ಸೆ.10ರಿಂದ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಕಚೇರಿ ಸಭಾಂಗಣದಲ್ಲಿ ಯೋಗ-ಜೀವನ ಉಚಿತ ಅಭ್ಯಾಸವರ್ಗ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮತ್ತು ಯೋಗ ಕೇಂದ್ರ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ರೇಡಿಯೋ ಪಾಂಚಜನ್ಯ ಸಹಯೋಗದೊಂದಿಗೆ ಯೋಗ-ಜೀವನ ಉಚಿತ ಅಭ್ಯಾಸವರ್ಗವು ಸೆ.10 ರಿಂದ 24ರ ತನಕ ಬೆಳಿಗ್ಗೆ ಗಂಟೆ 6 ರಿಂದ 7.15 ಗಂಟೆಯ ತನಕ ನಡೆಯಲಿದೆ.

ಆದಿಯೋಗಿ ಮಹಾದೇವನ ಆಲಯದಲ್ಲೊಂದು ವಿಶೇಷ ಕಾರ್ಯಕ್ರಮವಾಗಿ ಮೂಡಿ ಬರಲಿರುವ ಯೋಗದ ಜೊತೆಗೆ ಸ್ವಾಸ್ಥ್ಯ ಮತ್ತು ಜೀವನ ಶೈಲಿ ಬಗ್ಗೆ ತಜ್ಞ ವೈದ್ಯರು ಮಾಹಿತಿ ನೀಡಲಿದ್ದಾರೆ. ಸೆ.10ರಂದು ಡಾ.ರವಿಶಂಕರ ಪೆರುವಾಜೆ ಅವರು ಆಹಾರ, ನಿದ್ರೆ ಹಾಗು ಬ್ರಹ್ಮಚರ್ಯದ ಕುರಿತು, ಸೆ.11ರಂದು ಡಾ. ಶಶಿಧರ ಕಜೆ ಅವರು ಅಭ್ಯಂಗ ವ್ಯಾಯಾಮದ ಕುರಿತು, ಸೆ.12ರಂದು ಡಾ. ಸುಧಾ ಎಸ್ ರಾವ್ ಅವರು ಋತುಚರ್ಯೆ ಕುರಿತು, ಸೆ.13ರಂದು ಡಾ. ಹರಿಕೃಷ್ಣ ಪಾಣಾಜೆ ಅವರು ದಿನಚರ್ಯೆ ಕುರಿತು, ಸೆ. 14ರಂದು ಡಾ. ಗೌರಿ ಶ್ಯಾಮ್ ಅವರು ಪ್ರಕೃತಿ ಚಿಕಿತ್ಸೆ ಕುರಿತು, ಸೆ. 15ರಂದು ಡಾ. ಐಕ್ಯ ಪಿ.ಎಂ.ಎಸ್.ಸಿ ಅವರು ಡಯಟ್ ಮತ್ತು ಜ್ಯೂಟ್ರಿಷಿಯನ್ ಕುರಿತು, ಸೆ. 16ರಂದು ಡಾ. ಚೇತನಾ ಗಣೇಶ್ ಅವರು ಯೋಗಾಸನದ ಮಹತ್ವದ ಕುರಿತು, ಸೆ. 17ರಂದು ಡಾ. ಚೇತನಾ ಗಣೇಶ್ ಅವರಿಂದ ಮುದ್ರೆಗಳ ಕುರಿತು, ಸೆ.18ರಂದು ಡಾ. ರವಿಶಂಕರ್ ಪೆರುವಾಜೆ ಅವರು ಒಳ್ಳೆಯ ಅಭ್ಯಾಸಗಳ ಕುರಿತು ಮಾಹಿತಿ ನೀಡಲಿದ್ದಾರೆ. ಯೋಗ ಮುಖ್ಯ ಶಿಕ್ಷಕಾಗಿ ಪ್ರಸಾದ್ ಪಾಣಾಜೆ ಅವರು ತರಗತಿಯನ್ನು ಮುನ್ನಡೆಸಲಿದ್ದು, ಯೋಗ ಕೇಂದ್ರದ ಅಧ್ಯಕ್ಷ ಗಿರೀಶ ಮಳಿ ಅವರು ಸಹಶಿಕ್ಷಕರಾಗಿ ಸಹಕರಿಸಲಿದ್ದಾರೆ. ಅಭ್ಯಾಸವರ್ಗದಲ್ಲಿ ಭಾಗವಹಿಸುವವರು ಹೆಸರು ನೋಂದಾಯಿಸಿಕೊಳ್ಳಬೇಕು ಮತ್ತು ಸಭಾಭವನದ ಸೀಮಿತ ಸ್ಥಳಾವಕಾಶದಲ್ಲಿ ಮೊದಲು ಬಂದ ಹೆಸರುಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ: 8722638816 ಅನ್ನು ಸಂಪರ್ಕಿಸುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here