ಪುತ್ತೂರು: ಸೌಂದರ್ಯ ಪ್ರಿಯರಿಗೊಂದು ಸಿಹಿ ಸುದ್ದಿಯಾಗಿ ಇಲ್ಲಿನ ತಾಲೂಕು ಪಂಚಾಯತ್ ವಾಣಿಜ್ಯ ಸಕೀರ್ಣದಲ್ಲಿ ತೃಪ್ತಿ ಹರ್ಬಲ್ ಬ್ಯೂಟಿ ಪಾರ್ಲರ್ ಮತ್ತು ಲೇಡಿಸ್ ಟೈಲರ್ ಫ್ಯಾನ್ಸಿ ಸೆಂಟರ್ನೊಂದಿಗೆ ಸೆ.10ರಂದು ಶುಭಾರಂಭಗೊಂಡಿತ್ತು.
ವೇ ಮೂ ದಿನೇಶ್ ಮರಡಿತ್ತಾಯ ವೈದಿಕ ಕಾರ್ಯಕ್ರಮದೊಂದಿಗೆ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಭೊಜರಾಜ ಗೌಡ ಕಟ್ಟೆಮನೆ, ನಿವೃತ್ತ ಬ್ಯಾಂಕ್ ಅಧಿಕಾರಿ ಈಶ್ವರ ಬೇಡೆಕರ್, ಚಂದು ನಾಯ್ಕ್, ಗಿರೀಶ್ ಕುಮಾರ್ ಸೊರಕೆ, ಹಿರಿಯರಾದ ಪಾರ್ವತಿ, ವಾರಿಜ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕಿ ಲಲಿತ ಅಶೋಕ್ ಮತ್ತು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ಬಲ್ನಾಡು ಅವರು ಅತಿಥಿಗಳನ್ನು ಬರಮಾಡಿಕೊಂಡರು.
ವಿವಿಧ ಸೌಲಭ್ಯ
ಮಹಿಳೆಯರ ಐಬ್ರೋಸ್, ಬ್ಲೀಚಿಂಗ್, ಫೇಶಿಯಲ್, ಪೆಡಿಕ್ಯೂರ್, ಮೆನಿಕ್ಯೂರ್, ವ್ಯಾಕ್ಸಿಂಗ್, ಹೇರ್ಡೈ, ಹೇರ್ ಸ್ಟ್ರೈಟನಿಂಗ್, ಹೇರ್ ಸ್ಪಾ, ಮೆಹೆಂದಿ ಸೌಲಭ್ಯವಿದ್ದು, ಮದುಮಗಳ ಶೃಂಗಾರ ಮಾಡುವುದು ಮತ್ತು ಆಭರಣಗಳು ಬಾಡಿಗೆಗೆ ದೊರೆಯುತ್ತದೆ. ಇದರ ಜೊತೆಗೆ ಫ್ಯಾನ್ಸಿ ಸಾಮಾಗ್ರಿಗಳು, ವಿವಿಧ ವಿನ್ಯಾಸದಲ್ಲಿ ಬಟ್ಟೆಯನ್ನೂ ಹೊಲಿದು ಕೊಡಲಾಗುವುದು ಎಂದು ಸಂಸ್ಥೆಯ ಮಾಲಕಿ ಲಲಿತ ಅಶೋಕ್ ಅವರು ತಿಳಿಸಿದ್ದಾರೆ.