ಪುತ್ತೂರು: ಪುತ್ತೂರು ಪತ್ರಿಕಾ ಭವನದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಮತ್ತು ಕರ್ನಾಟಕ ಪತ್ರಕರ್ತರ ಸಂಘದವರಿಗೆ ಮಾಧ್ಯಮದ ಕೆಲಸ ಮಾಡಲು ಸ್ಥಳಾವಕಾಶ ದೊರಕಿಸಿಕೊಡುವಂತೆ ಶಾಸಕ ಸಂಜೀವ ಮಠಂದೂರುರವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಗಿದೆ. ನಮ್ಮ ಬೇಡಿಕೆಗೆ ಸ್ಪಂದನೆ ದೊರಕದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದರ ಜತೆಗೆ ನ್ಯಾಯಾಲಯದ ಮೂಲಕ ನ್ಯಾಯಕ್ಕಾಗಿ ಹೋರಾಟ ನಡೆಸಲಿದ್ದೇವೆ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ಘಟಕದ ಪದಾಧಿಕಾರಿಗಳು ಶಾಸಕರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿಯಲ್ಲಿ ಹೀಗಿದೆ: ‘ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಮತ್ತು ಕರ್ನಾಟಕ ಪತ್ರಕರ್ತರ ಸಂಘ ರಾಜ್ಯದಾದ್ಯಂತ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಪುತ್ತೂರು ತಾಲೂಕು ಘಟಕ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮದಲ್ಲಿ ದುಡಿಯುತ್ತಿರುವ ತಲಾ ೩೫ಕ್ಕೂ ಅಽಕ ಮಂದಿ ನಮ್ಮ ಪುತ್ತೂರು ಘಟಕದಲ್ಲಿ ಸದಸ್ಯರಾಗಿ ತೊಡಗಿಸಿಕೊಂಡಿದ್ದಾರೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪತ್ರಕರ್ತರು ಕೂಡ ಸಮಾಜದಲ್ಲಿ ಹಲವು ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಂತಹ ಪತ್ರಕರ್ತರಿಗೆ ಸರಕಾರದಿಂದ ದೊರಕುವ ಸವಲತ್ತುಗಳನ್ನು ಒದಗಿಸಿಕೊಡುವುದು ಹಾಗೂ ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಲು ಪ್ರಯತ್ನಿಸುವುದು ನಮ್ಮ ಸಂಘದ ಪ್ರಮುಖ ಆದ್ಯತೆ ಮತ್ತು ಧ್ಯೇಯೋದ್ದೇಶವಾಗಿದೆ. ಸಮಾಜದ ಉನ್ನತಿಗಾಗಿ ವಿವಿಧ ಜನಸ್ನೇಹಿ ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ರೂಪಿಸಿರುವ ನಮ್ಮ ಸಂಘಕ್ಕೆ ವಿವಿಧ ಕಾರ್ಯ ಚಟುವಟಿಕೆಯನ್ನು ನಡೆಸಲು ಮತ್ತು ಮಾಧ್ಯಮದ ಕೆಲಸ ಮಾಡಲು ಸ್ಥಳಾವಕಾಶದ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಅಽನದಲ್ಲಿರುವ ಲೋಕೋಪಯೋಗಿ ಇಲಾಖೆಯ ಕಟ್ಟಡವಾಗಿರುವ ಮತ್ತು ಸಂಸದರು ಹಾಗೂ ಶಾಸಕರ ಸಹಿತ ಸರಕಾರದ ಅನುದಾನ ಪಡೆದು ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಬಳಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕಾಭವನದಲ್ಲಿ ನಮ್ಮ ಸಂಘಕ್ಕೂ ಅವಕಾಶ ನೀಡಬೇಕು ಎಂದು ತಮ್ಮನ್ನು ಒತ್ತಾಯಿಸುತ್ತಿದ್ದೇವೆ. ಸದ್ರಿ ಪತ್ರಿಕಾ ಭವನದಲ್ಲಿ ಈಗಾಗಲೇ ಪುತ್ತೂರು ತಾಲೂಕು ಪತ್ರಕರ್ತರ ಸಂಘ ಕಾರ್ಯನಿರ್ವಹಿಸುತ್ತಿದ್ದು, ಈ ಪತ್ರಿಕಾ ಭವನದಲ್ಲಿ ಕೆಲವೊಂದು ಕೊಠಡಿಗಳು ಖಾಲಿಯಿದ್ದು ಅದನ್ನು ನಮ್ಮ ಸಂಘಕ್ಕೆ ಒದಗಿಸಿಕೊಡಬೇಕು ಎಂದು ತಮ್ಮಲ್ಲಿ ವಿನಂತಿ ಮಾಡುತ್ತಿದ್ದೇವೆ. ಪತ್ರಿಕಾ ಭವನದಲ್ಲಿ ನಮ್ಮ ಸಂಘಕ್ಕೆ ಅವಕಾಶ ಒದಗಿಸಿಕೊಡುವ ಕುರಿತು ಈಗಾಗಲೇ ದ.ಕ. ಜಿಲ್ಲಾಽಕಾರಿಯವರಿಗೆ ನಮ್ಮ ಸಂಘದ ವತಿಯಿಂದ ಮನವಿ ಪತ್ರ ನೀಡಲಾಗಿದ್ದು ಅವರ ಸೂಚನೆಯಂತೆ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರು ಎರಡು ಸಲ ಪುತ್ತೂರು ಪತ್ರಿಕಾ ಭವನದಲ್ಲಿ ಸಭೆ ನಡೆಸಿದ್ದಾರೆ. ಪುತ್ತೂರು ತಾಲೂಕು ಪತ್ರಕರ್ತರ ಸಂಘ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕ ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ಘಟಕದ ಪ್ರಮುಖರೊಂದಿಗೆ ಸಭೆ ನಡೆಸಿರುವ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರು ಪತ್ರಿಕಾಗೋಷ್ಠಿ ಮುಂತಾದ ಚಟುವಟಿಕೆಗಳಿಗೆ ಪತ್ರಿಕಾ ಭವನವನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಆದರೆ, ಪತ್ರಿಕಾ ಭವನದಲ್ಲಿ ಇದುವರೆಗೂ ನಮಗೆ ಅವಕಾಶ ದೊರಕಿರುವುದಿಲ್ಲ. ಪುತ್ತೂರು ಪತ್ರಿಕಾ ಭವನವನ್ನು ದುರ್ಬಳಕೆ ಮಾಡಿಕೊಂಡ ಮತ್ತು ಅವ್ಯವಹಾರ ನಡೆಸುತ್ತಿರುವ ಕಾರಣಕ್ಕಾಗಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದಿಂದ ಉಚ್ಚಾಟಿಸಲ್ಪಟ್ಟಿದ್ದ ಅನೀಶ್ ಕುಮಾರ್ ಮತ್ತು ಆತನ ಬೆಂಬಲಿಗರಾದ ಶಶಿಧರ ರೈ ಕುತ್ಯಾಳ, ಮೇಘ ಪಾಲೆತ್ತಡಿ, ಸಂಶುದ್ದೀನ್ ಸಂಪ್ಯ, ಪ್ರವೀಣ್ ಕುಮಾರ್, ಅಜಿತ್ ಕುಮಾರ್, ಕೃಷ್ಣಪ್ರಸಾದ್ ಅಲಿಯಾಸ್ ಪ್ರಸಾದ್ ಬಲ್ನಾಡುರವರು ನಮ್ಮ ಸಂಘಕ್ಕೆ ಪತ್ರಿಕಾ ಭವನದಲ್ಲಿ ಸ್ಥಳಾವಕಾಶ ಕೊಡುವುದಕ್ಕೆ ವಿರೋಧ ಮಾಡುತ್ತಿದ್ದಾರೆ. ಸದ್ರಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಇತರ ಸದಸ್ಯರು ನಮ್ಮ ಸಂಘಕ್ಕೆ ಪತ್ರಿಕಾ ಭವನದಲ್ಲಿ ಅವಕಾಶ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಪುತ್ತೂರಿನ ಜನಪ್ರಿಯ ಶಾಸಕ ಸಂಜೀವ ಮಠಂದೂರುರವರೇ ತಾವು ಅನೀಶ್ ಕುಮಾರ್ ಮತ್ತು ಆತನ ಬೆಂಬಲಿಗರಾದ ಪತ್ರಕರ್ತರಿಗೆ ನಮಗೆ ತೊಂದರೆ ಕೊಡದಂತೆ ತಿಳುವಳಿಕೆ ನೀಡಿ ನಮ್ಮ ಮೂರೂ ಪತ್ರಕರ್ತರ ಸಂಘದವರು ಸೌಹಾರ್ದಯುತವಾಗಿ ಪತ್ರಿಕಾ ಭವನದಲ್ಲಿ ಕಾರ್ಯ ನಿರ್ವಹಿಸಲು ತಾವು ಅವಕಾಶ ಮಾಡಿಕೊಡಬೇಕು ಎಂದು ತಮ್ಮಲ್ಲಿ ಮನವಿ ಮಾಡುತ್ತಿದ್ದೇವೆ. ಪತ್ರಿಕಾ ಭವನದಲ್ಲಿ ಕಾರ್ಯ ನಿರ್ವಹಿಸಲು ನಮಗೆ ಅವಕಾಶ ಮಾಡಿಕೊಟ್ಟ ನಂತರ ಅದಕ್ಕೆ ಸಂಬಂಽಸಿದ ಖರ್ಚು ವೆಚ್ಚ ಭರಿಸಲು ನಮ್ಮ ಸಂಘ ಬದ್ಧವಿದೆ. ಅಲ್ಲದೆ, ಪತ್ರಿಕಾ ಭವನವನ್ನು ನಮ್ಮ ಸಂಘದಲ್ಲಿರುವ ದೃಶ್ಯ ಮಾಧ್ಯಮ, ಪತ್ರಿಕೆ ಮತ್ತು ವೆಬ್ ಸಂಸ್ಥೆಗಳ ವರದಿಗಾರರು ಮಾತ್ರ ಉಪಯೋಗಿಸಲಿದ್ದಾರೆ. ಪತ್ರಕರ್ತರಲ್ಲದ ನಮ್ಮ ಸಂಘದ ಇತರ ಸದಸ್ಯರುಗಳ ಕೆಲಸಕ್ಕೆ ಪತ್ರಿಕಾಭವನದ ಅವಶ್ಯಕತೆ ಇರುವುದಿಲ್ಲ ಎಂದು ತಮ್ಮ ಗಮನಕ್ಕೆ ತರುತ್ತಿದ್ದೇವೆ. ಪತ್ರಿಕಾ ಭವನದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ತಮ್ಮಲ್ಲಿ ಮತ್ತೊಮ್ಮೆ ಮನವಿ ಮಾಡುತ್ತಿದ್ದೇವೆ ಅಲ್ಲದೆ, ನಮ್ಮ ಬೇಡಿಕೆಗೆ ಸ್ಪಂದನ ದೊರಕದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದರ ಜತೆಗೆ ನ್ಯಾಯಾಲಯದ ಮೂಲಕ ನ್ಯಾಯಕ್ಕಾಗಿ ಹೋರಾಟ ನಡೆಸಲಿದ್ದೇವೆ ಎಂದು ತಮ್ಮ ಗಮನಕ್ಕೆ ತರುತ್ತಿದ್ದೇವೆ’ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ಘಟಕದ ಪದಾಽಕಾರಿಗಳು ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಪದಾಽಕಾರಿಗಳು ಶಾಸಕರಿಗೆ ಪ್ರತ್ಯೇಕವಾಗಿ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ವಾರ್ತಾ ಇಲಾಖಾಧಿಕಾರಿಯೊಂದಿಗೆ ಶಾಸಕರ ಚರ್ಚೆ
ಪುತ್ತೂರು ಪತ್ರಿಕಾ ಭವನದಲ್ಲಿ ಜರ್ನಲಿಸ್ಟ್ ಯೂನಿಯನ್ ಮತ್ತು ಕರ್ನಾಟಕ ಪತ್ರಕರ್ತರ ಸಂಘದವರಿಗೆ ಅವಕಾಶ ಮಾಡಿಕೊಡುವಂತೆ ಸಲ್ಲಿಸಲಾಗಿರುವ ಮನವಿಗೆ ಸ್ಪಂದಿಸಿರುವ ಶಾಸಕ ಸಂಜೀವ ಮಠಂದೂರುರವರು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ರವಿರಾಜ್‌ರವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.