ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮತ್ತು ಯೋಗ ಕೇಂದ್ರ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ರೇಡಿಯೋ ಪಾಂಚಜನ್ಯ ಸಹಯೋಗದೊಂದಿಗೆ ಯೋಗ-ಜೀವನ ಉಚಿತ ಅಭ್ಯಾಸವರ್ಗವು ಸೆ.10 ರಂದು ಉದ್ಘಾಟನೆಗೊಂಡಿತು.
ಸೆ.24ರ ತನಕ ಬೆಳಿಗ್ಗೆ ಗಂಟೆ 6 ರಿಂದ 7.15 ಗಂಟೆಯ ನಡೆಯುವ ಯೋಗ ಶಿಬಿರ ಆದಿಯೋಗಿ ಮಹಾದೇವನ ಆಲಯದಲ್ಲೊಂದು ವಿಶೇಷ ಕಾರ್ಯಕ್ರಮವಾಗಿ ಮೂಡಿ ಬರಲಿದ್ದು, ಯೋಗದ ಜೊತೆಗೆ ಸ್ವಾಸ್ಥ್ಯ ಮತ್ತು ಜೀವನ ಶೈಲಿ ಬಗ್ಗೆ ತಜ್ಞ ವೈದ್ಯರು ಮಾಹಿತಿ ಕಾರ್ಯಕ್ರಮ ನಡೆಯಲಿದೆ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶಪ್ರಸಾದ್ ಮುಳಿಯ ಯೋಗ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಯೋಗ ಮುಖ್ಯ ಶಿಕ್ಷಕ ಪ್ರಸಾದ್ ಪಾಣಾಜೆ, ಯೋಗ ಕೇಂದ್ರದ ಅಧ್ಯಕ್ಷ ಗಿರೀಶ ಮಳಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮ್‌ದಾಸ್ ಗೌಡ, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ಡಾ. ಸುಧಾ ಎಸ್ ರಾವ್ ಉಪಸ್ಥಿತರಿದ್ದರು. ಉದ್ಘಾಟನೆ ಬಳಿಕ ಯೋಗ ಶಿಬಿರ ಆರಂಭಗೊಂಡಿತ್ತು. ಯೋಗ ಶಿಬಿರದ ಬಳಿಕ ಡಾ.ರವಿಶಂಕರ ಪೆರುವಾಜೆ ಅವರು ಆಹಾರ, ನಿದ್ರೆ ಹಾಗು ಬ್ರಹ್ಮಚರ್ಯದ ಕುರಿತು ಮಾಹಿತಿ ನೀಡಿದರು.