ಸೂರಿಕುಮೇರು ಚರ್ಚ್ ನಲ್ಲಿ ಮೊಂತಿ ಫೆಸ್ತ್ ಆಚರಣೆ

0

ಪುತ್ತೂರು:ಬಂಟ್ವಾಳ ತಾಲೂಕಿನ ಸೂರಿಕುಮೇರುನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಸೆ.8 ರಂದು ಕನ್ಯಾ ಮರಿಯಮ್ಮನವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಚರ್ಚ್ ಧರ್ಮಗುರು ವಂ| ಗ್ರೆಗರಿ ಪಿರೇರಾರವರು ಹೊಸ ತೆನೆಯನ್ನು ಆಶೀರ್ವದಿಸಿ, ದಿವ್ಯ ಬಲಿ ಪೂಜೆಯನ್ನು ನೆರೆವೇರಿಸಿ ನೆರೆದ ಎಲ್ಲಾ ಭಕ್ತಾಧಿಗಳಿಗೆ ಆಶೀರ್ವದಿಸಿದರು. ಚರ್ಚ್ ಆರ್ಥಿಕ ಸಮಿತಿ, ಪಾಲನಾ ಸಮಿತಿ ಮತ್ತು ದಾನಿಗಳಿಗೆ ಹೊಸ ತೆನೆಯನ್ನು ನೀಡುವ ಮುಖಾಂತರ ಸಹಕರಿದರು. ನೆರೆದ ಭಕ್ತಾಧಿಗಳಿಗೆ ಪೂಜೆಯ ಬಳಿಕ ಸಿಹಿಯ ಪ್ರತೀಕವಾದ ಕಬ್ಬು ವಿತರಿಸಲಾಯಿತು. ಅತಿಥಿ ಧರ್ಮ ಗುರು ವಂ| ವಿಕ್ಟರ್ ಡಾಯಸ್, ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಪಿರೇರಾ, ಕಾರ್ಯದರ್ಶಿ ಮೇರಿ ಡಿ’ಸೋಜ, ಸರ್ವ ಆಯೋಗಗಳ ಸಂಚಾಲಕ ಸ್ಟೀವನ್ ಆಲ್ವಿನ್ ಪಾಯ್ಸ್ ಮತ್ತು ಕಥೊಲಿಕ್ ಸಭಾ ಸೂರಿಕುಮೇರು ಘಟಕದ ಅಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಸಹಿತ ಭಕ್ತಾಧಿಗಳು ಬಲಿಪೂಜೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here