






- ನೂರಕ್ಕೂ ಅಧಿಕ ವಾಹನಗಳಲ್ಲಿ ಗುಪ್ತವಾಗಿ ಬಂದ ಅಧಿಕಾರಿಗಳು
- ಶಂಕಿತರ ವಿಚಾರಣೆ
ಪುತ್ತೂರು: ಜಲೈ 26ರಂದು ರಾತ್ರಿ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯವ ಮುಂದಾಳು ಪ್ರವೀಣ್ ನೆಟ್ಟಾರು(34ವ)ರವರ ಹತ್ಯೆ ಪ್ರಕರಣದ ತನಿಖೆಗೆ ಇಳಿದಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸೆ.6ರಂದು ಪುತ್ತೂರು, ಉಪ್ಪಿನಂಗಡಿ ಮತ್ತು ಕಬಕ ಪರಿಸರದಲ್ಲಿ ದಾಳಿ ನಡೆಸಿದ್ದಾರೆ.








ಪ್ರವೀಣ್ ಹತ್ಯೆಯಲ್ಲಿ ನೇರ ಭಾಗಿಯಾದವರು ಮತ್ತು ಸಹಕರಿಸಿದವರು ಯಾರೆಂದು ಪಕ್ಕಾ ಮಾಹಿತಿ ಕಲೆ ಹಾಕಿರುವ ತನಿಖಾ ದಳದ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.
ಸುಮಾರು ನೂರಕ್ಕೂ ಅಧಿಕ ವಾಹನಗಳಲ್ಲಿ ತನಿಖಾ ದಳದ ಅಧಿಕಾರಿಗಳು ಆಗಮಿಸಿದ್ದು ವಿವಿದೆಡೆ ಶಂಕಿತರಿಗೆ ಬಲೆ ಬೀಸಿದ್ದಾರೆ. ಈಗಾಗಲೇ ಪ್ರವೀಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹತ್ತು ಮಂದಿಯನ್ನು ಬಂಧಿಸಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಕರ್ನಾಟಕ ಪೊಲೀಸ್ ಇಲಾಖೆ ನಡೆಸುತ್ತಿದ್ದ ತನಿಖೆಯನ್ನು ಇದೀಗ ರಾಷ್ಟ್ರೀಯ ತನಿಖಾ ದಳ ನಡೆಸುತ್ತಿದೆ.
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ – ಬೆಳ್ಳಂಬೆಳಗ್ಗೆ ಪುತ್ತೂರು, ಸುಳ್ಯದ 32 ಸ್ಥಳಗಳಿಗೆ ಎನ್. ಐ. ಎ. ದಾಳಿ!









