ಹಿರೆಬಂಡಾಡಿ: ಮಗನ ಸಾವಿನ ಮರುದಿನ ತಾಯಿಯೂ ನಿಧನ

0

ಹಿರೆಬಂಡಾಡಿ: ಮಗನ ಸಾವಿನ ಬೆನ್ನಿಗೆ ವಯೋವೃದ್ಧೆ ತಾಯಿಯೂ ನಿಧನರಾಗಿರುವ ಘಟನೆ ಹಿರೆಬಂಡಾಡಿ ಗ್ರಾಮದ ಸರೋಳಿಯಲ್ಲಿ ನಡೆದಿದೆ. ಹಿರೆಬಂಡಾಡಿ ಗ್ರಾ.ಪಂ.ಮಾಜಿ ಸದಸ್ಯ, ಬಿಜೆಪಿ ಕಾರ್ಯಕರ್ತ ಯಶವಂತ ಸರೋಳಿ(59ವ.)ರವರು ಸೆ.6ರಂದು ರಾತ್ರಿ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಕಳೆದ 1 ವಾರದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಶವಂತ ಸರೋಳಿಯವರ ತಾಯಿ ರುಕ್ಮಿಣಿ(72ವ.)ರವರು ಸೆ.8ರಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ನಿಧನರಾದರು. ತಾಯಿ ಹಾಗೂ ಮಗನ ಸಾವು ಇವರ ಕುಟುಂಬಕ್ಕೆ ಅಘಾತ ನೀಡಿದೆ. ಮೃತ ರುಕ್ಮಿಣಿಯವರು ಪತಿ ಕುಕ್ಕಪ್ಪ ಗೌಡ, ಪುತ್ರರಾದ ಮೋನಪ್ಪ ಸರೋಳಿ, ಜನಾರ್ದನ ಸರೋಳಿ, ನೀಲಯ್ಯ ಸರೋಳಿ, ಪುತ್ರಿಯರಾದ ಭವಾನಿ, ಮೀನಾಕ್ಷಿಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here