಲೆಕ್ಕಾಚಾರಕ್ಕೆ ಒಳಪಡಿಸಿ ಬರಬೇಕಾಗಿದ್ದ ಮೊತ್ತದ ಉಳಿಕೆ ಹಣ ರೂ 2,36,187 ಸೇರಿಸಿ ಒಟ್ಟು 5,62,407 ರೂಪಾಯಿಯನ್ನು ಬ್ಯಾಂಕ್ ಖಾತೆಯಲ್ಲಿರಿಸಿ ದಾಖಲಿಸುವ ಹೊಣೆಗಾರಿಕೆ ಸಂಘದ ಆಡಳಿತ ಮಂಡಳಿಯದ್ದಾಗಿದೆ.

16.) ವಿಜಯಾ ಕ್ರೆಡಿಟ್ ಕೋ ಅಪರೇಟಿವ್ ಸಹಕಾರಿ ಸಂಸ್ಥೆಯಲ್ಲಿ ಸಂಘದ ಸದಸ್ಯರ ದಾಖಲೆಗಳನ್ನು ಇರಿಸಿ ಪಡಕೊಂಡಿರುವ ಸಾಲ ಚುಕ್ತವಾಗಿರುವ ಬಗ್ಗೆ ಲಿಖಿತ ದಾಖಲೆಗಳನ್ನು ಪಡೆದುಕೊಳ್ಳಲು ಗಮನ ಹರಿಸಬೇಕು ಹಾಗೂ ಈ ಸಂಬಂಧ ದಾಖಲೆಗಳನ್ನು ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಪ್ರಕಟೀಕರಿಸಬೇಕು.

17.) ಲೆಕ್ಕಪತ್ರಗಳ ಬಗ್ಗೆ ಸ್ಪಷ್ಠನೆ ಯಾ ಉಳಿಕೆ ಮೊತ್ತಗಳ ಬಗ್ಗೆ ಸಕಾರಾತ್ಮಕ ಸ್ಪಂದನವನ್ನುಹೊಣೆಗಾರಿಕೆಯುಳ್ಳ ಪದಾಽಕಾರಿಗಳು ತೋರದೇ ಇದ್ದಲ್ಲಿ ಸಂಘದ ಆರ್ಥಿಕ ನಿರ್ವಹಣೆಯ ಲೋಪದೋಷವನ್ನು ಸಹಕಾರಿ ಸಂಘಗಳ ತತ್‌ಸಂಬಂಧಿತ ಅಧಿಕಾರಿಗಳಿಂದ ತನಿಖೆಗೆ ಒಳಪಡಿಸುವುದು ಸೂಕ್ತ ಎಂದು ಸಂಘಕ್ಕೆ ಸಲಹೆ ನೀಡ ಬಯಸುತ್ತೇನೆ’ ಎಂದು ಉದಯ ಕುಮಾರ್ ಅವರು ಲೆಕ್ಕಪತ್ರ ಪರಿಶೀಲನಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿ ಅವ್ಯವಹಾರ ನಡೆಯುತ್ತಿರುವ ಕುರಿತು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಹಿರಿಯ ಪತ್ರಕರ್ತ ಶೇಖ್ ಜೈನುದ್ದೀನ್ ಅವರು ಈ ಹಿಂದೆಯೇ ಸಹಕಾರ ಸಂಘಗಳ ಇಲಾಖೆಗೆ ದೂರು ನೀಡಿದ್ದರು. ದೂರಿನ ತನಿಖೆ ನಡೆಸಿದ್ದ ಅಧಿಕಾರಿಗಳು ಪತ್ರಕರ್ತರ ಸಂಘದ ಆರ್ಥಿಕ ವ್ಯವಹಾರಗಳು ಸರಿಯಿಲ್ಲ ಎಂದು ವರದಿ ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಪತ್ರಕರ್ತರ ಸಂಘದ ಅವ್ಯವಹಾರ ಬಯಲಾದದ್ದು ಹೀಗೆ: ಕರ್ನಾಟಕ ರಾಜ್ಯ ಕಾರ್ಯನಿರತರ ಪತ್ರಕರ್ತರ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಽನದಲ್ಲಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಈ ಸಾಲಿನ ಮಹಾಸಭೆ ಮತ್ತು ನೂತನ ಪದಾಽಕಾರಿಗಳ ಆಯ್ಕೆಯನ್ನು 2022ರ ಜುಲೈ 9ರಂದು ಪತ್ರಿಕಾ ಭವನದಲ್ಲಿ ನಡೆಸುವುದು ಎಂದು ನಿರ್ಧರಿಸಲಾಗಿತ್ತು. ಆದರೆ ಪತ್ರಕರ್ತರ ಸಂಘದ ಸಭೆಯಲ್ಲಿ ಕೈಗೊಂಡಿರುವ ನಿರ್ಣಯದ ಪ್ರಕಾರ ಚುನಾವಣಾ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ಪತ್ರಕರ್ತರ ಸಂಘದ ಸದಸ್ಯರಾದ ದೀಪಕ್ ಉಬಾರ್ ಮತ್ತು ನಝೀರ್ ಕೊಯಿಲರವರು ಆಕ್ಷೇಪಣೆ ಸಲ್ಲಿಸಿ ಕಾನೂನು ಪ್ರಕಾರವೇ ಚುನಾವಣಾ ಪ್ರಕ್ರಿಯೆ ನಡೆಸಬೇಕು ಎಂದು ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಽಕಾರಿಯಾಗಿದ್ದ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಹಿರಿಯ ಸದಸ್ಯ ಸುಧಾಕರ ಪಡೀಲ್ ಅವರು ಅನಿರ್ದಿಷ್ಟಾವಽಯವರೆಗೆ ಚುನಾವಣಾ ಪ್ರಕ್ರಿಯೆ ಮುಂದೂಡಿದ್ದರು. ಪತ್ರಕರ್ತರ ಸಂಘದ ಖರ್ಚು ವೆಚ್ಚಗಳ ವಿವರ ಸರಿಯಾಗಿಲ್ಲ ಎಂಬ ವಿಚಾರವೂ ಮಹಾಸಭೆಯಲ್ಲಿ ಪ್ರಸ್ತಾಪವಾಗಿತ್ತಲ್ಲದೆ ಆಯವ್ಯಯಗಳನ್ನು ಪರೀಶೀಲನೆ ನಡೆಸಲು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರೂ ಹಿರಿಯ ಸದಸ್ಯರೂ ಆಗಿರುವ ಉದಯ ಕುಮಾರ್ ಯು.ಎಲ್. ಉಪ್ಪಿನಂಗಡಿರವರನ್ನು ನೇಮಕ ಮಾಡಲಾಗಿತ್ತು. ಪತ್ರಕರ್ತರ ಸಂಘದ ಖರ್ಚು ವೆಚ್ಚಗಳ ಸಂಪೂರ್ಣ ವಿವರ ನೀಡಬೇಕು, ವಿವರಗಳು ಸರಿ ಇಲ್ಲದಿದ್ದಲ್ಲಿ ಅದೇ ರೀತಿ ಷರಾ ಬರೆಯುತ್ತೇನೆ ಎಂದು ಉದಯ ಕುಮಾರ್ ತಿಳಿಸಿದ್ದರು. ಮಹಾಸಭೆಯಲ್ಲಿ ಪತ್ರಕರ್ತರ ಸಂಘದ ಲೆಕ್ಕಪತ್ರ ಮಂಡನೆಯ ವೇಳೆ ಹೈಡ್ರಾಮ ನಡೆದಿತ್ತಲ್ಲದೆ ಪತ್ರಕರ್ತರ ಸಂಘದ ಚುನಾವಣೆ ಪ್ರಕ್ರಿಯೆ ಮುಂದೂಡಿಕೆಯಾಗುವ ಮೂಲಕ ಮತ್ತೊಂದು ಸುತ್ತಿನ ಹೈಡ್ರಾಮ ನಡೆದಿತ್ತು. ಬಳಿಕ ಪದಾಽಕಾರಿಗಳ ಆಯ್ಕೆಗಾಗಿ ಮತ್ತೊಮ್ಮೆ ಚುನಾವಣಾ ಪ್ರಕ್ರಿಯೆ ನಿಗದಿಯಾಗಿ ನಾಮಪತ್ರ ಸಲ್ಲಿಕೆ ಆರಂಭ ಆಗುತ್ತಿದ್ದಂತೆಯೇ ಪತ್ರಕರ್ತರ ಸಂಘದ ಲೆಕ್ಕಪತ್ರದ ವಿವರ ಇನ್ನೂ ನನ್ನ ಕೈ ಸೇರದೇ ಇರುವುದರಿಂದ ಮತ್ತು ಸರಿಯಾಗಿ ಲೆಕ್ಕಪತ್ರ ಮಂಡನೆ ಆದ ಬಳಿಕವೇ ಚುನಾವಣೆ ನಡೆಯಬೇಕಿರುವುದರಿಂದ ಈಗ ನಿಗದಿಯಾಗಿರುವ ಚುನಾವಣಾ ಪ್ರಕ್ರಿಯೆಯನ್ನು ರದ್ದು ಪಡಿಸಬೇಕು ಎಂದು ಉದಯ ಕುಮಾರ್ ಚುನಾವಣಾಽಕಾರಿಗೆ ಮನವಿ ಸಲ್ಲಿಸಿದ್ದರು.

ಮನವಿ ಪುರಸ್ಕರಿಸಿದ್ದ ಚುನಾವಣಾಽಕಾರಿ ಸುಧಾಕರ ಪಡೀಲ್ ಅವರು ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದು ಪಡಿಸಿದ್ದರು. ಈ ಮೂಲಕ ಪತ್ರಿಕಾ ಭವನದಲ್ಲಿ ಮತ್ತೊಂದು ಸುತ್ತಿನ ಹೈಡ್ರಾಮ ನಡೆದಿತ್ತು. ಬಳಿಕ ಉದಯ ಕುಮಾರ್‌ರವರು ಪತ್ರಿಕಾ ಭವನದಲ್ಲಿ ಲೆಕ್ಕಪತ್ರದ ಪರಿಶೀಲನೆ ನಡೆಸಿದ್ದರು. ಕಾರ್ಯದರ್ಶಿ ಸಂದೀಪ್ ಕುಮಾರ್ ಐ.ಬಿ. ಮತ್ತು ಕೋಶಾಧಿಕಾರಿ ಪ್ರಸಾದ್ ಬಲ್ನಾಡು ಅಲಿಯಾಸ್ ಕೃಷ್ಣಪ್ರಸಾದ್ ಬಲ್ನಾಡು ಅವರು ಸರಿಯಾಗಿ ಲೆಕ್ಕಪತ್ರದ ವಿವರ ನೀಡಲು ವಿ-ಲರಾಗಿದ್ದರು. ಈ ಮಧ್ಯೆ ಸಂಘದ ಉಪಾಧ್ಯಕ್ಷರಾಗಿದ್ದ ಅನೀಶ್ ಕುಮಾರ್ ಪತ್ರಿಕಾ ಭವನದ ಪ್ರೆಸ್‌ಮೀಟ್ ನಡೆಯುವ ಹಾಲ್‌ನಲ್ಲಿ ರಾತ್ರಿ ಕುಡಿದು ಮಲಗಿದ್ದನ್ನು ಕಂಡ ಅಧ್ಯಕ್ಷ ನಾಳರವರು ಅನೀಶ್ ಕುಮಾರ್‌ರ ಅವ್ಯವಹಾರಗಳನ್ನು ಉಲ್ಲೇಖಿಸಿ ಕೂಡಲೇ ಕಾರ್ಯರೂಪಕ್ಕೆ ಬರುವಂತೆ ಅನೀಶ್ ಕುಮಾರ್‌ರವರನ್ನು ಸಂಘದಿಂದ ಉಚ್ಛಾಟಿಸಿ ಪತ್ರಿಕಾಭವನಕ್ಕೆ ಬಾರದಂತೆ ಆದೆಶ ನಿಡಿದ್ದರು. ಪತ್ರಿಕಾ ಸಂಘಕ್ಕೆ ಮಹಾಸಭೆ ನಡೆಯುವ ಸಂದರ್ಭದಲ್ಲಿ ಅನೀಶ್ ಕುಮಾರ್ ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದರಿಂದ ಮತ್ತೆ ಅವರನ್ನು ಸಂಘಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ತನ್ನ ಉಚ್ಛಾಟನೆಯಿಂದ ಅಸಮಾಧಾನಗೊಂಡಿದ್ದ ಅನೀಶ್ ಕುಮಾರ್ ಮತ್ತು ಅವರ ತಂಡ ಪತ್ರಕರ್ತರ ಸಂಘಕ್ಕೆ ಹೇಗಾದರೂ ಚುನಾವಣೆ ನಡೆಸಿ ಶ್ರವಣ್ ಕುಮಾರ್ ನಾಳರವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲೇಬೇಕು ಎಂದು ಪಣತೊಟ್ಟಿದ್ದರು. ಪತ್ರಕರ್ತರ ಸಂಘದ ಉಚ್ಚಾಟಿತ ಉಪಾಧ್ಯಕ್ಷ ಅನೀಶ್ ಕುಮಾರ್ ಮತ್ತು ಅನೀಶ್ ಕುಮಾರ್ ಅವರ ಬೆಂಬಲಿಗರಾದ ಶಶಿಧರ ರೈ ಕುತ್ಯಾಳ, ಮೇಘ ಪಾಲೆತ್ತಡಿ, ಸುಧಾಕರ ಸುವರ್ಣ ತಿಂಗಳಾಡಿ, ಅಜಿತ್ ಕುಮಾರ್, ಸಂದೀಪ್ ಕುಮಾರ್ ಐ.ಬಿ, ಪ್ರಸಾದ್ ಬಲ್ನಾಡು, ಪ್ರವೀಣ್ ಕುಮಾರ್ ಬೊಳುವಾರು ಮತ್ತಿತರರು ಸಂಶುದ್ದೀನ್ ಸಂಪ್ಯರವರ ಮೂಲಕ ನಾಮಪತ್ರ ಸ್ವೀಕಾರ ಪ್ರಕ್ರಿಯೆ ನಡೆಸಿ ಚುನಾವಣೆಗೆ ತಯಾರಿ ನಡೆಸಿದ್ದರು. ಇದು ಪತ್ರಕರ್ತರ ಸಂಘದಲ್ಲಿನ ಮತ್ತೊಂದು ಸುತ್ತಿನ ಹೈಡ್ರಾಮಕ್ಕೆ ಸಾಕ್ಷಿಯಾಗಿತ್ತು. ಅಲ್ಲದೆ ಕಾನೂನು ಸಮರಕ್ಕೆ ವೇದಿಕೆ ಸಿದ್ಧಪಡಿಸಿತ್ತು. ಸಂಶುದ್ದೀನ್ ಸಂಪ್ಯರವರು ನಿಯಮ ಬಾಹಿರವಾಗಿ ನಾಮಪತ್ರ ಸ್ವೀಕರಿಸಿರುವುದನ್ನು ಚುನಾವಣಾಽಕಾರಿ ಸುಧಾಕರ ಪಡೀಲ್ ಪ್ರಶ್ನಿಸಿದ್ದರಿಂದ ಮತ್ತು ಚುನಾವಣಾ ಪ್ರಕ್ರಿಯೆಗೆ ತಡೆ ನೀಡುವಂತೆ ಸೂಚಿಸಿದ್ದರಿಂದ ಚುನಾವಣೆ ನಡೆಸಲೇಬೇಕು ಎಂದು ಪಣ ತೊಟ್ಟಿದ್ದವರಿಗೆ ಹಿನ್ನಡೆಯಾಗಿತ್ತು. ಆದರೂ ಪತ್ರಕರ್ತರ ಸಂಘಕ್ಕೆ ಅವಿರೋಧವಾಗಿ ತಮಗೆ ಬೇಕಾದವರನ್ನು ಪದಾಽಕಾರಿಗಳನ್ನಾಗಿ ಆಯ್ಕೆ ಮಾಡಲು ಅನೀಶ್ ತಂಡ ಪ್ರಯತ್ನ ಮುಂದುವರಿಸಿತ್ತು.

ಈ ನಡುವೆ ಲೆಕ್ಕಪತ್ರದ ವಿಚಾರಕ್ಕೆ ಸಂಬಂಧಿಸಿ ನಿರಂತರವಾಗಿ ಉದಯ ಕುಮಾರ್‌ರವರು ಪತ್ರಕರ್ತರ ಸಂಘದ ಲೆಕ್ಕಪತ್ರದ ವಿವರ ನೀಡುವಂತೆ ಕಾರ್ಯದರ್ಶಿ ಸಂದೀಪ್ ಕುಮಾರ್ ಮತ್ತು ಕೋಶಾಽಕಾರಿ ಪ್ರಸಾದ್ ಬಲ್ನಾಡುರವರಿಗೆ ಸೂಚಿಸಿದ್ದರು. ಅರ್ಧಂಬರ್ಧವಾಗಿ ಲೆಕ್ಕಪತ್ರ ನೀಡಿದ್ದ ಸಂದೀಪ್ ಕುಮಾರ್ ಮತ್ತು ಪ್ರಸಾದ್ ಬಲ್ನಾಡುರವರು ಸರಿಯಾದ ವಿವರ ನೀಡಿರಲಿಲ್ಲ. ಲೆಕ್ಕಪತ್ರದ ಸರಿಯಾದ ದಾಖಲೆಯನ್ನೂ ನೀಡಿರಲಿಲ್ಲ. ಇದರಿಂದಾಗಿ ಪ್ರತಿಷ್ಠಿತ ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿ ಭಾರೀ ಅವ್ಯವಹಾರ, ಗೋಲ್‌ಮಾಲ್, ವಂಚನೆ ನಡೆದಿರುವ ಶಂಕೆ ವ್ಯಕ್ತವಾಗಿತ್ತು. ಈ ಅವ್ಯವಹಾರಗಳನ್ನು ಮುಚ್ಚಿ ಹಾಕುವುದಕ್ಕಾಗಿಯೇ ಪತ್ರಕರ್ತರ ಸಂಘಕ್ಕೆ ತರಾತುರಿಯಲ್ಲಿ ಚುನಾವಣೆ ನಡೆಸಿ ತಮಗೆ ಬೇಕಾದವರನ್ನು ಅಧ್ಯಕ್ಷರು ಮತ್ತು ಪದಾಽಕಾರಿಗಳನ್ನಾಗಿ ಆಯ್ಕೆ ಮಾಡಿಕೊಂಡು ಅವ್ಯವಹಾರವನ್ನು ಮುಚ್ಚಿ ಹಾಕುವ ಯೋಜನೆ ರೂಪಿತವಾಗಿತ್ತು ಮತ್ತು ಹೊಸದಾಗಿ ಸದಸ್ಯತ್ವ ಬಯಸಿದವರಿಗೆ ಪತ್ರಕರ್ತರ ಸಂಘದ ಸದಸ್ಯತ್ವ ನೀಡಲು ನಿರಾಕರಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಪದೇ ಪದೇ ಮಾಹಿತಿ ಕೇಳಿದ್ದರೂ ಸರಿಯಾದ ಲೆಕ್ಕಪತ್ರ ನೀಡದೇ ವಂಚಿಸಲಾಗುತ್ತಿದ್ದುದರಿಂದ ಗರಂ ಆಗಿದ್ದ ಉದಯ ಕುಮಾರ್ ಅವರು ಪತ್ರಕರ್ತರ ಸಂಘಕ್ಕೆ ಲೆಕ್ಕಪತ್ರದ ಕುರಿತು ಇದೀಗ ಅಂತಿಮ ವರದಿ ನೀಡಿದ್ದು ಪತ್ರಕರ್ತರ ಸಂಘದಲ್ಲಿ ಅವ್ಯವಹಾರ ನಡೆದಿರುವುದನ್ನು ಬಯಲಿಗೆಳೆದಿದ್ದಾರೆ. ಅಲ್ಲದೆ, ಲೆಕ್ಕಪತ್ರ ಪರಿಶೀಲನೆಯ ವೇಳೆ ಕಂಡು ಬಂದ ಲೋಪದೋಷಗಳ ಪಟ್ಟಿ ಮಾಡಿದ್ದಾರೆ. ಸಂಘದ ಕೋಶಾಧಿಕಾರಿ ಪ್ರಸಾದ್ ಬಲ್ನಾಡು ಮತ್ತು ಕಾರ್ಯದರ್ಶಿ ಸಂದೀಪ್ ಕುಮಾರ್ ಅದಕ್ಕೆ ಸಂಘದ ಅಧ್ಯಕ್ಷರೇ ಹೊಣೆಗಾರರು ಎಂದು ಹೇಳುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯೇ ಹೊಣೆಗಾರರೆಂದು ಅಧ್ಯಕ್ಷ ಶ್ರವಣ್ ಕುಮಾರ್ ನಾಳರವರು ಸ್ಪಷ್ಟೀಕರಣ ನೀಡಿರುತ್ತಾರೆ.

ಅವ್ಯವಹಾರ ಪತ್ತೆ ಹಚ್ಚಿದ ಉದಯ ಕುಮಾರ್

ಪತ್ರಕರ್ತರ ಸಂಘದ ಲೆಕ್ಕಪತ್ರ ಪರಿಶೀಲನೆಗಾಗಿ ಮಹಾಸಭೆಯಲ್ಲಿ ನೇಮಕಗೊಂಡಿದ್ದ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಉದಯ ಕುಮಾರ್ ಯು.ಎಲ್.ರವರು ಪತ್ರಕರ್ತರ ಸಂಘದ ಅವ್ಯವಹಾರವನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೆ, ಲೆಕ್ಕಪತ್ರ ಪರಿಶೀಲನೆಯ ವೇಳೆ ಕಂಡು ಬಂದ ಲೋಪದೋಷಗಳನ್ನು ಪಟ್ಟಿ ಮಾಡಿದ್ದಾರೆ. ‘ಲೆಕ್ಕಪತ್ರಗಳನ್ನು ಗಮನಿಸಿದಾಗ ಮತ್ತು ಈ ಹಿಂದಿನ ಲೆಕ್ಕಪತ್ರಗಳನ್ನು ತುಲನೆ ಮಾಡಿದಾಗ ಲೆಕ್ಕಪತ್ರ ಸಲ್ಲಿಕೆಯಲ್ಲಿ ಪ್ರಾಮಾಣಿಕತೆಯಾಗಲಿ, ದಕ್ಷತೆಯಾಗಲಿ ಕಂಡು ಬಂದಿರುವುದಿಲ್ಲ’ ಎಂದು ಗಂಭೀರ ವಿಚಾರವನ್ನು ವರದಿಯಲ್ಲಿ ಉಲ್ಲೇಖಿಸಿರುವ ಉದಯ ಕುಮಾರ್‌ರವರು ಸಭೆಯ ಸದಸ್ಯರ ನಂಬಿಕೆಯನ್ನು ದುರುಪಯೋಗಪಡಿಸಿದ ನಡೆ ಗೋಚರಿಸುತ್ತಿದೆ ಎಂದು ತಿಳಿಸಿದ್ದಾರೆ. 2017-18ರ ಸಾಲಿನ ಖರ್ಚಿನಲ್ಲಿ ಕಾಣಿಸಲಾದ 25 ಸಾವಿರ ರೂ ಠೇವಣಿಯನ್ನು ಬಳಿಕ ಮರೆ ಮಾಚಿರುವುದು ಅವ್ಯವಹಾರದ ಶಂಕೆಯನ್ನು ಮೂಡಿಸಿದೆ ಎಂದು ಉಲ್ಲೇಖಿಸಿರುವ ಉದಯ ಕುಮಾರ್‌ರವರು ಸಂಘವು ನೋಂದಾಯಿತ ಸಂಸ್ಥೆಯಾಗಿದ್ದರೂ ಲೆಕ್ಕಪತ್ರಗಳ ನಿರ್ವಹಣೆ ತೀರಾ ಕಳವಳಕಾರಿಯಾಗಿದೆ. ಸಂಘವು ಖರ್ಚು ವೆಚ್ಚಗಳ ಬಗ್ಗೆ ಕಾಲಕಾಲಕ್ಕೆ ದಾಖಲಿಸುವಂತಹ ಲೆಕ್ಕಪತ್ರದ ಪುಸ್ತಕವೇ ಇಲ್ಲದಿರುವುದು ವಿಸ್ಮಯ ಮೂಡಿಸಿದೆ. ಲೆಕ್ಕಾಚಾರದಲ್ಲಿ ಗಣನೀಯ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಹಣ ಪಾವತಿಯ ಬಗ್ಗೆ ನಿಖರ ಮಾಹಿತಿ ಪಡೆಯುವ ಸಲುವಾಗಿ ಚೆಕ್ ನೀಡಿಕೆಯ ಕುರಿತಾದ ವಿವರವನ್ನು ಹೊಂದಿರುವ ಚೆಕ್ ಪುಸ್ತಕವನ್ನು ಪರಿಶೀಲನೆಗೆ ಸತತ ವಿನಂತಿಯ ಹೊರತಾಗಿಯೂ ಒದಗಿಸದ ಕಾರಣ ಯಾರೆಲ್ಲಾ ಹಣವನ್ನು ಯಾಕಾಗಿ ಸ್ವೀಕರಿಸಿದ್ದಾರೆಂಬ ಮಾಹಿತಿಯನ್ನು ಪಡೆಯಲು ಅಸಾಧ್ಯವಾಗಿರುತ್ತದೆ. ಆದ್ದರಿಂದ ಸಹಕಾರಿ ಸಂಘಗಳ ತತ್‌ಸಂಬಂಽತ ಅಽಕಾರಿಗಳಿಂದ ತನಿಖೆಗೆ ಒಳಪಡಿಸುವುದು ಸೂಕ್ತ ಎಂದು ಸಂಘಕ್ಕೆ ಸಲಹೆ ನೀಡ ಬಯಸುತ್ತೇನೆ’ ಎಂದು ಉದಯ ಕುಮಾರ್ ಅವರು ಲೆಕ್ಕಪತ್ರ ಪರಿಶೀಲನಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಬೈಲಾ ಪ್ರಕಾರ ಸಂಘದ ಲೆಕ್ಕಪತ್ರ ಜವಾಬ್ದಾರಿ ಕೋಶಾಧಿಕಾರಿಗೆ, ಲೆಕ್ಕ ಪತ್ರಗಳ ದಾಖಲೆ ನಿರ್ವಹಣೆ ಕಾರ್ಯದರ್ಶಿಗಳಿಗೆ ಅನ್ವಯ. ಲೆಕ್ಕ ಪರಿಶೋಧಕರು ನೀಡಿದ ಹೆಚ್ಚುವರಿ ಲೆಕ್ಕಗಳಿಗೆ ತಕ್ಷಣಕ್ಕೆ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳುವುದು, ಹಾಗೂ ಸಂಘದ ಜವಾಬ್ದಾರಿ ಪೂರ್ಣವಾಗಿ ನಿಭಾಯಿಸುವುದು ಎಂದು ಸೂಚಿಸಲಾಗಿದೆ

ಶ್ರವಣ್ ಕುಮಾರ್ ನಾಳ, ಅಧ್ಯಕ್ಷರು ಪುತ್ತೂರು ಪತ್ರಕರ್ತರ ಸಂಘ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.