




ಪುತ್ತೂರು : ಸಂಸ್ಕಾರ, ಸಂಘಟನೆ, ಸೇವೆ, ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ನೇತ್ರಾವತಿ ವಲಯ ಮಂಗಳೂರು, ಕೇಂದ್ರ ಕಛೇರಿ ತುಮಕೂರು ಇದರ ಆಶ್ರಯದಲ್ಲಿ ಪುತ್ತೂರಿನ ಬನ್ನೂರು ಶಿವ-ಪಾರ್ವತಿ ಭಜನಾ ಮಂದಿರದಲ್ಲಿ 6ನೇ ಯೋಗ ಶಾಖೆ ಉದ್ಘಾಟನೆಗೊಂಡಿತು.









ಶಿವ-ಪಾರ್ವತಿ ಭಜನಾ ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿದರು. ಮಾತೃಛಾಯಾ ಶಾಖೆ ಶಿಕ್ಷಕ ಸುಂದರರವರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಜಿಲ್ಲಾ ಮಾರ್ಗದರ್ಶಕ ಅಶೋಕ್ ಪ್ರಾಸ್ತವಿಕ ಮಾತನಾಡಿ ಯೋಗದ ಮಹತ್ವ ತಿಳಿಸಿದರು. ಜಿಲ್ಲಾ ಒತ್ತು ಚಿಕಿತ್ಸಕ ಜನಾರ್ಧನ, ಸಮಿತಿಯ ಜಿಲ್ಲಾ ಮತ್ತು ತಾಲೂಕು ಪ್ರಮುಖರು ಉಪಸ್ಥಿತರಿದ್ದರು. ಉಚಿತ ಯೋಗ ತರಗತಿ ಪ್ರತಿದಿನ ಸೆ.8ರಿಂದ ಪ್ರಾರಂಭಗೊಂಡಿದೆ.








