ಮಾರ್ಚ್‌ನ ಒಳಗಡೆ ಕಾಮಗಾರಿ ಪೂರ್ಣ -ಗುತ್ತಿಗೆದಾರರಿಂದ ಅಧಿಕಾರಿಗಳಿಗೆ ಭರವಸೆ
ಪುತ್ತೂರು: ಪುತ್ತೂರು ಎಪಿಎಂಸಿ ರೈಲ್ವೇ ಗೇಟ್ ಬಳಿ ರೈಲ್ವೇ ಅಂಡರ್ ಪಾಸ್ ಯೋಜನೆಯ ಕಾಮಗಾರಿಯು ಕಳೆದೆರಡು ವಾರಗಳಿಂದ ಭರದಿಂದ ಸಾಗುತ್ತಿದ್ದು, ಈಗಾಗಲೇ ಕಾಮಗಾರಿ ನಡೆಸುವ ಕಾರ್ಮಿಕರಿಗೆ ತಾತ್ಕಾಲಿಕ ಶೆಡ್ ನಿರ್ಮಾಣಗೊಂಡಿದೆ. ಸೆ.10ರಂದು ಮೈಸೂರು ವಿಭಾಗೀಯ ರೈಲ್ವೇ ಅಧಿಕಾರಿ ರವಿಚಂದ್ರ ಅವರು ಪುತ್ತೂರು ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಮೆದು ಅವರ ಜೊತೆ ಕಾಮಗಾರಿ ವೀಕ್ಷಣೆ ನಡೆಸಿದರು. ಇದೇ ಸಂದರ್ಭ ಗುತ್ತಿಗೆದಾರರು ಮಾರ್ಚ್‌ನ ಒಳಗಡೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ.