ಸಂಪ್ಯದ ಆದರ್ಶ ಟೈಲ್ಸ್ & ಗ್ರಾನೈಟ್ ಸಂಸ್ಥೆಯಲ್ಲಿ ಆದರ್ಶ ಲಕ್ಕಿ ಸ್ಕೀಂನ ಕಾರ್ಡ್ ಅನಾವರಣ

0

  • ಪ್ರತಿವಾರ ಬೆಲೆಬಾಳುವ ವಸ್ತು, ಕೊನೆಯಲ್ಲಿ ಆಕ್ಟೀವಾ ಹೋಂಡಾ, ಆಟೋ ರಿಕ್ಷಾ , ಕಾರು ಗೆಲ್ಲುವ ಸದಾವಕಾಶ

ಪುತ್ತೂರು: ಮಾಣಿ – ಮೈಸೂರು ಹೆದ್ದಾರಿಯ ಸಂಪ್ಯದ ಫಾದಿಲ್ ಕಾಂಪ್ಲೆಕ್ಸ್ ನಲ್ಲಿರುವ ಆದರ್ಶ ಟೈಲ್ಸ್ & ಗ್ರ್ಯಾನೈಟ್ ಸಂಸ್ಥೆಯಲ್ಲಿ ಬಡವರ ಬಾಳಿಗೆ ಆದರ್ಶ ಬೆಳಕು ಆದರ್ಶ ಲಕ್ಕಿ ಸ್ಕೀಂನ ಉದ್ಘಾಟನಾ ಸಮಾರಂಭ ಸೆ.9ರಂದು ನಡೆಯಿತು.

ಪುತ್ತೂರು ಅಕ್ಷಯ ಕಾಲೇಜಿನ ಸಂಚಾಲಕರಾದ ಜಯಂತ ನಡುಬೈಲ್ ರವರು ಆದರ್ಶ ಲಕ್ಕಿ ಸ್ಕೀಂನ ಕಾರ್ಡ್ ಅನಾವರಣ ಮಾಡಿ ಮಾತನಾಡಿ, ನಗರಸಭೆ ಆಗುವ ಈ ಪಟ್ಟಣದಲ್ಲಿ ಇಂತಹ ಒಂದು ಸಂಸ್ಥೆಯ ಹುಟ್ಟು ಈ ಭಾಗದ ಜನರಿಗೆ ಬಹಳಷ್ಟು ಸಹಕಾರಿಯಾಗಲಿದೆ. ಸಮಾಜಮುಖಿಯಾಗಿ ಬೆಳೆದ ಸಂಸ್ಥೆಗೆ ಯಶಸ್ಸು ಹೆಚ್ಚು. ಸಂಪೂರ್ಣ ಪಾರದರ್ಶಕವಾಗಿ ನಡೆಯುವ ಈ ಸ್ಕೀಂ ಗೆ ಎಲ್ಲರೂ ಸಹಕಾರ ಅಗತ್ಯ. ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿರುವ ಸಂಸ್ಥೆಯ ಮಾಲಕ ಅಬ್ದುಲ್ ರಹ ಮಾನ್ ರವರಿಗೆ ಎಲ್ಲರ ಸಹಕಾರ ಅಗತ್ಯ. ತನ್ನ ವ್ಯವಹಾರದಲ್ಲಿ ಬಂದ ಲಾಭದ ಒಂದಂಶವನ್ನು ಸಮಾಜದಲ್ಲಿರುವ ಬಡಬಗ್ಗರ ಏಳಿಗೆಗಾಗಿ ನೀಡುತ್ತಿರುವ ಅವರ ಗುಣವನ್ನು ಮೆಚ್ಚಲೇ ಬೇಕಾಗಿದೆ. ಸಂಸ್ಥೆಯ ಯಶಸ್ಸಿಗೆ ಎಲ್ಲರೂ ಸಹಕಾರ ನೀಡುವಂತೆ ಹೇಳಿದರು.

ಪುತ್ತೂರು ಪದ್ಮಶ್ರೀ ಸೋಲಾರ್ ಸಿಸ್ಟಂ ನ ಮಾಲಕರಾದ ಸೀತಾರಾಮ ರೈ ಕೆಂದಂಬಾಡಿ ಗುತ್ತುರವರು ಆದರ್ಶ ಸ್ಕೀಂ ನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ ಎಲ್ಲರ ಸಹಕಾರದಿಂದಾಗಿ ಸಂಸ್ಥೆ ಬೆಳಗಲಿ. ಇವರ ಪಾರದರ್ಶಕ ವ್ಯವಹಾರವೇ ಸಂಸ್ಥೆ ಇಷ್ಟೊಂದು ಬೆಳೆಯಲು ಕಾರಣ. ಆದರ್ಶ ಮತ್ತು ಅಭಿವೃದ್ಧಿ ಎರಡೂ ಯಶಸ್ಸಿನ ಗುಟ್ಟಾಗಿದೆ. ಇವರ ವ್ಯವಹಾರಗಳಿಗೆ ನಾಗರೀಕ ಬಂಧುಗಳು ಸಹಕಾರ ನೀಡಿ ಸಂಸ್ಥೆಗೆ ಯಶಸ್ಸಾಗುವಂತೆ ಶುಭಹಾರೈಸಿದರು.

ಬೊಳುವಾರಿನ ಅಂಬಿಯಾ ಆಟೋಲಿಂಕ್ಸ್ ನ ಮಾಲಕ ಯಾಕುಬ್, ಆರ್ಯಾಪು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್, ಪೆರ್ನೆ ಶ್ರೀ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ ಶೇಖರ ರೈ ಕೆ.,ಉದ್ಯಮಿಗಳಾದ ನಿಸಾರ್ ಸಂಪ್ಯ, ಶಮೀರ್ ಪರ್ಲಡ್ಕ, ಪ್ರೋಪ್ರಿಸ್ಟೇಜ್ ಮಾಲಕ ಶಾಝಿಲ್ ಮೊದಲಾದವರು ಉಪಸ್ಥಿತರಿದ್ದರು. ಮಹಮ್ಮದ್ ನಝೀರ್ ಪೆರಿಂಜೆ ವಂದಿಸಿದರು. ಸಂಸ್ಥೆಯ ಮಾಲಕರಾದ‌ ಅಬ್ದುಲ್ ರಹಿಮಾನ್ ರವರು ಸ್ವಾಗತಿಸಿದರು.

ಆದರ್ಶ ಲಕ್ಕಿ ಸ್ಕೀಂನ ಸದಸ್ಯರು ಪ್ರತೀ ವಾರ 500 ರೂಪಾಯಿಯಂತೆ 10 ತಿಂಗಳು ಪಾವತಿಸಬೇಕಾಗಿದೆ. ಪ್ರತಿ ತಿಂಗಳ 1 ಹಾಗೂ 15ರಂದು ಡ್ರಾ ನಡೆಯಲಿದ್ದು ಬೆಳೆಬಾಳುವ ವಸ್ತುಗಳನ್ನು ಪಡೆದುಕೊಳ್ಳಬಹುದಾಗಿದೆ. ಒಂಬತ್ತನೇ ತಿಂಗಳ ಎರಡನೇ ಡ್ರಾದಲ್ಲಿ ಆಕ್ಟೀವಾ ಹೋಂಡಾ 6ಜಿ, ಸೆಮಿ ಬಂಪರ್ ಬಹುಮಾನವಾಗಿ ಆಟೋ ರಿಕ್ಷಾ ಹಾಗೂ ಬಂಪರ್ ಬಹುಮಾನವಾಗಿ ಐ10 ಕಾರನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 7338027329 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ವಿಶ್ವಾಸಾರ್ಹ ಸ್ಕೀಂ – ಪಾರದರ್ಶಕ ವ್ಯವಹಾರ
ಇದು ಡೆಲ್ಮಾ ಸ್ಯಾನಿಟರಿಯ ಅಂಗಸಂಸ್ಥೆಯಾಗಿದ್ದು, ನಮ್ಮ ಸಂಸ್ಥೆಯೂ ಐದು ಕಡೆಗಳಲ್ಲಿ ಕಾರ್ಯಾಚರಿಸುತ್ತಿದೆ. ಇದೀಗಾಗಲೇ ಸಂಸ್ಥೆಯ ವ್ಯವಹಾರದಲ್ಲಿ ಬಂದ ಲಾಭದಲ್ಲಿ ಒಂದಂಶವನ್ನು ಸಮಾಜಮುಖಿ ಕಾರ್ಯಗಳನ್ನು ಮಾಡಲು ವಿನಿಯೋಗಿಸುತ್ತಿದ್ದು, ಸಂಸ್ಥೆಯ ಇನ್ನಷ್ಟು ಅಭಿವೃದ್ಧಿ ಹೊಂದಲು ಗ್ರಾಹಕರ ಸಹಕಾರ ಅಗತ್ಯ. ಪ್ರತಿಯೋರ್ವರಿಗೂ ಸಹಕಾರಿಯ ಅಗುವ ಈ ಸ್ಕೀಂ ಗೆ ವಿಶ್ವಾಸವಿಟ್ಟು ಸದಸ್ಯರಾಗಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು – ಅಬ್ದುಲ್ ರಹಿಮಾನ್ ಮಾಲಕರು ಆದರ್ಶ ಟೈಲ್ಸ್ & ಗ್ರ್ಯಾನೆಟ್ ಸಂಪ್ಯ

LEAVE A REPLY

Please enter your comment!
Please enter your name here