ಪುತ್ತೂರು: ಮತದಾರರ ಗುರುತಿನ ಚೀಟಿಯಲ್ಲಿ ಕೆಟಿ(KT)ಯಿಂದ ಪ್ರಾರಂಭವಾಗುವ ನಂಬರ್ ಇರುವ ಚೀಟಿಯನ್ನು ಬದಲಾಯಿಸಿ ಹೊಸ ನಂಬರ್ ಪಡೆದುಕೊಳ್ಳುವಂತೆ ತಾಲೂಕು ಸಹಾಯಕ ನೋಂದಾವಣಾಧಿಕಾರಿ ತಿಳಿಸಿದ್ದಾರೆ.
ಹಳೆಯ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ, KT (ಉದಾಹರಣೆ- KT 356754)ಯಿಂದ ಪ್ರಾರಂಭವಾಗುವ ಮತದಾರರ ಗುರುತಿನ ಚೀಟಿ ಇರುವವರು ತಕ್ಷಣವೇ ತಮ್ಮ ಹತ್ತಿರದ ಮತಗಟ್ಟೆಯ ಬೂತ್ ಮಟ್ಟದ ಅಽಕಾರಿಯವರನ್ನು ಭೇಟಿ ಮಾಡಿ ತಮ್ಮ ಹೊಸ ನಂಬರ್ ನ್ನು ಪಡೆದುಕೊಳ್ಳುವುದು. ಹಾಗೂ ಅಲ್ಲಿಯೇ ಗುರುತು ಚೀಟಿಗೆ ಆಧಾರ್ ಅಥವಾ ಇತರ ಹನ್ನೊಂದು ದಾಖಲೆಗಳನ್ನು ಜೋಡಣೆ ಮಾಡಬಹುದು ಹಾಗೂ -ಟೋ ನೀಡಿ ತಿದ್ದುಪಡಿ ಮಾಡಿಕೊಳ್ಳಬಹುದು. ಇದಕ್ಕಾಗಿ ಮೊಬೈಲ್ ನಂಬರ್, ಹಳೆಯ ವೋಟರ್ ಐ ಡಿ, ಆಧಾರ್ ನಂಬರ್ ಮತ್ತು ಒಂದು ಇತ್ತೀಚಿನ -ಟೋವನ್ನು ಬೂತ್ ಮಟ್ಟದ ಅಽಕಾರಿಯವರಿಗೆ ನೀಡುವುದು ಕಡ್ಡಾಯವಾಗಿರುತ್ತದೆ ಎಂದು ಸಹಾಯಕ ಮತದಾರರ ನೊಂದಣಾಽಕಾರಿಯಾಗಿರುವ ತಹಶೀಲ್ದಾರ್ ನಿಸರ್ಗಪ್ರಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.