ಪುತ್ತೂರು : ಶಾಲಾ ಶಿಕ್ಷಣ ಮತ್ತು ಸಾಕ್ಷಾರತ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವತಿಯಿಂದ ನಡೆದ ತ್ರೋಬಾಲ್ ಪಂದ್ಯಾಟದಲ್ಲಿ ದರ್ಬೆ ಬೆಥನಿ ಆ.ಮಾ ಶಾಲಾ ಬಾಲಕಿಯರು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ, ಸಂತ ಪಾವ್ಲರ ಅನುದಾನಿತ ಹಿ ಪ್ರಾ ಶಾಲೆ ನಾರಾವಿ ಬೆಳ್ತಂಗಡಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ನಿಹಾರಿಕ ಪಿ, ವೈಗ ಎಂ, ನಿಹಾನಿ ಮುತ್ಲಾಜೆ, ಇಝ ಫಾತಿಮ, ಪ್ರಿಯಾಂಕ ಪಿ, ಆಯಿಶತ್ ಹಿಬ, ಫಾತಿಮ ರಿದಾ, ರೊಶಿನಿ ಎಂಟನೆಟ್ಟೆ ಫೆರ್ನಾಂಡಿಸ್, ಪೂರ್ವಿಕ, ಖದೀಜ ಅಝಿಮ, ಬೃಂದ ಪಿ, ನಿರೀಕ್ಷ ಶೆಟ್ಟಿ ಮತ್ತು ಹನ ಫಾತಿಮ ಈ ತಂಡದವರಾಗಿದ್ದು, ವೈಗ ಎಂ ’ಉತ್ತಮ ಎಸೆತಗಾರ್ತಿ’ ಮತ್ತು ನಿಹಾರಿಕ ಪಿ ’ಉತ್ತಮ ಹಿಡಿತಗಾರ್ತಿ’ ಆಗಿ ಮಿಂಚಿದರು ಎಂದು ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಸೆಲಿನ್ ತಿಳಿಸಿದ್ದಾರೆ.