ಮದ್ರಸಗಳ ಬಗ್ಗೆ ಸರಕಾರದ ಹಸ್ತಕ್ಷೇಪ ವಿದ್ಯಾರ್ಥಿ ಸಂಘಟನೆಯಿಂದ ಅಭಿಯಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಜ್ಯದಲ್ಲಿ ಕಾರ್ಯಚರಿಸುತ್ತಿರುವ ಮದ್ರಸಗಳ ಬಗ್ಗೆ ವರದಿ ತಯಾರಿಸುವ ಕುರಿತು ರಾಜ್ಯ ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್‌ರವರು ಸೂಚನೆಯನ್ನು ನೀಡಿದ್ದು ಇದರ ವಿರುದ್ದವಾಗಿ ಮದರಸ- ಮತರಸ ಎಂಬ ಧ್ಯೇಯದೊಂದಿಗೆ ಕುಂಬ್ರ ಅಲ್‌ಕೌಸ್ ಸ್ಟೂಡೆಂಟ್ಸ್ ಅಸೋಸಿಯೇಶನ್ ವತಿಯಿಂದ ಹತ್ತು ದಿನಗಳ ಅಭಿಯಾನವನ್ನು ಕೈಗೊಳ್ಳಲಾಗಿದೆ.

ಅಭಿಯಾನವು “ಜ್ಞಾನದ ತಟ್ಟೆಗೆ ಕೈ ಹಾಕದಿರಿ ” ಎಂಬಂತಹಾ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಮದರಸದ ಬಗೆಗಿನ ಅರಿವು ಮೂಡಿಸುವುದು ಪ್ರಧಾನ ಗುರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಕೇಳಿ ಬರುವಂತಹ ಮದರಸದ ಕುರಿತಾದ ಅಪವಾದಗಳನ್ನು ಫ್ಯಾಸಿಸ್ಟ್ ಶಕ್ತಿಗಳು ಇದನ್ನು ಆಯಧವಾಗಿರಿಸಿ ತಮ್ಮ ಮತ ಬೇಟೆಯನ್ನು ತಯಾರಿಸುತ್ತಿದೆ. ಈ ಮತ ಬೇಟೆಯನ್ನು ತಡೆಯುವುದು ಮತ್ತು ಮದರಸದ ಕುರಿತಾದ ನೈಜ ಸಂಗತಿಗಳನ್ನು ಸಮಾಜಕ್ಕೆ ಸಾರುವುದು ಶಿಬಿರದ ಮುಖ್ಯ ಉದ್ದೇಶವಾಗಿದೆ. ಶಿಬಿರದ ಕುರಿತು ಮಾತನಾಡಿದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರು “ಮದರಸದ ಕುರಿತು ವಿಶಾಲವಾದ ವರದಿ ಮತ್ತು ಮದರಸದೊಳಗಿನ ಸತ್ಯಾವಸ್ಥೆ ಯನ್ನು ಸಮಾಜಕ್ಕೆ ಈ ಶಿಬಿರದ ಮೂಲಕ ಮನವರಿಕೆ ಮಾಡಿಕೊಡಲಿದ್ದೇವೆ” ಎಂದು ತಿಳಿಸಿದ್ದಾರೆ. ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷರಾದ ಕೆ ಪಿ ಅಹ್ಮದ್ ಹಾಜಿ ಅಬಿಯಾನದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.