ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ತೆರೆಜಾ ಸಿಕ್ವೇರಾರವರಿಗೆ ಕಥೋಲಿಕ್ ಸಭಾದಿಂದ ಅಭಿನಂದನೆ

0

ಪುತ್ತೂರು: ದ.ಕ ಜಿಲ್ಲಾ ಅತ್ತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಪಾಪೆಮಜಲು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ತೆರೆಜಾ ಸಿಕ್ವೇರಾರವರಿಗೆ ಕಥೋಲಿಕ್ ಸಭಾ ಕೇಂದ್ರ ಸಮಿತಿ ಮಂಗಳೂರು, ಕಥೋಲಿಕ್ ಸಭಾ ಪುತ್ತೂರು ಘಟಕ, ಕಥೋಲಿಕ್ ಸಭಾ ಉಪ್ಪಿನಂಗಡಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ತೆರೆಜಾ ಸಿಕ್ವೇರಾರವರ ಮರೀಲ್ ನಿವಾಸಕ್ಕೆ ತೆರಳಿ ಅವರಿಗೆ ಶುಭಾಶಯ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮರೀಲು ಚರ್ಚ್ ಧರ್ಮಗುರು ವಲೇರಿಯನ್ ಫ್ರ್ಯಾಂಕ್, ಕಥೋಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಸ್ಟ್ಯಾನಿ ಲೋಬೊ, ಕೋಶಾಧಿಕಾರಿ ಆಲ್ಫೋನ್ಸ್ ಫೆರ್ನಾಂಡೀಸ್, ಕಥೋಲಿಕ್ ಸಭಾ ವಲಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಕಾರ್ಯದರ್ಶಿ ಲವೀನಾ ಡಿ’ಸೋಜ, ಕೋಶಾಧಿಕಾರಿ ನವೀನ್ ಬ್ರ್ಯಾಗ್ಸ್, ಪುತ್ತೂರು ಕಥೋಲಿಕ್ ಸಭಾ ಅಧ್ಯಕ್ಷ ಮೆಲ್ವಿನ್ ಫೆರ್ನಾಂಡೀಸ್, ಕಾರ್ಯದರ್ಶಿ ಪಾವ್ಲ್ ಮೊಂತೇರೊ,ಮರೀಲು ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ನ್ಯಾನ್ಸಿ ಮಾಡ್ತಾ, ಪ್ರಮುಖರಾದ ರೋಶನ್ ಡಾಯಸ್ ಬಪ್ಪಳಿಗೆ, ಎಡ್ವಿನ್ ಡಿ’ಸೋಜ ಮರೀಲು, ಪ್ರವೀಣ್ ಸಿಕ್ವೇರಾ ಉಪ್ಪಿನಂಗಡಿ, ಮೌರಿಸ್ ಕುಟಿನ್ಹಾ ರಾಗಿದಕುಮೇರು ಹಾಗೂ ತೆರೆಜಾ ಸಿಕ್ವೇರಾರವರ ಪತಿ ಹೆರಾಲ್ಡ್ ಮಾಡ್ತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here