ಕಡಬ ಸರಕಾರಿ ಪ್ರೌಢಶಾಲಾ 1978-79ರ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ವಿದ್ಯಾರ್ಥಿಗಳ ಸ್ನೇಹ ಸಹಮಿಲನ

0

ಕಡಬ: ಸರಕಾರಿ ಪ್ರೌಢಶಾಲೆಯ 1978-79ರ ಎಸ್‌ಎಸ್‌ಎಲ್‌ಸಿ ಬ್ಯಾಚಿನ ವಿದ್ಯಾರ್ಥಿಗಳ ಸ್ನೇಹ ಸಹಮಿಲನ ಕೂಟ ಸೆ.7ರಂದು ಕಡಬ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.

43 ವರ್ಷಗಳ ನಂತರ ಭೇಟಿಯಾದ 40 ಸಹಪಾಠಿಗಳಿಗೆ ಇದು ಅವಿಸ್ಮರಣೀಯ ಘಟನೆಯಾಯಿತು. ಸೇರಿದ ಎಲ್ಲರೂ ತಮ್ಮ ಪರಿಚಯ ಮಾಡಿಕೊಂಡು ಹಿಂದಿನ ಸಿಹಿ ನೆನಪುಗಳನ್ನು ಹಂಚಿಕೊಂಡರು. ಮುಂದೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತ ಸೇರಿ ತಮ್ಮ ಹೈಸ್ಕೂಲ್ ಶಿಕ್ಷಕರನ್ನು ಗೌರವಿಸುವ ಕೆಲಸ ಮಾಡಲು ನಿರ್ಧರಿಸಲಾಯಿತು. ಅಮೆರಿಕಾದಲ್ಲಿ ನೆಲೆಸಿರುವ ಪ್ರಕಾಶ್‌ರವರ ಆಶಯದಂತೆ ಸಹಪಾಠಿಗಳಾದ ಗಣೇಶ್ ಪಿ, ಕಿಟ್ಟಣ್ಣ ರೈ, ಉದಯ ಕುಮಾರ್ ಬಸ್ತಿ ಹಾಗೂ ಜೋನ್ ವೇಗಸ್‌ರವರು ಈ ಸಹಮಿಲನದ ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಬೆಂಗಳೂರು, ಬದಿಯಡ್ಕ, ಮಂಗಳೂರು ಮತ್ತು ಕಡಬ ಆಸುಪಾಸಿನ ಶೀನಪ್ಪ ಗೌಡ, ಗೋಪಾಲಕೃಷ್ಣ ಭಟ್, ಜಿನ ಪ್ರಕಾಶ್, ಸುಂದರ ಗೌಡ, ರೆ.ಫಾ. ಜೋಸ್ ವಿ.ಸಿ, ಚಂದ್ರಶೇಖರ ರೈ, ಪುರುಷೋತ್ತಮ ಪನ್ಯಾಡಿ, ನಾಗಪ್ಪ ಗೌಡ, ಚಾಕೋ ಕೆ.ಎಮ್., ಪದ್ಮನಾಭ ರೈ, ಶಂಕರ ಭಟ್, ತಿಮ್ಮಪ್ಪ ಗೌಡ, ಸೆಲಿನ್ ಸಿರಿಯಾಕ್, ಜಾಹ್ನವಿ ರೈ, ವಿಜಯ ಕುಮಾರಿ, ವಿದ್ಯಾ, ವಿನಯಾ, ಫಿಲೋಮಿನಾ, ಕೆ.ಟಿ.ಅನ್ನ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here